Advertisement
ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕದ ಶಾಸಕರು ಮುಖ್ಯಮಂತ್ರಿಗಳು ತಮ್ಮೆಡೆಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದನ್ನು, ಪಕ್ಷದಲ್ಲಿ ಕೆಲವರ ಹಸ್ತಕ್ಷೇಪ ಹೆಚ್ಚಾಗುತ್ತಿರುವುದನ್ನು ಪ್ರಶ್ನಿಸಿದ್ದಾರೆ. ರಾಜ್ಯವು ಅಭಿವೃದ್ಧಿಯೆಡೆಗೆ ತ್ವರಿತವಾಗಿ ಹೆಜ್ಜೆಹಾಕಲೇಬೇಕಿರುವ ಇಂಥ ತುರ್ತು ಸಮಯದಲ್ಲಿ ಆಡಳಿತ ಪಕ್ಷದಲ್ಲಿನ ಈ ಬೆಳವಣಿಗೆ ಒಳ್ಳೆಯದಲ್ಲ. ಹಾಗೆಂದು, ಇಲ್ಲಿ ಶಾಸಕರನ್ನೇ ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಅವರುಗಳು ಎತ್ತಿರುವ ಕೆಲವು ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳಲೇಬೇಕಿದೆ. ಖುದ್ದು ಮುಖ್ಯಮಂತ್ರಿಗಳೇ ಅನುದಾನ ಬಿಡುಗಡೆಗೆ ಆದೇಶಿಸಿದರೂ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಪಡೆಯಲು ಪದೇ ಪದೆ ಅಲೆದಾಡುವಂಥ ಪರಿಸ್ಥಿತಿ ನಿರ್ಮಾಣ ವಾಗಿದೆ ಎನ್ನುವ ಶಾಸಕರೊಬ್ಬರ ಬೇಸರ ನಿಜಕ್ಕೂ ಚಿಂತೆ ಹುಟ್ಟಿಸುವಂಥದ್ದು.
ಮಾಧಾನ, ಸಮನ್ವಯದ ಕೊರತೆಯಿರುವುದು, ಹೊರಗಿನವರು, ಒಳಗಿನವರು ಎಂಬ ಆಂತರಿಕ ಕಲಹ ಉಂಟಾಗಿರುವುದು ಖಂಡಿತ ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಕುಡಿಯುವ ನೀರು ಪೂರೈಕೆ, ರಸ್ತೆಗಳ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳು ಕೋವಿಡ್ ಕಾರಣದಿಂದಾಗಿ ನನೆಗುದಿಗೆ ಬಿದ್ದಿವೆ. ಆ ಯೋಜನೆಗಳಿಗೆ ಮರುವೇಗ ಕೊಡುವ ಸಮಯವಿದು. ಪರಿಸ್ಥಿತಿ ಹೀಗಿರುವಾಗ ಶಾಸಕರು, ಮುಖ್ಯ ನಾಯಕತ್ವದ ನಡುವೆ ತಾಳ ಮೇಳ ಇಲ್ಲ ಎಂದಾದರೆ ಅಭಿವೃದ್ಧಿಯತ್ತ ಗಮನ ಕೊಡುವವರು ಯಾರು? ಪಕ್ಷದೊಳಗಿನ ಈ ಒಡಕುಗಳನ್ನೆಲ್ಲ ಸರಿಪಡಿಸಿಕೊಂಡು ಬಜೆಟ್ ಮಂಡನೆ ವೇಳೆಗೆ ಸರಕಾರ ಆರ್ಥಿಕತೆಯನ್ನು ಸರಿದಾರಿಗೆ ತರಬೇಕು. ಅಭಿವೃದ್ಧಿಯತ್ತ ಮುನ್ನಡೆಯಬೇಕು. ಏಕೆಂದರೆ ಜನರು ಎಲ್ಲವನ್ನೂ ಗಮನಿಸುತ್ತಿರುತ್ತಾರೆ ಎಂಬುದು