Advertisement

ಬಾಗಿಲನುತೆರೆದು ದರುಶನವಕೊಡು…

02:59 PM Oct 02, 2020 | Suhan S |

ಅಕ್ಟೋಬರ್ 15 ರಿಂದ ಚಿತ್ರ ಮಂದಿರಗಳು   ತೆರೆಯಬಹುದು …. – ಕೇಂದ್ರ ಸರ್ಕಾರ ಹೀಗೊಂದು ಅನುಮತಿ ನೀಡುತ್ತಿದ್ದಂತೆ ಸಿನಿಮಾ ಮಂದಿಯ ಮೊಗದಲ್ಲಿ ನಗುಮೂಡಿದೆ. ಮುಖ್ಯವಾಗಿ ಚಿತ್ರಮಂದಿರ ಮಾಲೀಕರು ಖುಷಿಯಾಗಿದ್ದಾರೆ. ಅದಕ್ಕೆಕಾರಣ ಬರೋಬ್ಬರಿ ಏಳು ತಿಂಗಳು ಸಿನಿಮಾ ಇಲ್ಲದೇ, ಪ್ರೇಕ್ಷಕರ ಹರ್ಷೋದ್ಗಾರವಿರಲ್ಲದೇ, ನಿರ್ವಾತ ಏರ್ಪಟ್ಟಿತ್ತು. ಚಿತ್ರಮಂದಿರಗಳುಕೂಡಾ ಬಿಕೋ ಎನ್ನುತ್ತಿದ್ದವು. ಆದರೆ, ಈಗ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಸಿಕ್ಕಿದೆ. ಇಷ್ಟು ದಿನ ಖಾಲಿ ಖಾಲಿಯಾಗಿ, ಧೂಳು ತುಂಬಿದ್ದ ಚಿತ್ರಮಂದಿರಗಳು ಮತ್ತೆ ರಂಗೇರಲಿವೆ.

Advertisement

ಕನ್ನಡ ಚಿತ್ರರಂಗದ ವಿಷಯಕ್ಕೆ ಬರೋದಾದರೆ ಸಿನಿಮಾಗಳ ಬಿಡುಗಡೆಗೆ ಪ್ರಮುಖ ಕೇಂದ್ರವಾಗಿರೋದುಕೆ.ಜಿ.ರಸ್ತೆ. ಈ ರಸ್ತೆಯಲ್ಲಿರುವ ಭೂಮಿಕಾ, ಮೇನಕಾ, ನರ್ತಕಿ, ಸಂತೋಷ್‌, ಸ್ವಪ್ನ, ತ್ರಿವೇಣಿ, ಅನುಪಮಾ, ಮೂವಿಲ್ಯಾಂಡ್‌, ಅಭಿನಯ ಚಿತ್ರಮಂದಿರಗಳುಕೆ.ಜಿ.ರಸ್ತೆಯ ಪ್ರಮುಖ ಚಿತ್ರಮಂದಿರಗಳು. ಇದರಲ್ಲಿ ಯಾವುದಾದರೊಂದು ಚಿತ್ರಮಂದಿರಗಳನ್ನು ಪ್ರಮುಖವಾಗಿಟ್ಟುಕೊಂಡು ಸಿನಿಮಾ ರಿಲೀಸ್‌ ಮಾಡಿದರೇನೇ ಅದು ಶಾಸ್ತ್ರೋಕ್ತ ಬಿಡುಗಡೆ ಎಂಬ ನಂಬಿಕೆ ಸಿನಿಮಾ ಮಂದಿಯದ್ದು. ಅದೇಕಾರಣದಿಂದ ಈ ಚಿತ್ರಮಂದಿರಗಳಲ್ಲಿಸಿನಿಮಾ ಬಿಡುಗಡೆ ಮಾಡಲು ಪೈಪೋಟಿ ನಡೆಯುತ್ತದೆ.ಕೊನೆ ಪಕ್ಷ ಒಂದೆರಡು ಶೋ ಆದರೂ ಸಿಗಲೇಬೇಕೆಂದು ಹೋರಾಡುವ ಚಿತ್ರತಂಡಗಳು ಇವೆ. ಇದಕ್ಕೆಕಾರಣ ಕೆ.ಜಿ.ರಸ್ತೆಯ ಸುತ್ತಮುತ್ತಲಿನ ವ್ಯಾಪಾರ-ವಹಿವಾಟು.

