Advertisement

ಎಫ್ ಡಿಎ ಪರೀಕ್ಷಾ ನಕಲು, ನಾಲ್ವರು ಪೊಲೀಸರ ವಶಕ್ಕೆ

07:10 PM Feb 28, 2021 | Team Udayavani |

ವಿಜಯಪುರ : ಎಫ್.ಡಿ.ಎ. ಪರೀಕ್ಷೆಯ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಪರೀಕ್ಷಾರ್ಥಿ ನಕಲು ಮಾಡುವಾಗ ಸಿಕ್ಕಿ ಬಿದ್ದಿರುವ ಘಟನೆ ಜರುಗಿದೆ.

Advertisement

ಭಾನುವಾರ ಎಫ್.ಡಿ.ಎ. ಪರೀಕ್ಷೆಗಾಗಿ ನಗರ ಎಸ್.ಎಸ್. ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬೆಳಗಿನ ಅವಧಿಯಲ್ಲಿ ನಡೆದ ಸಾಮಾನ್ಯ ಜ್ಞಾನ ಪತ್ರಿಕೆಯ ಪರೀಕ್ಷೆಯಲ್ಲಿ  ಈ ಘಟನೆ ಜರುಗಿದೆ.

ಪರೀಕ್ಷಾರ್ಥಿ ಹಾಗೂ ನಕಲು ಪೂರೈಕೆ ಮಾಡಿದ ಸದರಿ ಕಾಲೇಜಿನ ಜವಾನ ಹಾಗೂ ಪರೀಕ್ಷಾರ್ಥಿಯ ಇನ್ನಿಬ್ಬರು ಸಹವರ್ತಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ಆರೋಪಿ ಪರೀಕ್ಷಾರ್ಥಿ ಬಳಿ ಸಿಕ್ಕಿರುವ ನಕಲು ಚೀಟಿ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗೆ ಹೋಲಿಕೆ ಆಗುತ್ತಿದೆ ಎನ್ನಲಾಗಿದೆ. ಹೀಗಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆಯೇ ಎಂಬ ಅನುಮಾನವೂ ಇದ್ದು, ಪೊಲೀಸರು ತನಿಖೆ ಚುರುಕೊಗೊಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next