ವೆನೆಜುವೆಲಾ: ಕಳೆದ ವರ್ಷ ವೆನೆಜುವೆಲಾದಲ್ಲಿ ಒಂದು ಕಪ್ ಕಾಫಿಗೆ 2300 ಬೊಲಿವರೆಸ್ ಆಗಿತ್ತು. ಹಣದುಬ್ಬರ ವಿಪರೀತವಾಗಿದ್ದರ ಪರಿಣಾಮ ಕಾಫಿ ಬೆಲೆ ಈಗ 20 ಲಕ್ಷ ಬೊಲಿವರೆಸ್‌ಗೆ ಏರಿಕೆಯಾಗಿದೆ. ಹೀಗಾಗಿ ಹಣದುಬ್ಬರ ಇಳಿಕೆ ಮಾಡುವುದರ ಬದಲಿಗೆ ಅಲ್ಲಿನ ಸರಕಾರ 20,00,000 ದಲ್ಲಿನ ಕೊನೆಯ 5 ಸೊನ್ನೆಯನ್ನು ತೆಗೆದುಹಾಕಿದೆ. ಹೀಗಾಗಿ ಈಗ ಅಲ್ಲಿನ ಜನರು ಕಪ್ ಕಾಫಿಗೆ 20 ಬೊಲಿವರೆಸ್ ಕೊಡ ಬೇಕಿದೆ. ಅಂದರೆ ಭಾರತದ ರೂಪಾ ಯಿಯಲ್ಲಿ ಕಾಫಿ ಮೌಲ್ಯ 1,140.
ಕರೆನ್ಸಿಯಲ್ಲಿ 2 ಸೊನ್ನೆ ತೆಗೆದುಹಾಕುವ ಈ ಘೋಷಣೆಯನ್ನು ಅಧ್ಯಕ್ಷ ನಿಕೊಲಾಸ್ ಮಾಡ್ಯುರೋ ಮಾಡಿದ್ದಾರೆ. ಹೊಸ ಕರೆನ್ಸಿ ಆಗಸ್ಟ್‌ನಿಂದ ಜಾರಿಗೆ ಬರಲಿದೆ. ಅಲ್ಲಿಯ ವರೆಗೆ ಹಣದುಬ್ಬರ ಇನ್ನಷ್ಟು ಏರಿರುತ್ತದೆ.
1 ಸಾವಿರದಿಂದ 1 ಲಕ್ಷ ಮುಖಬೆಲೆಯ ಬೊಲಿವರ್ ಫುಯೆರ್ಟೆ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗುತ್ತದೆ. ಬದಲಿಗೆ ಬೊಲಿವರ್ ಸುಬೆರಾನೋ ಎಂಬ ಎರಡರಿಂದ 500 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಗುತ್ತದೆ. ಇದರ ಜೊತೆಗೆ ಹೊಸ ನಾಣ್ಯಗಳನ್ನೂ ಟಂಕಿಸಲು ನಿರ್ಧರಿಸಲಾಗಿದೆ.
ವೆನೆಜುವೆಲಾ ಆರ್ಥಿಕ ತಜ್ಞರು ಈ ಕ್ರಮವನ್ನು ಟೀಕಿಸಿದ್ದು, ನಿಜವಾದ ಸಮಸ್ಯೆಗೆ ಇದು ಪರಿಹಾರವಲ್ಲ. ದೂರದೃಷ್ಟಿ ಇಲ್ಲದ ಕ್ರಮ ಇದು ಎಂದಿದ್ದಾರೆ. ಒಂದು ವೇಳೆ ಹಣದುಬ್ಬರ ನಿಯಂತ್ರಿಸಲು ಸರಕಾರದಿಂದ ಸಾಧ್ಯವಾಗದಿ ದ್ದರೆ, ಮುಂದಿನ ಒಂದೆರಡು ವಾರಗಳಲ್ಲೇ ಇನ್ನೂ ಐದು ಸೊನ್ನೆಗಳನ್ನು ತೆಗೆಯಬೇಕಾ ಗುತ್ತದೆ ಎಂದೂ ಎಚ್ಚರಿಸಿದ್ದಾರೆ.
ಸದ್ಯ ವೆನೆಜುವೆಲಾ ಹಣದುಬ್ಬರ ಶೇ.10 ಲಕ್ಷದಷ್ಟಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಊಹಿಸಿದೆ. ಇದು 1920ರಲ್ಲಿ ಜರ್ಮನಿ, 2000 ಇಸ್ವಿಯಲ್ಲಿ ಜಿಂಬಾಬ್ವೆ ಯಲ್ಲಿನ ಹಣದುಬ್ಬರಕ್ಕೆ ಸಮನಾಗಿರುತ್ತದೆ.