ನವ ದೆಹಲಿ: ಕೋವಿಡ್ ಎರಡನೇ ನಿತ್ಯ ಹೆಚ್ಚು ಆತಂಕ ಸೃಷ್ಟಿ ಮಾಡುತ್ತಿರುವುದರ ನಡುವೆ ಸಿಂಗಾಪುರದಲ್ಲಿ ಕಾಣಿಸಿಕೊಂಡಿರುವ ಕೋವಿಡ್ ರೂಪಾಂತರಿ ವೈರಸ್ ಭಾರತದಲ್ಲಿ ಮೂರನೇ ಅಲೆಗೆ ಕಾರಣ ಆಗಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆತಂಕ ವ್ಯಕ್ತ ಪಡಿಸಿದ್ದಾರೆ.
ಸೀಂಗಾಪುರದಲ್ಲಿ ಕಾಣಿಸಿಕೊಂಡಿರುವ ಕೋವಿಡ್ ರೂಪಾಂತರಿ ಅಲೆಯ ಕಾರಣದಿಂದಾಗಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಹಾಗಾಗಿ ಆದಷ್ಟು ಬೇಗ ಈ ಬಗ್ಗೆ ಎಚ್ಚರ ವಹಿಸಿ ಎಂದು ಹೇಳುವುದರೊಂದಿಗೆ ಸಿಂಗಾಪುರದೊಂದಿಗಿನ ವಹಿವಾಟನ್ನು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಿ ಎಂದು ಕೇಂದ್ರಕ್ಕೆ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ : ಅಪಘಾತದಲ್ಲಿ ಗಂಭೀರ ಗಾಯಗೊಂಡು, ಎರಡು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಸಾವು
ಸಿಂಗಾಪುರದೊಂದಿಗಿನ ವಿಮಾನಯಾನವನ್ನು ಸ್ಥಗಿತಗೊಳಿಸಬೇಕು. ಮಕ್ಕಳಿಗೆ ಲಸಿಕೆ ಅಭಿಯಾನವನ್ನು ಆರಂಭಿಸಬೇಕು ಎಂದು ಕೇಜ್ರಿವಾಲ್ ಟ್ವೀಟ್ ಮಾಡಿ ಕೇಳಿಕೊಂಡಿದ್ದಾರೆ.
Related Articles
ಸಿಂಗಾಪುರದಲ್ಲಿ ಹೊಸ ಕೋವಿಡ್ ರೂಪಾಂತರಿ ಅಲೆ ಪತ್ತೆಯಾಗಿರುವ ಕಾರಣದಿಂದ ಸದ್ಯಕ್ಕೆ ರೆಸ್ಟೋರೆಂಟ್ ಗಳನ್ನು ಮುಚ್ಚಲಾಗಿದೆ. ವರ್ಕ್ ಫ್ರಮ್ ಹೋಮ್ ವ್ಯವಸ್ಥೆಗೆ ಒತ್ತು ನೀಡುವಂತೆ ಎಲ್ಲಾ ಕಂಪೆನಿಗಳಿಗೆ ಅಲ್ಲಿನ ಸರ್ಕಾರ ಮನವಿ ಮಾಡಿಕೊಂಡಿದೆ. 16 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಯೋಜನೆ ರೂಪಗೊಳ್ಳುತ್ತಿದ್ದು, ಶಾಲೆಗಳು ಮನೆಯಲ್ಲೇ ಕಲಿಕೆ ವಿಧಾನವನ್ನು ಬಳಸಿಕೊಳ್ಳುತ್ತಿದೆ ಎಂದು ವರದಿಗಳು ತಿಳಿಸಿವೆ.
ಮಾಸ್ಕ್ ನನ್ನು ಕಡ್ಡಾಯವಾಗಿ ಬಳಸುವಂತೆ ಅಲ್ಲಿನ ಸರ್ಕಾರ ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದು, ಮುಂದಿನ 3ರಿಂದ 6 ತಿಂಗಳ ಕಾಲ ಇದೇ ನಿಯಮವನ್ನು ಅನುಸರಿಸುವಂತೆ ತಿಳಿಸಲಾಗಿದೆ.
ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಕಳೆದ ಕೆಲವು ದಿನಗಳಿಂದ ಇಳಿಮುಖವಾಗಿದ್ದು, ಕಳೆದ ತಿಂಗಳು ಪ್ರತಿನಿತ್ಯ ದಾಖಲಾಗುತ್ತಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ 28,000ದ ವರೆಗೆ ಮುಟ್ಟಿತ್ತು. ಈಗ ಪ್ರತಿನಿತ್ಯ ಕಂಡುಬರುತ್ತಿರುವ ಪ್ರಕರಣಗಳ ಸಂಖ್ಯೆ 5,000ದಷ್ಟು ಕಂಡ ಬರುತ್ತಿದೆ.
ಇದನ್ನೂ ಓದಿ : ಬೆಡ್ ಸಿಗದೆ ಪರೆದಾಡಿದ ಸೋಂಕಿತನಿಗೆ ಆ್ಯಂಬುಲೆನ್ಸ್‌ನಲ್ಲೇ ಆಕ್ಸಿಜನ್ ವ್ಯವಸ್ಥೆ