Advertisement
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿದ ದೇಶದ ವಿವಿಧ ಕಡೆಗಳಿಂದ ಬಂದ ಸುಮಾರು 50 ಕರಕುಶಲ ಕರ್ಮಿಗಳು ಮತ್ತು ಕಲಾವಿದರು ಈ ಸಂಕ್ರಾಂತಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಪುರುಷರ ಮತ್ತು ಮಹಿಳೆಯರ ಉಡುಪುಗಳು, ಸೀರೆಗಳು, ಶಾಲ್‌ಗಳು, ವಿಸ್ತಾರವಾದ ಶ್ರೇಣಿಯ ಜೈಪುರ್, ಗುಜರಾತ್‌ನ ಕೈಮಗ್ಗದ ಜವಳಿ ಮತ್ತು ಕಾಟನ್ ಸೀರೆಗಳು ಇಲ್ಲಿದ್ದು, ಲಕ್ನೋದ ಶಿಕನ್ ಕಸೂತಿ ಕುರ್ತಾಗಳು, ಸಿಲ್ಕ್ ಕುರ್ತಾಗಳು, ಜಾಕೆಟ್, ಸಿಲ್ಕ್ ಸ್ಕಾಫ್ìಗಳು ಇಲ್ಲಿವೆ. ಅಲ್ಲದೇ ಆಭರಣಗಳು, ವರ್ಣಚಿತ್ರಗಳು, ಲೋಹದ ವಸ್ತುಗಳು, ಮರದ ಕೆತ್ತನೆ ವಸ್ತುಗಳು ಇಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿವೆ. ಇದಲ್ಲದೇ ವಿಶೇಷವಾಗಿ ಬೆಂಗಳೂರಿನ ಓಕಳೀಪುರಂನ ನೇಕಾರರ ನೇಯ್ಗೆಯ ಕಲೆ ಇಲ್ಲಿ ಪ್ರದರ್ಶನಕ್ಕಿದೆ.
ಪ್ರವೇಶ: ಉಚಿತ
ಸಂಪರ್ಕ: 080-25584083/84, 9448071867