ಮುಖ್ಯವಾಗಿ ಈ ರಸ್ತೆಯ ಸುತ್ತಮುತ್ತ ಸಾಕಷ್ಟು ವಾಣಿಜ್ಯ ವಹಿವಾಟುಗಳು ನಡೆಯುತ್ತವೆ. ಜನರ ಓಡಾಟ ಹೆಚ್ಚು. ಜೊತೆಗೆ ನಗರದ ಪ್ರಮುಖ ಬಸ್ಸು ನಿಲ್ದಾಣ ಮೆಜೆಸ್ಟಿಕ್‌ಕೂಡಾ ಈ ಚಿತ್ರಮಂದಿರಗಳಿಂದ ಅಣತಿ ದೂರದಲ್ಲಿವೆ. ಹೀಗಾಗಿ, ಜನರ ಸಂಚಾರ ಹೆಚ್ಚಿರುವುದರಿಂದ ಇಲ್ಲಿನ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ಪ್ಲಸ್‌ ಎಂಬ ಲೆಕ್ಕಾಚಾರವಿದೆ. ಆದರೆ,ಕಳೆದ ಆರು ತಿಂಗಳಿನಿಂದ ಮುಚ್ಚಿರುವ ಚಿತ್ರಮಂದಿರಗಳು ಈಗ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿವೆ. ಬಹುತೇಕ ಚಿತ್ರಮಂದಿರಗಳನ್ನು ಈ ಆರು ತಿಂಗಳಲ್ಲಿ ಸುಸ್ಥಿತಿಯಲ್ಲಿಡಲು ಚಿತ್ರಮಂದಿರ ಮಾಲೀಕರು ಸಿಬ್ಬಂದಿ ಪ್ರಯತ್ನಿಸಿದ್ದಾರೆ. ಆದರೆ,ಕೊರೊನಾ ಮುನ್ನೆಚ್ಚರಿಕಾಕ್ರಮ ವಹಿಸಬೇಕಾಗಿರುವುದರಿಂದ ಆ ಕುರಿತಾದ ಪೂರ್ವತಯಾರಿ ನಡೆಯುತ್ತಿದೆ.  ಸಿನಿಮಾ ಪ್ರದರ್ಶನವಾದ ನಂತರ ಚಿತ್ರಮಂದಿರಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳಬಾರದೆಂಬ ಕಾರಣಕ್ಕೆ ಚಿತ್ರಮಂದಿರ ಮಾಲೀಕರು ಆ ಕುರಿತು ಗಮನ ಹರಿಸುತ್ತಿದ್ದಾರೆ.

ನವೀಕರಣದತ್ತ ಅನುಪಮಾ: ಕೆ.ಜಿ.ರಸ್ತೆಯ ಪ್ರಮುಖ ಚಿತ್ರಮಂದಿರಗಳಲ್ಲಿ ಅನುಪಮಾ ಕೂಡಾ ಒಂದು. ಸಾಕಷ್ಟು ಸ್ಟಾರ್‌ ಸಿನಿಮಾಗಳು ಹೊಸಬರ ಸಿನಿಮಾಗಳು ಈ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. . ಆದರೆ, ಈ ಚಿತ್ರಮಂದಿರ ದಲ್ಲಿ ಕೇಳಿಬರುತ್ತಿದ್ದ ‌ ಒಂದು ದೂರೆಂದರೆ ಸೀಟು ಸರಿಯಿಲ್ಲ ಸೌಂಡ್ ಸಿಸ್ಟಂ,ಸ್ಕ್ರೀನದ ಕ್ಲಾರಿಟಿ ಇಲ್ಲ ಎಂಬುದಾಗಿತ್ತು. ಆದರೆ, ಈಗ ಅನುಪಮಾ ಚಿತ್ರಮಂದಿರ ನವೀಕರಣವಾಗುತ್ತಿದೆ. ಹೊಸ ಸೀಟು ಅಳವಡಿಸುವ ಜೊತೆಗ ಸ್ಕ್ರೀನ್‌, ಸೌಂಡ್‌ ಸಿಸ್ಟಂನಲ್ಲೂ ಬದಲಾವಣೆ ಮಾಡಲಾಗುತ್ತಿದೆ.

ಈ ಮೂಲಕ ಅನುಪಮಾ ನವನವೀನವಾಗಿ ಪ್ರೇಕ್ಷಕರನ್ನು ಬರಮಾಡಿಕೊಳ್ಳಲು ಸಿದ್ಧವಾಗುತ್ತಿದೆ. ಇದೊಂದೇ ಅಲ್ಲ, ರಾಜ್ಯದ ಹಲವು ಚಿತ್ರಮಂದಿರಗಳು ಕೂಡಾ ಮತ್ತೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಚಿತ್ರಮಂದಿರಗಳನ್ನು ನವೀಕರಣ ಮಾಡಲು ಮುಂದಾಗುತ್ತಿವೆ. ಲಾಕ್‌ಡೌನ್‌ ಬಳಿಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯೋದುಕಷ್ಟದಕೆಲಸ. ಹಾಗಾಗಿ, ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ಬೇಕಾದ ಎಲ್ಲಾ ಅನುಕೂಲಗಳನ್ನು ಮಾಡಿಕೊಡಲು ಚಿತ್ರಮಂದಿರ ಮಾಲೀಕರ ಸರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗ ಬೇಕಾಗಿರೋದು ಪ್ರೇಕ್ಷಕರ ಸಹಕಾರ. ಪ್ರೇಕ್ಷಕ ಮುಕ್ತ ಮನಸ್ಸಿನಿಂದ ಚಿತ್ರಮಂದಿರಕ್ಕೆ ಹೋಗಿ, ಮುನ್ನೆಚ್ಚರಿಕೆಯೊಂದಿಗೆ ಸಿನಿಮಾ ನೋಡಿ ಪ್ರೋತ್ಸಾಹಿಸಿದಾಗ ಮಾತ್ರ ಚಿತ್ರರಂಗ ಮತ್ತೆ ಮೊದಲಿನಂತಾಗಲು ಸಾಧ್ಯ.

Advertisement

 

– ರವಿ ರೈ

Advertisement

Udayavani is now on Telegram. Click here to join our channel and stay updated with the latest news.

Next