Advertisement

ಹುಬೇ ಪ್ರಾಂತ್ಯದಲ್ಲಿ 93 ಜನರ ಸಾವು:1800 ತಲುಪಿದ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ

07:56 PM Mar 20, 2020 | keerthan |

ಬೀಜಿಂಗ್: ಮಾರಣಾಂತಿಕ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಚೀನಾದಲ್ಲಿ ಇದುವರೆಗೆ ಒಟ್ಟು 1800 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.

Advertisement

ಸೋಮವಾರ ಸಾವಿನ ಸಂಖ್ಯೆ 1789ರಷ್ಟಿತ್ತು. ಆದರೆ ಇದು ಮತ್ತಷ್ಟು ಏರಿಕೆಯಾಗಿದೆ ಎಂದು ಚೀನಾದ ಆರೋಗ್ಯ ಇಲಾಖೆ ಖಚಿತಪಡಿಸಿದೆ.

ಮೊತ್ತ ಮೊದಲು ವೈರಸ್ ಪತ್ತೆಯಾದ ಚೀನಾದ ಹುಬೇ ಪ್ರಾಂತ್ಯದಲ್ಲಿ ಸೋಮವಾರ 93 ಜನರು ಸಾವನ್ನಪ್ಪುತ್ತಿದ್ದಾರೆ. ಚೀನಾದಲ್ಲಿ ಮತ್ತಷ್ಟು ಜನರಿಗೆ ಕೊರೊನಾ ವೈರಸ್ ಮಾರಿ ತಗುಲಿದ್ದು, ಸಾವಿನ ಪ್ರಮಾಣ ಇನ್ನೂ ಹೆಚ್ಚುವ ಸಂಭವವಿದೆ.

Advertisement

Udayavani is now on Telegram. Click here to join our channel and stay updated with the latest news.

Next