ಮರೆಯಬಾರದು. ಎಲ್ಲದಕ್ಕೂ ಕೊರೊನಾ ಕಾರಣ ಎಂದು ನೆಪ ಹೇಳುವುದಕ್ಕೂ ಆಗುವುದಿಲ್ಲ. ಅಂತಿಮವಾಗಿ ಸಂಕಷ್ಟದಲ್ಲೂ ಸಾಧನೆಯೇ ಮುಖ್ಯವಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದ ಹೊತ್ತಲ್ಲೇ ಶಾಸಕರು ಕ್ಷೇತ್ರದ ಅಭಿವೃದ್ಧಿಯಾಗುತ್ತಿಲ್ಲ. ಅನುದಾನ ಸಿಗುತ್ತಿಲ್ಲ, ಸಚಿವರು ಕೈಗೆ ಸಿಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿರುವುದು ಸಾಮಾನ್ಯ ವಿಷಯವಲ್ಲ. ಏಕೆಂದರೆ ಮುಂದಿನ ಎರಡು ವರ್ಷಗಳಲ್ಲಿ ಮತ್ತೆ ವಿಧಾನಸಭೆ ಚುನಾವಣೆ ಎದುರಾಗಲಿದೆ. ಮುಂದಿನ ಚುನಾವಣೆಯಲ್ಲಿ 140 ರಿಂದ 150 ಸ್ಥಾನ ಗೆಲ್ಲುವ ಗುರಿಯೊಂದಿಗೆ ಮುನ್ನಡೆಯಬೇಕು
ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಶಾಸಕರ ಅಸಮಾಧಾನ ಪಕ್ಷ ಮತ್ತು ಸರಕಾರಕ್ಕೆ ಮುಜುಗರ ತಂದಿರುವುದಂತೂ ಹೌದು.
Related Articles
Advertisement
ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕದ ಶಾಸಕರು ಮುಖ್ಯಮಂತ್ರಿಗಳು ತಮ್ಮೆಡೆಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದನ್ನು, ಪಕ್ಷದಲ್ಲಿ ಕೆಲವರ ಹಸ್ತಕ್ಷೇಪ ಹೆಚ್ಚಾಗುತ್ತಿರುವುದನ್ನು ಪ್ರಶ್ನಿಸಿದ್ದಾರೆ. ರಾಜ್ಯವು ಅಭಿವೃದ್ಧಿಯೆಡೆಗೆ ತ್ವರಿತವಾಗಿ ಹೆಜ್ಜೆಹಾಕಲೇಬೇಕಿರುವ ಇಂಥ ತುರ್ತು ಸಮಯದಲ್ಲಿ ಆಡಳಿತ ಪಕ್ಷದಲ್ಲಿನ ಈ ಬೆಳವಣಿಗೆ ಒಳ್ಳೆಯದಲ್ಲ. ಹಾಗೆಂದು, ಇಲ್ಲಿ ಶಾಸಕರನ್ನೇ ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಅವರುಗಳು ಎತ್ತಿರುವ ಕೆಲವು ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳಲೇಬೇಕಿದೆ. ಖುದ್ದು ಮುಖ್ಯಮಂತ್ರಿಗಳೇ ಅನುದಾನ ಬಿಡುಗಡೆಗೆ ಆದೇಶಿಸಿದರೂ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಪಡೆಯಲು ಪದೇ ಪದೆ ಅಲೆದಾಡುವಂಥ ಪರಿಸ್ಥಿತಿ ನಿರ್ಮಾಣ ವಾಗಿದೆ ಎನ್ನುವ ಶಾಸಕರೊಬ್ಬರ ಬೇಸರ ನಿಜಕ್ಕೂ ಚಿಂತೆ ಹುಟ್ಟಿಸುವಂಥದ್ದು.
