Advertisement
ನಿಗಮದ ಪ್ರಧಾನ ವ್ಯವಸ್ಥಾಪಕ ನಾಗೇಶ್, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಮಂಜುಳಾ ಮತ್ತು ವ್ಯವಸ್ಥಾಪಕ ಸುಬ್ಬಯ್ಯ ಬಂಧಿತರು. ಬಡ ಪ.ಪಂಗಡದ ಭೂರಹಿತ ರೈತರಿಗೆ ಸರ್ಕಾರದಿಂದಭೂಮಿ ಖರೀದಿಸಿ ನೀಡುವ ಯೋಜನೆಯನ್ನು ವಾಲ್ಮೀಕಿ ನಿಗಮವು ಭೂ ಒಡೆತನ ಯೋಜನೆ ಮೂಲಕ ಮಾಡುತ್ತಿದೆ. ಈ ಯೋಜನೆಯಲ್ಲಿ ಅಕ್ರಮ ನಡೆಯುತ್ತಿದ್ದು, ಕಡಿಮೆ ಗುಣಮಟ್ಟ ಮತ್ತು ಕಡಿಮೆ ಬೆಲೆಯ ಭೂಮಿಯನ್ನು ಹೆಚ್ಚಿನ ಬೆಲೆಗೆ ಖಾಸಗಿ ಭೂ ಮಾಲೀಕರಿಂದ ಪ್ರತಿ ಎಕರೆಗೆ 4 ರಿಂದ 5 ಲಕ್ಷ ರೂ. ಬೆಲೆಗೆ ಖರೀದಿಸುತ್ತಿರುವ ಮಾಹಿತಿ ಇತ್ತು. ಈ ಮೂಲಕ ಬರುತ್ತಿದ್ದ ಹೆಚ್ಚುವರಿ ಹಣವನ್ನು ಮಧ್ಯವರ್ತಿಗಳು ಮತ್ತು ಅಧಿಕಾರಿಗಳುಹಂಚಿಕೊಳ್ಳುತ್ತಿದ್ದಾರೆ. ಈ ರೀತಿಯ ಭೂ ಒಡೆತನ ಯೋಜನೆಯ ಒಂದು ಪ್ರಕರಣದಲ್ಲಿ ಮಾರ್ಚ್ ತಿಂಗಳ ದಿನಾಂಕ ಉಲ್ಲೇಖೀಸಿ ಕೆಲವು ಜಿಲ್ಲೆಗಳಿಗೆ ಹಣವನ್ನು ಬಿಡುಗಡೆ ಮಾಡಲು ಕಡತ ಸಿದ್ಧವಾಗಿತ್ತು. ಬಿಡುಗಡೆಯಾಗುವ ಮೊತ್ತದಲ್ಲಿ ಲಂಚದ ಹಣವನ್ನು ಕಚೇರಿಯ ವ್ಯವಸ್ಥಾಪಕ ಸುಬ್ಬಯ್ಯ ಪಡೆದುಕೊಂಡು, ಬಳಿಕ ಪ್ರಧಾನ ವ್ಯವಸ್ಥಾಪಕ ನಾಗೇಶ್ ಗೆ ತಲುಪಿಸಿದ್ದರು.
Advertisement
ಭ್ರಷ್ಟಾಚಾರ: ಮೂವರು ಅಧಿಕಾರಿಗಳ ಬಂಧನ
01:30 PM Aug 29, 2020 | Suhan S |
Advertisement
Udayavani is now on Telegram. Click here to join our channel and stay updated with the latest news.