Advertisement

ಪ್ಯಾಂಟಿನೊಳಗೆ ಇರುವೆ ಹೊಕ್ಕಾಗ ಕಾಪಿ ಚೀಟಿ ಹೊರಕ್ಕೆ ಬಂತು!

12:08 PM May 02, 2017 | Harsha Rao |

ನಾವೆಲ್ಲರೂ ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುತ್ತಿ¨ªೆವು. ಆಗ, ವಿಸಿಟರ್‌ ಒಬ್ಬರ ಆಗಮನವಾಯಿತು. ವಿದ್ಯಾರ್ಥಿಯೊಬ್ಬ ತಾನು ಅಡಗಿಸಿಕೊಂಡಿದ್ದ ಚೀಟಿಯನ್ನು ಬಕೆಟ್‌ ಒಳಗೆ ಹಾಕಿರಲೇ ಇಲ್ಲ….

Advertisement

ನಾನಾಗ 10ನೇ ತರಗತಿಯಲ್ಲಿ ಓದುತ್ತಿದ್ದೆ. ಪರೀಕ್ಷೆ ಎಂದರೆ ನನ್ನ ಮನದಲ್ಲಿ ಸಣ್ಣದೊಂದು ಭಯ ಮನೆ ಮಾಡಿತ್ತು. ಆದರೆ ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನ ಭಯವನ್ನು ಕಳಚಿ ಧೈರ್ಯ ಮೂಡಿಸಿತ್ತು. ಅವರೆಲ್ಲಾ
ಹೇಳುತ್ತಿದ್ದುದು ಒಂದೇ ಮಾತು: “ಅಲ್ಲಿ ನಡೆಯುವುದು ಬರೀ ನಕಲು. ಧೃತಿಗೆಡಬೇಡ, ಧೈರ್ಯವಾಗಿ ಮುನ್ನುಗ್ಗು’ ಎಂಬ ಸುಳು°ಡಿ. ನಮ್ಮ ಶಾಲೆಯಿಂದ ದೂರದ ಇನ್ನೊಂದು ಹಳ್ಳಿಯಲ್ಲಿ ಪರೀûಾ ಕೇಂದ್ರವಿತ್ತು. ಪರೀಕ್ಷೆ ಬರೆಯಲು ಅಲ್ಲಿಧಿ
ಗೆ ಹೋಗುವುದೇ ಒಂದು ಸಂಭ್ರಮ. ಶಿಕ್ಷಕರು ಟ್ರಾಕ್ಟರ್‌ಗೆ ನಮ್ಮನ್ನು ಹತ್ತಿಸುತ್ತಿದ್ದರು. ನಾವು, ಮನೆಯಲ್ಲಿ ಮಾಡಿದ ವಿವಿಧ ಖಾದ್ಯಗಳನ್ನು ಬುತ್ತಿ ಕಟ್ಟಿಸಿಕೊಂಡು ಶಾಲೆ ಹತ್ತಿರ ಹೋಗುತ್ತಿ¨ªೆವು. ಎÇÉಾ ವಿದ್ಯಾರ್ಥಿಗಳು ಬಂದ ನಂತರ ಶಿಕ್ಷಕರು ತಲೆ ಎಣಿಸಿ ಟ್ರಾಕ್ಟರ್‌ ಡ್ರೈವರ್‌ಗೆ ರೈಟ್‌ ಎಂದು ಸಿಗ್ನಲ… ಕೊಡುತ್ತಿದ್ದರು. ವಿದ್ಯಾರ್ಥಿಗಳೆಲ್ಲರೂ ಉಧೋ… ಉಧೋ… ಎನ್ನುತ್ತಿ¨ªೆವು. ನಮ್ಮ ಮೇಷ್ಟ್ರು “ನಾವ್‌ ಹೋಗ್ತಾ ಇರೋದು ಯಲ್ಲಮ್ಮನ ಜಾತ್ರೆಗÇÉಾ ಕಣÅಪ್ಪಾ… ಪರೀಕ್ಷೆಗೆ!’ ಅನ್ನುತ್ತಿದ್ದರು. ಟ್ರಾಕ್ಟರ್‌ ಪರೀûಾ ಕೇಂದ್ರ ತಲುಪುವರೆಗೂ ಎÇÉಾ ವಿದ್ಯಾರ್ಥಿಗಳು ಪರೀಕ್ಷೆಗೆ ಬರಬಹುದಾದ ಪ್ರಶ್ನೆಗಳ ಕುರಿತು ಚರ್ಚಿಸುತ್ತಿದ್ದೆವು. ಕೆಲವರು ಅದಕ್ಕೆ ಸಂಬಂಧಿಸಿದ ಉತ್ತರವನ್ನು ಕಾಪಿ ಬರೆದು,
ಚೀಟಿಯನ್ನು ಜೇಬಲ್ಲಿ ಸುಲಭವಾಗಿ ಅಡಗಿಸಿಟ್ಟುಕೊಳ್ಳುವ ಚಾಣಾಕ್ಷತನವನ್ನು ಬಲ್ಲವರಿಂದ ತಿಳಿದುಕೊಳ್ಳುತ್ತಿದ್ದರು.