ಈ ನಿಟ್ಟಿನಲ್ಲಿ ಶೀಘ್ರವೇ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿರುವರಾದರೂ ಪಕ್ಷದೊಳಗೆ ಈ ರೀತಿಯ ಅಸಮಾಧಾನ, ಸಮನ್ವಯದ ಕೊರತೆಯಿರುವುದು, ಹೊರಗಿನವರು, ಒಳಗಿನವರು ಎಂಬ ಆಂತರಿಕ ಕಲಹ ಉಂಟಾಗಿರುವುದು ಖಂಡಿತ ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಕುಡಿಯುವ ನೀರು ಪೂರೈಕೆ, ರಸ್ತೆಗಳ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳು ಕೋವಿಡ್ ಕಾರಣದಿಂದಾಗಿ ನನೆಗುದಿಗೆ ಬಿದ್ದಿವೆ. ಆ ಯೋಜನೆಗಳಿಗೆ ಮರುವೇಗ ಕೊಡುವ ಸಮಯವಿದು. ಪರಿಸ್ಥಿತಿ ಹೀಗಿರುವಾಗ ಶಾಸಕರು, ಮುಖ್ಯ ನಾಯಕತ್ವದ ನಡುವೆ ತಾಳ ಮೇಳ ಇಲ್ಲ ಎಂದಾದರೆ ಅಭಿವೃದ್ಧಿಯತ್ತ ಗಮನ ಕೊಡುವವರು ಯಾರು? ಪಕ್ಷದೊಳಗಿನ ಈ ಒಡಕುಗಳನ್ನೆಲ್ಲ ಸರಿಪಡಿಸಿಕೊಂಡು ಬಜೆಟ್ ಮಂಡನೆ ವೇಳೆಗೆ ಸರಕಾರ ಆರ್ಥಿಕತೆಯನ್ನು ಸರಿದಾರಿಗೆ ತರಬೇಕು. ಅಭಿವೃದ್ಧಿಯತ್ತ ಮುನ್ನಡೆಯಬೇಕು. ಏಕೆಂದರೆ ಜನರು ಎಲ್ಲವನ್ನೂ ಗಮನಿಸುತ್ತಿರುತ್ತಾರೆ ಎಂಬುದು ಮರೆಯಬಾರದು. ಎಲ್ಲದಕ್ಕೂ ಕೊರೊನಾ ಕಾರಣ ಎಂದು ನೆಪ ಹೇಳುವುದಕ್ಕೂ ಆಗುವುದಿಲ್ಲ. ಅಂತಿಮವಾಗಿ ಸಂಕಷ್ಟದಲ್ಲೂ ಸಾಧನೆಯೇ ಮುಖ್ಯವಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದ ಹೊತ್ತಲ್ಲೇ ಶಾಸಕರು ಕ್ಷೇತ್ರದ ಅಭಿವೃದ್ಧಿಯಾಗುತ್ತಿಲ್ಲ. ಅನುದಾನ ಸಿಗುತ್ತಿಲ್ಲ, ಸಚಿವರು ಕೈಗೆ ಸಿಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿರುವುದು ಸಾಮಾನ್ಯ ವಿಷಯವಲ್ಲ. ಏಕೆಂದರೆ ಮುಂದಿನ ಎರಡು ವರ್ಷಗಳಲ್ಲಿ ಮತ್ತೆ ವಿಧಾನಸಭೆ ಚುನಾವಣೆ ಎದುರಾಗಲಿದೆ. ಮುಂದಿನ ಚುನಾವಣೆಯಲ್ಲಿ 140 ರಿಂದ 150 ಸ್ಥಾನ ಗೆಲ್ಲುವ ಗುರಿಯೊಂದಿಗೆ ಮುನ್ನಡೆಯಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಶಾಸಕರ ಅಸಮಾಧಾನ ಪಕ್ಷ ಮತ್ತು ಸರಕಾರಕ್ಕೆ ಮುಜುಗರ ತಂದಿರುವುದಂತೂ ಹೌದು.