Advertisement

360ಕ್ಕೇರಿದ ಕೊರೊನಾ ಸಾವಿನ ಸಂಖ್ಯೆ: ಭಾರತದಲ್ಲಿ ಭಾರಿ ಕಟ್ಟೆಚ್ಚರ

07:39 PM Mar 20, 2020 | keerthan |

ಹೊಸದಿಲ್ಲಿ/ಬೀಜಿಂಗ್: ಮಾರಣಾಂತಿಕ ಕೊರೊನಾ ವೈರಸ್ ಗೆ ಮತ್ತಷ್ಟು ಬಲಿಯಾಗಿದೆ. ಸದ್ಯ ಈ ವೈರಸ್ ನಿಂದಾಗಿ ಸಾವನ್ನಪ್ಪಿದ್ದವರ ಸಂಖ್ಯೆ 360ಕ್ಕೇರಿದ್ದು, 2829 ಜನರಲ್ಲಿ ಈ ಕಿಲ್ಲರ್ ವೈರಸ್ ಇರುವುದು ಖಚಿತವಾಗಿದೆ ಎಂದು ವರದಿಯಾಗಿದೆ.

Advertisement

ಭಾರತದಲ್ಲಿ ಈ ವೈರಸ್ ಹಬ್ಬದಂತೆ ಸಾಕಷ್ಟು ಮುಂಜಾಗೃತಾ ಕ್ರಮ ಕೈಗೊಳ್ಳಲಾಗುತ್ತಿದೆ. ರವಿವಾರ ಭಾರತದ ಎರಡನೇ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಈ ಎರಡೂ ಪ್ರಕರಣಗಳು ಕೇರಳದಲ್ಲಿಯೇ ಪತ್ತೆಯಾಗಿದೆ.

ಚೀನಾ ನಾಗರಿಕರು ಮತ್ತು ಅಲ್ಲಿ ವಾಸವಿರುವ ವಿದೇಶಿಯರಿಗೆ ಇ-ವೀಸಾ ವಿತರಿಸುವ ವ್ಯವಸ್ಥೆಗೆ ಭಾರತವು ತಾತ್ಕಾಲಿಕ ನಿರ್ಬಂಧ ಹೇರಿದೆ. ಈಗಾಗಲೇ ವಿತರಿಸಲಾಗಿರುವ ಇ-ವೀಸಾಗಳು ಕೂಡಾ ರವಿವಾರದಿಂದ ಅಮಾನ್ಯವಾಗಿದೆ.

ಭಾರತೀಯರ ಜೊತೆ ಮಾಲ್ಡೀವ್ಸ್ ಪ್ರಜೆಗಳು ವಾಪಾಸ್
ರವಿವಾರ ವುಹಾನ್‌ನಿಂದ ಮತ್ತೆ 323 ಭಾರತೀಯರು ಏರ್‌ ಇಂಡಿಯಾ ವಿಮಾನದಲ್ಲಿ ಸ್ವದೇಶಕ್ಕೆ ಮರಳಿದ್ದಾರೆ. ಇವರೊಂದಿಗೆ ಮಾಲ್ಡೀವ್ಸ್‌ನ 7 ನಾಗರಿಕರನ್ನೂ ಕರೆತರಲಾಗಿದೆ. ಇವರೆಲ್ಲರನ್ನೂ ಸೇನೆ ನಿರ್ಮಿಸಿರುವ ನಿಗಾ ಕೇಂದ್ರಕ್ಕೆ ಕರೆದೊಯ್ದು, 2 ವಾರಗಳ ಕಾಲ ಇರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಮಾಲ್ಡೀವ್ಸ್‌ನ 7 ಮಂದಿಯನ್ನು ಭಾರತಕ್ಕೆ ಕರೆತಂದು ಮಾನವೀಯತೆ ತೋರಿದ್ದಕ್ಕೆ ಭಾರತ ಸರಕಾರಕ್ಕೆ ಅಲ್ಲಿನ ಸರಕಾರ ಟ್ವೀಟ್‌ ಮೂಲಕ ಧನ್ಯವಾದ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next