ಪರೀಕ್ಷೆ ಆರಂಭವಾಯಿತು. ಆಗ ತಾನೇ ಕೋಣೆಯೊಳಗೆ ಕುಳಿತ ನಮಗೆ ಹೊರಗೆ ಯಾರೋ, ಇನ್‌ವಿಜಿಲೇಟರ್‌ ಬಂದ್ರು ಎಂದು ಕೂಗಿದ್ದು ಕೇಳಿಸಿತು. ಕೂಡಲೇ ಎಚ್ಚೆತ್ತ ಕೊಠಡಿ ಮೇಲ್ವಿಚಾರಕ, ಒಂದು ಬಕೆಟ್‌ ತರಿಸಿ ಎಲ್ಲರ ಬಳಿ ಇದ್ದ
ಚೀಟಿಗಳನ್ನು ಅದರೊಳಗೆ ಹಾಕಿಸಿದ. ಹಾಕದಿದ್ದರೆ ಡಿಬಾರ್‌ ಆಗುತ್ತೀರೆಂದು ಎಚ್ಚರಿಸಿದ ಮೇಲೆ ಎಲ್ಲರೂ ಬಕೆಟ್‌ ಒಳಗೆ ಚೀಟಿ ಹಾಕಿದರು. ನಂತರ ಅವುಗಳನ್ನು ಸುಟ್ಟು ಹಾಕಲಾಯಿತು. ಪ್ರಶ್ನೆ ಪತ್ರಿಕೆಗಳನ್ನು ವಿತರಿಸಿದರು. ಅವುಗಳಲ್ಲಿದ್ದ ಪ್ರಶ್ನೆಗಳನ್ನು ನೋಡಿ ಕೈ ಕೈ ಹಿಸುಕಿಕೊಂಡೆವು. ಏಕೆಂದರೆ, ನಾವು ಚೀಟಿಯಲ್ಲಿ ಉತ್ತರ ಬರೆದುಕೊಂಡಿದ್ದಕ್ಕೆ ಸಂಬಂಸಿದ ಪ್ರಶ್ನೆಗಳೇ ಇದ್ದವು. ಯಾರೋ ಹೊರಗಡೆ ಕೂಗಿ ಹೇಳಿದ್ದು ಸುಳ್ಳು ಸುದ್ದಿ ಎಂದು ನಂತರ ತಿಳಿಯಿತು. ಈಗಾಗಲೇ 3- 4 ಬಾರಿ ದಂಡಯಾತ್ರೆ ಮಾಡಿದ್ದ ಹಿರಿಯ ವಿದ್ಯಾರ್ಥಿಗಳಾದ ಘೋರಿ, ಘಸ್ನಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು.

