ಬೆಂಗಳೂರು: 75ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಕೋವಿಡ್ ಸಂಕಷ್ಟ ಕಾಲದಲ್ಲಿ ಪಾಲಿಕೆವ್ಯಾಪ್ತಿಯ ವಿವಿಧ ಆಸ್ಪತ್ರೆಯಲ್ಲಿ ಹಗಲು ರಾತ್ರಿ ಎನ್ನದೆಕಾರ್ಯನಿರ್ವಹಿಸಿದ ವೈದ್ಯರು ಹಾಗೂ ಪಾಲಿಕೆಯಲ್ಲಿಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆಸನ್ಮಾನಿಸಲಾಯಿತು.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿಭಾನುವಾರ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲಿಕೆಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮುಖ್ಯಆಯುಕ್ತರು ಗೌರವ್ ಗುಪ್ತ ಧ್ವಜಾರೋಹಣನೆರವೇರಿಸಿದರು.
ಬಳಿಕ, ಪಾಲಿಕೆ ಅಧಿಕಾರಿ ಮತ್ತು ನೌಕರರಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೊರೊನಾಸಂಕಷ್ಟ ಕಾಲದಲ್ಲಿ ತಮ್ಮ ಪ್ರಾಣದ ಹಂಗು ತೊರೆದುಕಾರ್ಯನಿರ್ವಹಿಸಿದ ವೈದ್ಯರು ಹಾಗೂ ಬಿಬಿಎಂಪಿವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಪಾಲಿಕೆಆಡಳಿತಾಧಿಕಾರಿರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ಗೌರವ್‌ಗುಪ್ತ ಅವರು ವೈದ್ಯರ ಕಾರ್ಯಕ್ಕೆ ಶ್ಲಾಘನೆವ್ಯಕ್ತಪಡಿಸಿದರು.
ಆರೋಗ್ಯ ಮತ್ತುಕುಟುಂಬ ಕಲ್ಯಾಣಸೇವೆಗಳ ನಿರ್ದೇಶನಾಲಯದ ಉಪ ನಿರ್ದೇಶಕಡಾ.ಎನ್. ರಾಜ್ ಕುಮಾರ್ ಹಾಗೂ ಉಪನಿರ್ದೇಶಕಿ(ಲಸಿಕೆ ಅಧಿಕಾರಿ) ಡಾ.ಬಿ.ಎನ್. ರಜನಿ,ವಿಕ್ಟೋರಿಯಾ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದಮುಖ್ಯಸ್ಥ ಡಾ.ಸ್ಮಿತ್ ಎಸ್. ಸೇಗು ಮತ್ತು ವಿಧಿ ವೈದ್ಯವಿಭಾಗದ ಪ್ರಾಧ್ಯಪಕ ಡಾ.ವೆಂಕಟ ರಾಘವ, ಕೆ.ಸಿ.ಜನರಲ್ ಆಸ್ಪತ್ರೆಯಹಿರಿಯ ತಜ್ಞವೈದ್ಯಡಾ.ಜಗದೀಶ್‌ಸಿದ್ದಪ್ಪ ಗಣಗಿ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಯಲ್ಲಿಕಾರ್ಯನಿರ್ವಹಿಸುತ್ತಿರುವ ವೈದ್ಯರನ್ನುಗೌರವಿಸಲಾಯಿತು.
ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ ವಲಯದ ಆರೋಗ್ಯಾಧಿಕಾರಿ ಡಾ.ಎಂ.ಶಿವಕುಮಾರ,ಯಲಹಂಕವಲಯದ ಆರೋಗ್ಯಾಧಿಕಾರಿ ಡಾ.ಎನ್. ಭಾಗ್ಯಲಕ್ಷಿ ¾,ಹೆಬ್ಟಾಳದ ಆರೋಗ್ಯ ವೈದ್ಯಾಧಿಕಾರಿ ಡಾ.ಆರ್.ಎಲ್.ವೇದಾವತಿ,ಆರ್.ಆರ್.ನಗರಆರೋಗ್ಯವೈದ್ಯಾಧಿಕಾರಿಡಾ.ಕೆ.ಆರ್. ಕೋಮಲಾ, ರಾಜಾಜಿನಗರ ಆರೋಗ್ಯವೈದ್ಯಾಧಿಕಾರಿ ಡಾ.ಎ.ಎಲ್. ಕಲಾವತಿದೇವಿ,ಮಹಾಲಕ್ಷಿ ¾à ಲೇಔಟ್ ಆರೋಗ್ಯ ವೈದ್ಯಾಧಿಕಾರಿಡಾ.ಡಿ. ಮಂಜುಳ, ಪಾಲಿಕೆ ಜಿಲ್ಲಾ ಮತ್ತು ಕುಟುಂಬಕಲ್ಯಾಣ ಆರೋಗ್ಯ ವೈದ್ಯಾಧಿಕಾರಿ ಡಾ. ಶೋಭಾಸುದರ್ಶನ್ ಅವರಿಗೆ ಸನ್ಮಾನಿಸಲಾಯಿತು.
ಪಾಲಿಕೆ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ,ಮನೋಜ್ ಜೈನ್, ಬಸವರಾಜ್, ಡಿ.ರಂದೀಪ್,ದಯಾನಂದ್, ರೆಡ್ಡಿ ಶಂಕರಬಾಬು, ರವೀಂದ್ರ ಹಾಗೂ ಮತ್ತಿತರ ಅಧಿಕಾರಿಗಳು ಇದ್ದರು.