Advertisement
ಉಳಿದಿರುವ ಒಂದೂವರೆ ವರ್ಷದ ಅವಧಿಯಲ್ಲಿ ಸ್ಥಾನ ಗಿಟ್ಟಿಸಲು ಆಕಾಂಕ್ಷಿತರು ಲಾಬಿ ಆರಂಭಿಸಿದ್ದಾರೆ. ಈಗಾಗಲೇ ಒಂದೂವರೆ ವರ್ಷ ಪೂರೈಸಿರುವವರನ್ನು ಬದಲಾವಣೆ ಮಾಡುವ ಸಾಧ್ಯತೆ ಇದ್ದು ಆಕಾಂಕ್ಷಿಗಳ ದಂಡೇಉದ್ದದಿದೆ.ಆದರೆ,ಈ ಬಾರಿಪಕ್ಷದ ನಿಷ್ಠಾವಂತಕಾರ್ಯಕರ್ತರಿಗೆ ಲಭಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕೆ.ಶ್ರೀನಿವಾಸ್‌ರಿಗೆ ಒಲಿದಿತ್ತು. ಮೈಷುಗರ್‌ಕಾರ್ಖಾನೆಗೆ ಅನಿರೀಕ್ಷಿತವಾಗಿ ಅಧ್ಯಕ್ಷ ಸ್ಥಾನಕ್ಕೆ ಶಿವ ಲಿಂಗೇಗೌಡರನ್ನು ನೇಮಿಸಲಾಗಿತ್ತು. ಆದರೆ,ಈ ಬಾರಿಯೂ ಆಕಾಂಕ್ಷಿತರು ತಮಗೆ ಸಿಗುವ ನಿರೀಕ್ಷೆಯಲ್ಲಿದ್ದಾರೆ. ನಾಮನಿರ್ದೇಶಕ ಸ್ಥಾನಗಳಿಗೂ ಆಕಾಂಕ್ಷಿತರ ದಂಡು: ಜಿಲ್ಲೆಯಲ್ಲಿ ಖಾಲಿ ಇರುವ ಸ್ಥಳೀಯ ಸಂಸ್ಥೆಗಳಲ್ಲಿನ ನಾಮನಿರ್ದೇಶನಗಳಿಗೂ ಆಕಾಂಕ್ಷಿತರು ಹೆಚ್ಚಾಗಿದ್ದಾರೆ. ಮನ್‌ಮುಲ್ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ಟಿಎಪಿಸಿಎಂಎಸ್, ಎಪಿಎಂಸಿ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ನಾಮ ನಿರ್ದೇಶಕರ ಸ್ಥಾನಗಳಿಗೆ ಪೈಪೋಟಿ ಆರಂಭವಾಗಿದೆ. ಮುಂದಿನ ತಿಂಗಳೊಳಗೆ ಆಯ್ಕೆ ನಡೆಯಲಿದೆ.
Related Articles
Advertisement
ನಿಗಮ, ಮಂಡಳಿಗಳಲ್ಲಿ ಜಿಲ್ಲೆಗೆ ಸಿಗದ ಪ್ರಾತಿನಿಧ್ಯ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ನಿಗಮ, ಮಂಡಳಿಗಳಲ್ಲಿ ಮಂಡ್ಯ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಕಳೆದ ಬಾರಿ ಯಡಿಯೂರಪ್ಪ ಸರ್ಕಾರದಲ್ಲೂ ಜಿಲ್ಲೆಯ ಮುಖಂಡರು ನಿಗಮ ಮಂಡಳಿಗಳಿಗೆ ಲಾಬಿ ನಡೆಸಿದ್ದರು. ಆದರೆ, ಯಾರಿಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ. ಈ ಬಾರಿಯಾದರೂ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಮುಖಂಡರಿದ್ದಾರೆ.
ನಿಗಮ, ಮಂಡಳಿ ಸ್ಥಾನಕ್ಕೆ ಇನ್ನಿಲ್ಲದ ಪೈಪೋಟಿಕಳೆದ ಬಾರಿ ರಾಜ್ಯದ ನಿಗಮ, ಮಂಡಳಿ ಜಿಲ್ಲೆಯ ಒಬ್ಬರಿಗೂ ಸಿಕ್ಕಿಲ್ಲ. ಆದರೆ ಇಲ್ಲಿನ ಮುಖಂಡರು ಲಾಬಿ ನಡೆಸುತ್ತಲೇ ಬಂದಿದ್ದಾರೆ. ಈ ಬಾರಿಯೂ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಚ್.ಪಿ.ಮಹೇಶ್, ಬಿಜೆಪಿ ಪರಿಷತ್ ಸದಸ್ಯ ಡಾ.ಸಿದ್ದರಾಮಯ್ಯ, ಮಾಜಿ ಸಚಿವ ಬಿ.ಸೋಮಶೇಖರ್, ಯಮಂದೂರು ಸಿದ್ದರಾಜು, ಮದ್ದೂರಿನ ಸಾದೋಳಲು ಸ್ವಾಮಿ ಹೆಸರುಕೇಳಿ ಬರುತ್ತಿದೆ. ಅದರಲ್ಲೂ ಡಾ.ಸಿದ್ದರಾಮಯ್ಯ ಪರಿಸರ ಮಾಲಿನ್ಯ
ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.2018ರ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿ ನಡುವೆಯೂ ಬಿಜೆಪಿಗೆ ಅತಿ ಹೆಚ್ಚು ಮತ ತಂದುಕೊಟ್ಟಿದ್ದರು. ಅಲ್ಲದೆ, ಪಕ್ಷದಲ್ಲಿ ಸಕ್ರಿಯಕಾರ್ಯಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಸರ್ಕಾರ ಈ ಬಾರಿಯಾದರೂ ಮಂಡ್ಯ ಜಿಲ್ಲೆಗೆ ಮಣೆ ಹಾಕಲಿದೆಯೇಕಾದು ನೋಡಬೇಕು. ಅರವಿಂದ್, ನಂಜುಂಡೇಗೌಡರ ಹೆಸರು ಮುಂಚೂಣಿ