ನಾವೆಲ್ಲರೂ ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುತ್ತಿ¨ªೆವು. ಆಗ, ವಿಸಿಟರ್‌ ಒಬ್ಬರ ಆಗಮನವಾಯಿತು. ವಿದ್ಯಾರ್ಥಿಯೊಬ್ಬ ತಾನು ಅಡಗಿಸಿಕೊಂಡಿದ್ದ ಚೀಟಿಯನ್ನು ಬಕೆಟ್‌ ಒಳಗೆ ಹಾಕಿರಲೇ ಇಲ್ಲ. ಅವನ ದುರಾದೃಷ್ಟಕ್ಕೆ ಅದೇ
ಸಮಯಕ್ಕೆ ಇರುವೆಗಳು ಆತನ ಪ್ಯಾಂಟ್‌ ಒಳಗೆ ನುಗ್ಗಿದ್ದವು. ಕಡಿತ ಸಹಿಸಲಾಗದೆ ಅವನು ಕೊಸರಾಡುತ್ತಿದ್ದುದನ್ನು ಕಂಡು ವಿಸಿಟರ್‌ ಆತನ ಬಳಿಗೆ ಬಂದರು. ಪ್ಯಾಂಟ್‌ ಪರೀಕ್ಷಿಸಿದಾಗ ಚೀಟಿಗಳು ಕೆಳಕ್ಕೆ ಉದುರಿದವು. ಆ ವಿದ್ಯಾರ್ಥಿ ಡಿಬಾರ್‌. ಮುಂದಿನ ಪರೀಕ್ಷೆಗಳೆಲ್ಲಾ ಅತ್ಯಂತ ಬಿಗುವಿನಿಂದ ನಡೆಯಿತು. ಪರೀಕ್ಷೆ ಮುಗಿಸಿ ಹೊರಗೆ ಬಂದ ಹುಡುಗಿಯರು ಮೇಲ್ವಿಚಾರಕರಿಗೆ ಹಿಡಿಶಾಪ ಹಾಕುತ್ತಾ ಆಕ್ರಂದನವನ್ನು ಮುಗಿಲಿಗೆ ಮುಟ್ಟಿಸಿದರು.

ಹೊರಗಿದ್ದ ನಮ್ಮ ಶಿಕ್ಷಕರು “ಕಾಪಿ ಎನ್ನುವುದು ಬೇರೆಯವರು ತಂದ ಬುತ್ತಿ ಇದ್ದಂತೆ ನಮ್ಮ ಹಸಿವಿನ ಸಮಯಕ್ಕೆ ಸಿಗಲ್ಲ. ನೀವು ಓದುವುದು ಸ್ವಂತ ಬುತ್ತಿ! ಯಾವಾಗ ಬೇಕಾದರೂ ಬಳಸಬಹುದು’ ಎಂದು ಬುದ್ದಿಮಾತು ಹೇಳಿದರು.
ಪರೀಕ್ಷೆಯ ಫ‌ಲಿತಾಂಶ ಬಂದಾಗ 56 ವಿದ್ಯಾರ್ಥಿಗಳಲ್ಲಿ 5 ಜನ ಮಾತ್ರ ಪಾಸಾಗಿದ್ದರು. ಅವರಲ್ಲಿ ನಾನೂ ಒಬ್ಬನಾಗಿದ್ದೆ. ಅಂದಿನಿಂದ ಕಾಪಿಗೆ ನನ್ನ ಮನದಲ್ಲಿ ಜಾಗ ಇಲ್ಲದಂತಾಯಿತು.

Advertisement

– ಪ್ರದೀಪ. ಎಂ.ಬಿ., ಬಳ್ಳಾರಿ

Advertisement

Udayavani is now on Telegram. Click here to join our channel and stay updated with the latest news.

Next