Advertisement
ಹಿಂದೆ ವಸ್ತ್ರ ವಿನ್ಯಾಸವೆಂಬುದು ಕೇವಲ ಕೇಲವರಿಗಷ್ಟೇ ಆಸಕ್ತಿ ವಿಷಯವಾಗಿತ್ತು, ಆದರೆ ಇಂದು ಹೋಬಿಯಾಗುತ್ತಿದೆ. ಗಲ್ಲಿ ಗಲ್ಲಿಗಳಲ್ಲಿ ವಿನ್ಯಾಸಕರು ಹುಟ್ಟಿಕೊಳ್ಳುತ್ತಿದ್ದಾರೆ. ಅವರ ಕೈ ಚಳಕ ತೊಡುವ ಉಡುಗೆಯ ಮಾಟದಲ್ಲಿ ಬಿಂಬಿತವಾಗುತ್ತಿದೆ. ಕ್ರಿಯೆಟಿವ್ ಥಿಂಕ್‌ಗಳು ವಿನೂತನ ಶೈಲಿಯ ವಿನ್ಯಾಸಗಳನ್ನು ಹುಟ್ಟು ಹಾಕಬಲ್ಲವು ಎಂಬುದಕ್ಕೆ ಈಗಿರುವ ವಸ್ತ್ರ ವಿನ್ಯಾಸಕರೇ ಕಾರಣ.
ಒಬ್ಬ ವಸ್ತ್ರ ವಿನ್ಯಾಸಕಾರನಿಗೆ ಇರಬೇಕಾದ ಬಹು ಮುಖ್ಯ ಲಕ್ಷಣವೆಂದರೆ ಒತ್ತಡದಲ್ಲಿಯೂ ಕೂಡ ಕೆಲಸ ಮಾಡುವ ಸಾಮರ್ಥ್ಯ ಮತ್ತು ಆಧುನಿಕ ಫ್ಯಾಶನ್‌ಗಳ ಜ್ಞಾನದೊಂದಿಗೆ ಉತ್ತಮ ಕೌಶಲಗಳನ್ನು ಹೊಂದಿರಬೇಕು. ಅದರ ಜೊತೆಗೆ ವಸ್ತ್ರಗಳು ಉತ್ಪಾದನೆಯಾಗುವ ಪ್ರಕ್ರಿಯೆಗಳು ತಿಳಿದಿರಬೇಕು. ಕೋರ್ಸ್‌ಗಳು
ವಸ್ತ್ರ ವಿನ್ಯಾಸಕ್ಕಾಗಿಯೇ ಹಲವಾರು ರೀತಿಯ ಕೋರ್ಸ್‌ಗಳಿವೆ, ಡಿಗ್ರಿ, ಡಿಪ್ಲೋಮಾಗಳಲ್ಲಿ ಫ್ಯಾಶನ್ ಡಿಸೈನಿಂಗ್ ಆಯ್ದುಕೊಂಡು ಬಳಿಕ ಇಂರ್ಟನ್‌ಶಿಪ್ ಮಾಡಬಹುದು. ಅದಲ್ಲದೆ ವಿವಿಧ ಆನ್ ಲೈನ್ ಮಾರುಕಟ್ಟೆಗಳಿಗೂ ಕೂಡ ಬೇಡಿಕೆ ಹೆಚ್ಚಾಗುತ್ತಿವೆ. ಅದಲ್ಲದೆ ಯುಟ್ಯೂಬ್ ಮುಂತಾದ ಆ್ಯಪ್‌ಗ್ಳಲ್ಲಿಯೂ ಕೂಡ ವಸ್ತ್ರ ವಿನ್ಯಾಸದ ಬಗ್ಗೆ ಮಾಹಿತಿ ಇದ್ದು ಯಾರ ಸಹಾಯವಿಲ್ಲದೆ ಮನೆಯಲ್ಲಿಯೇ ಕುಳಿತು ಕಲಿಯಲು ಅವಕಾಶವಿದೆ.
Related Articles
ತಾರೆಯರು, ಉದ್ಯಮಿಗಳು, ಫ್ಯಾಶನ್ ಪ್ರೇಮಿಗಳಿಗೆ ವಸ್ತ್ರ ವಿನ್ಯಾಸ ಮಾಡಲು ಬೇಡಿಕೆ ಹೆಚ್ಚಾಗುತ್ತಿವೆ. ನೀವು ನಿಮ್ಮ ಕ್ರಿಯಾಶೀಲತೆಯಿಂದ ತಯಾರಿಸುವ ವಿನ್ಯಾಸಕ್ಕೆ ಯಾವ ರೀತಿಯಲ್ಲಿ ಸ್ಪಂದನೆ ನೀಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದ್ದು ಬರುವ ಆದಾಯ ಕೂಡ ಅದರ ಮೇಲೆ ನಿರ್ಧಾರವಾಗುತ್ತದೆ.
Advertisement
ವಿಧಗಳುವೇಷಭೂಷಣಕಾರರಲ್ಲಿಯೂ 3 ವಿಧಗಳಿವೆ. ಸ್ವತಂತ್ರ, ವಸತಿ ಮತ್ತು ಶೈಕ್ಷಣಿಕ. ಸ್ವತಂತ್ರ ವಿನ್ಯಾಸಕಾರರು ನಿರ್ದಿಷ್ಟ ಉತ್ಪಾದನೆಗಾಗಿ ರಂಗಭೂಮಿ, ನೃತ್ಯ ಕಲಾವಿದರಿಗೆ ವಿನ್ಯಾಸಕರಾಗಿ ನೇಮಕಗೊಂಡಿರುತ್ತಾರೆ ಇವರು ಸ್ವತಂತ್ರ ಉದ್ಯೋಗಿಗಳಾಗಿದ್ದು ಏಕಕಾಲದಲ್ಲಿ ಅನೇಕ ಕಂಪೆನಿ ಅಥವಾ ಕಲಾವಿದರಿಗೆ ವಿನ್ಯಾಸಕಾರರಾಗಿರಬಹುದು. ವಸತಿ ವಿನ್ಯಾಸಕರು ಕೆಲವು ಕಂಪೆನಿಗಳಿಗೆ ಒಪ್ಪಂದದ ಮೇರೆಗೆ ಆಯೋಜಿತಗೊಂಡಿದ್ದು ಇಂತಿಷ್ಟು ವರ್ಷಗಳಿಗೆ ಆ ಕಂಪೆನಿಗಳಲ್ಲಿ ನಿರ್ಬಂದನೆಗಳಿಗೆ ತಕ್ಕಂತೆ ಕೆಲಸ ಮಾಡುತ್ತಾರೆ. ಶೈಕ್ಷಣಿಕ ವಿನ್ಯಾಸಕರು ಪ್ರಾಧ್ಯಾಪಕರಾಗಿ ಆಯೋಜನೆಗೊಂಡಿರುತ್ತಾರೆ. ಪ್ರೀತಿ ಭಟ್ ಗುಣವಂತೆ