ವೆಲ್ಲಿಂಗ್ಟನ್: ಸ್ಪೋಟಕ ಆಟಗಾರ ಕೋರಿ ಆ್ಯಂಡರ್ಸನ್ ನ್ಯೂಜಿಲ್ಯಾಂಡ್ ಕ್ರಿಕೆಟ್ ಗೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದ ಆ್ಯಂಡರ್ಸನ್ , ಸುದ್ದಿಯನ್ನು ಖಚಿತಪಡಿಸಿದ್ದಾರೆ. ಕಿವೀಸ್ ಕ್ರಿಕೆಟ್ ಗೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದಾರೆ.
ನ್ಯೂಜಿಲ್ಯಾಂಡ್ ಪರವಾಗಿ ಆಡಲು ತುಂಬಾ ಹೆಮ್ಮೆಪಟ್ಟಿದ್ದೇನೆ. ನಾನು ಇನ್ನಷ್ಟು ಆಡಲು, ಇನ್ನಷ್ಟು ಸಾಧಿಸಲು ಬಯಸಿದ್ದೆ. ಆದರೆ ಕೆಲವು ಸಾಧ್ಯತೆಗಳು, ಅವಕಾಶಗಳು ನಮ್ಮನ್ನು ಇನ್ನೊಂದು ದಾರಿಯತ್ತ ಮುಖಮಾಡಿಸುತ್ತದೆ ಎಂದು ಆಲ್ ರೌಂಡರ್ ಹೇಳಿದ್ದಾರೆ.
ಆ್ಯಂಡರ್ಸನ್ ಮುಂದಿನ ಕ್ರಿಕೆಟ್ ನ್ನು ಯುಎಸ್ ಎ ತಂಡದೊಂದಿಗೆ ಆಡಲು ನಿರ್ಧರಿಸಿದ್ದಾರೆ. ಅಮೆರಿಕದ ಟಿ20 ಲೀಗ್ ನೊಂದಿಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಭಾರತ- ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗವಾಸ್ಕರ್ ಸರಣಿಗಿದೆ ರೋಚಕ ಇತಿಹಾಸ!
ಕೋರಿ ಆ್ಯಂಡರ್ಸನ್ ಕಿವೀಸ್ ಪರ 93 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಎರಡನೇ ಅತೀ ವೇಗದ ಶತಕ ಬಾರಿಸಿದ ದಾಖಲೆಯನ್ನು ಆ್ಯಂಡರ್ಸನ್ ಹೊಂದಿದ್ದಾರೆ.