Advertisement
ಉತ್ತರ ಪ್ರದೇಶದ ಪ್ರಯಾಗ್ ರಾಜ್ನ ಶುಕ್ಲುಪುರ್ ಗ್ರಾಮದಲ್ಲಿ ಕೊರೋನಾ ದೇವಿಯ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಕೊರೋನಾಗೆ ದೇವರ ಸ್ವರೂಪ ನೀಡಿದ ಇಲ್ಲಿನ ಮಂದಿ ಕೊರೋನಾ ಮಾತೆಯನ್ನು ಪ್ರತಿಷ್ಟಾಪಿಸಿ, ಗ್ರಾಮಸ್ಥರು ಪೂಜೆ ಮಾಡುತ್ತಿದ್ದರು. ಈ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಇಲ್ಲಿನ ಜಿಲ್ಲಾಡಳಿತ ದೇವಾಲಯವನ್ನು ನೆಲಸಮ ಮಾಡಿದೆ.
Related Articles
Advertisement
ನೋಯ್ಡ ಮೂಲಕ ನಾಗೇಶ್ ಕುಮಾರ್ ಶ್ರೀವಾತ್ಸವ್ ಮತ್ತು ಜೈ ಪ್ರಕಾಶ್ ಶ್ರೀವಾತ್ಸವ ಪಾಲುದಾರಿಕೆ ಭೂಮಿಯನ್ನು ಈ ಗ್ರಾಮದಲ್ಲಿ ಹೊಂದಿದ್ದರು. ಅವರು ನೋಯ್ಡಗೆ ಮರಳುತತ್ತಿದ್ದಂತೆ ಈ ದೇವಾಲಯ ನಿರ್ಮಾಣವಾಗಿದೆ. ಭೂಮಿಯನ್ನು ಒತ್ತುವರಿ ಮಾಡುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆ ಎಂದು ನಾಗೇಶ್ ಪೊಲೀಸರಿಗೆ ದೂರು ನೀಡಿದ್ದರು.
ವಿವಾದಿತ ಜಮೀನಿನಲ್ಲಿ ಏಕಾಏಕಿ ದೇವಾಲಯ ನಿರ್ಮಿಸಿದ ಕಾರಣ ಪೊಲೀಸರು ದೇವಸ್ಥಾನವನ್ನು ಧ್ವಂಸ ಮಾಡಿದ್ದಾರೆ. ಈ ಹಿನ್ನಲೆ ಈಗ ವಿರೋಧಿ ಪಕ್ಷದ ಗುಂಪು ಪೊಲೀಸರ ವಿರುದ್ಧ ಹರಿಹಾಯ್ದಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.