Advertisement
ನಗರ ಹೊರವಲಯದ ಎಪಿಎಂಸಿ ಮಾರುಕಟ್ಟೆಗೆಶನಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರಅಧಿಕಾರಿಗಳು, ಎಪಿಎಂಸಿ ನಿರ್ದೇಶಕರು, ವ್ಯಾಪಾರಸ್ಥರು, ಹಮಾಲರ ಸಂಘದ ಪದಾಧಿಕಾರಿಗಳೊಂದಿಗೆಸಭೆ ನಡೆಸಿ ಮಾತನಾಡಿದರು.ಕೊರೊನಾ 2ನೇ ಅಲೆಯಿಂದಾಗಿ ಕರ್ಫ್ಯೂಜಾರಿಯಲ್ಲಿದ್ದು, ಬೆಳಗ್ಗೆ 10 ಗಂಟೆಯ ಬಳಿಕ ಓಡಾಟ ನಿಷೇಧಿಸಲಾಗಿದೆ.
Related Articles
Advertisement
ಹಮಾಲರ ಓಡಾಟಕ್ಕೆ ಪಾಸ್: ಜಿಲ್ಲಾಧಿಕಾರಿಡಾ.ಆರ್.ಸೆಲ್ವಮಣಿ ಪೊಲೀಸ್ ಇಲಾಖೆಯವರಿಗೂಸೂಚಿಸಿ, ಅಲ್ಲಿನ ಸಮಸ್ಯೆ ಬಗೆಹರಿಸುವಂತೆತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನಗರ ವೃತ್ತ ನಿರೀಕ್ಷಕರಂಗಶಾಮಯ್ಯ, ಪಿಎಸ್‌ಐ ಅಣ್ಣಯ್ಯ ಕೆಲಕಾಲ ಸಭೆನಡೆಸಿ ಹಲವು ಸಲಹೆ ನೀಡಿದ್ದರು. ಬಳಿಕ ಜಿಲ್ಲಾಧಿಕಾರಿಗಳು ಆಗಮಿಸಿ ಸಭೆ ನಡೆಸಿ, ರೈತರುಉತ್ತಮವಾಗಿ ಬೆಳೆ ಬೆಳೆದಿದ್ದು, ಮಾರುಕಟ್ಟೆ ವ್ಯವಸ್ಥೆಕಲ್ಪಿಸಿಕೊಡುವುದು ನಮ್ಮ ಜವಾಬ್ದಾರಿಯಾಗಿದೆ.
ಸಣ್ಣಪುಟ್ಟ ಸಮಸ್ಯೆಗಳು ಏನೇ ಇದ್ದರೂ ಅದನ್ನುಬಗೆಹರಿಸಿಕೊಳ್ಳೋಣ. ಮೊದಲಿಗೆ ಹಮಾಲರಓಡಾಟಕ್ಕೆ ಪಾಸ್ ನೀಡುವ ಕೆಲಸ ಎಪಿಎಂಸಿಯವರುಮಾಡಬೇಕು ಎಂದು ಹೇಳಿದರು.
ದುರ್ಬಳಕೆ ಮಾಡಿಕೊಳ್ಳಬೇಡಿ: ಆದರೆ, ಪಾಸ್‌ಗಳುಇದೆ ಎಂದು ಎಪಿಎಂಸಿ-ಮನೆಗೆ ಮಾತ್ರ ಓಡಾಡದೆಬೇರೆ ಕಡೆಗಳಿಗೆ ಓಡಾಟ ಮಾಡಿ ಪೊಲೀಸರಿಗೆ ಸಿಕ್ಕಿತೊಂದರೆಗೆ ಒಳಗಾಗುವುದು ಬೇಡ. ಪಾಸ್‌ಗಳನ್ನುದುರ್ಬಳಕೆ ಮಾಡಿಕೊಳ್ಳದೆ ಮಾರುಕಟ್ಟೆ ಕೆಲಸಕ್ಕೆ ಮಾತ್ರಬಳಸಿಕೊಳ್ಳಬೇಕೆಂದು ಸೂಚಿಸಿದರು.ಎಪಿಎಂಸಿ ಉಪಾಧ್ಯಕ್ಷ ವೆಂಕಟೇಶಪ್ಪ, ಎಪಿಎಂಸಿವರ್ತಕ ಪ್ರತಿನಿಧಿ ಸದಸ್ಯ ಎಎನ್‌ಆರ್ ದೇವರಾಜ್,ಎಪಿಎಂಸಿ ಕಾರ್ಯದರ್ಶಿ ಟಿ.ಎಸ್.ರವಿಕುಮಾರ್,ವ್ಯಾಪಾರಸ್ಥರ ಸಂಘದ ಕೆ.ಬಿ.ಮಾಜೀದ್, ಹಮಾಲಿಯೂನಿಯನ್ ಅಧ್ಯಕ್ಷ ಬಾಬು, ಮಂಡಿ ಮಾಲಿಕರಾದಸಿಎಂಆರ್ ಶ್ರೀನಾಥ್, ಕೆಎನ್‌ಎನ್ ಪ್ರಕಾಶ್‌ಮತ್ತಿತರರು ಉಪಸ್ಥಿತರಿದ್ದರು.