ಕಳೆದ ಬಾರಿ ಮೂಡಾ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿತರಲ್ಲಿ ಬಿಜೆಪಿ ನಗರ ಘಟಕ ಮಾಜಿ ಅಧ್ಯಕ್ಷ ಎಚ್.ಆರ್. ಅರವಿಂದ್, ಸಂಘಟನಾತ್ಮಕವಾಗಿ ಪಕ್ಷವನ್ನು ನಗರದಲ್ಲಿ ಸಂಘಟಿಸಿದ್ದರು. ನಗರಸಭೆ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದಿದ್ದಾರೆ. ಪಕ್ಷಕ್ಕಾಗಿ ಶ್ರಮಿಸಿದ ಇವರಕೆಲಸ ರಾಜ್ಯ ನಾಯಕರ ಗಮನ ಸೆಳೆದಿದೆ. ಮೂಡಾ ಅಧ್ಯಕ್ಷ ಸ್ಥಾನಕ್ಕೆ ಇವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಸಚಿವಕೆ.ಸಿ.ನಾರಾಯಣ ಗೌಡ ಅವರ ಮನವೊಲಿಕೆಯಿಂದಕೆ.ಆರ್.ಪೇಟೆಯಕೆ.ಶ್ರೀನಿವಾಸ್‌ರ ಪಾಲಾಗಿತ್ತು. ನಂತರ ಸಚಿವ ನಾರಾಯಣಗೌಡರೇ ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನ ನೀಡುವ ಭರವಸೆ ನೀಡಿದ್ದರು. ಈ ಬಾರಿಯೂ ಅರವಿಂದ್ ಹೆಸರು ಮುಂಚೂಣಿಯಲ್ಲಿದ್ದು, ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಯಲ್ಲಿದ್ದಾರೆ.ಕಳೆದ ಬಾರಿ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರೈತ ಮುಖಂಡಕೆ.ಎಸ್.ನಂಜುಂಡೇಗೌಡ ಅವರು ಪೈಪೋಟಿ ನಡೆಸಿದ್ದರು. ಆದರೆ,ಸಿಗಲಿಲ್ಲ. ಶ್ರೀರಂಗಪಟ್ಟಣದಲ್ಲಿ ತನ್ನದೇ ಆದ ರಾಜಕೀಯ ಪ್ರಾಬಲ್ಯ, ರೈತ ಮುಖಂಡನಾಗಿ ಗುರುತಿಸಿಕೊಂಡಿರುವ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡರು, ವಿಧಾನಸಭಾ ಚುನಾವಣೆಗಳಲ್ಲಿ ನಿರಂತರ ಸೋಲಿನಿಂದ ವಿಚಲಿತರಾಗದೆ ಇಂದಿಗೂ ಪಕ್ಷ ಸಂಘಟನೆ ಮಾಡುತ್ತಾ ರೈತರ ಪರ ದುಡಿಯಲು ಸಿದ್ಧರಾಗಿದ್ದು, ಈ ಬಾರಿಯಾದರೂ ಕಾಡಾ ಅಧ್ಯಕ್ಷ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಕಳೆದ ಬಾರಿ ಸ್ಥಾನ
ನಿಗಮ, ಮಂಡಳಿ, ಜಿಲ್ಲಾ ವಿಭಾಗ ಮಟ್ಟದ ಅಧ್ಯಕ್ಷ ಸ್ಥಾನ ಹಾಗೂ ನಾಮನಿರ್ದೇಶಕ ಸ್ಥಾನಗಳಿಗೆ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಕಳೆದ ಬಾರಿ ಮಣೆ ಹಾಕಲಾಗಿತ್ತು. ಪಕ್ಷದ ಒಳಾಂತರದಿಂದಲೇ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಆಯ್ಕೆ ಮಾಡಲಾಗಿತ್ತು.ಕಳೆದ ಬಾರಿ ರಾಜಕೀಯ ಪ್ರಭಾವದಿಂದ ಮನ್‌ಮುಲ್ ನಾಮನಿರ್ದೇಶಕರಾಗಿ ಕಿಕ್ಕೇರಿ ತಮ್ಮಣ್ಣ, ಮೂಡಾ ಅಧ್ಯಕ್ಷರಾಗಿ ಕೆ.ಶ್ರೀನಿವಾಸ್, ಹೆಸರಿಲ್ಲದಿದ್ದರೂ ಮೈಷುಗರ್ ಕಾರ್ಖಾನೆ ಅಧ್ಯಕ್ಷರಾಗಿ ಶಿವಲಿಂಗೇಗೌಡ, ಎಸ್.ಎಂ.ಕೃಷ್ಣ ಆಪ್ತರಾಗಿದ್ದ ಶಿವಲಿಂಗಯ್ಯ ಅವರನ್ನುಕಾಡಾ ಅಧ್ಯಕ್ಷರಾಗಿ ನೇಮಿಸಿತ್ತು. ಈ ಬಾರಿಯೂ ಅದೇ ನಡೆದರೆ ಅಚ್ಚರಿಯಿಲ್ಲ. -ಎಚ್.ಶಿವರಾಜು