ಹಳೆಯಂಗಡಿ: ಸರಕಾರಿ ಶಾಲೆಗಳಲ್ಲಿಯೂ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ತೋಕೂರು ಯುವಕ ಸಂಘ ತನ್ನ ಸುವರ್ಣ ವರ್ಷದಲ್ಲಿ ಹಲವಾರು ಯೋಜನೆಗಳನ್ನು ಸರಕಾರಿ ಶಾಲೆಗಳಲ್ಲಿಯೇ ನಡೆಸುತ್ತಿದೆ. ಪೋಷಕರು ಸಹ ಸರಕಾರಿ ಖಾಸಗಿ ಶಾಲೆಗಳೆಂಬ ಭೇದ ° ತೋರದೆ ಶಿಕ್ಷಣದ ಮೌಲ್ಯಕ್ಕೆ ಆದ್ಯತೆ ನೀಡಬೇಕು ಎಂದು ತೋಕೂರು ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್ ಹೇಳಿದರು.
ಅವರು ತೋಕೂರು ಯುವಕ ಸಂಘದಿಂದ ಸುವರ್ಣ ಮಹೋತ್ಸವದ ವರ್ಷದ ಅಂಗವಾಗಿ ಹಮ್ಮಿಕೊಂಡಿರುವ ಸಾಮಾಜಿಕ ಕಾರ್ಯಕ್ರಮದ ನೆಲೆಯಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್‌ನ ಬೆಳ್ಳಾಯರು ಗ್ರಾಮದ ಕೆರೆಕಾಡಿನ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕವನ್ನು ವಿತರಿಸಿ ಮಾತನಾಡಿದರು.
ಪಡುಪಣಂಬೂರು ಗ್ರಾಮ ಪಂಚಾಯತ್‌ನ ಸದಸ್ಯ ಹೇಮನಾಥ್ ಅಮೀನ್ ಅಧ್ಯಕ್ಷತೆ ವಹಿಸಿ, ಶಿಕ್ಷಣ ಪಡೆಯುವ ಹಕ್ಕು ಮಕ್ಕಳಲ್ಲಿದ್ದು, ಪ್ರತಿಭಾನ್ವಿತರನ್ನು ಗುರುತಿಸಿ, ಗೌರವಿಸಬೇ ಕು ಸರಕಾರಿ ಶಾಲೆಯಲ್ಲಿನ ಮಕ್ಕಳು ತಮ್ಮ ಅಸಾಧಾರಣ ಪ್ರತಿಭೆ ಗಳನ್ನು ಪ್ರದರ್ಶಿಸಿದ್ದಾರೆ. ಇಂತಹ ಶಿಕ್ಷಣ ಸಂಸ್ಥೆಗಳಿಗೆ ಗ್ರಾಮದ ಸಂಘ ಸಂಸ್ಥೆಗಳು ಆಸರೆಯಾಗಿರಬೇಕು,
ಇದರಿಂದ ಸರಕಾರಿ ಶಾಲೆಯಲ್ಲಿ ಕಲಿತವರು ಮುಂದೆ ದೊಡ್ಡ ಹುದ್ದೆಗಳನ್ನು ಪಡೆದು ದೇಶ ಸರ್ವತೋಮುಖವಾಗಿ ಬೆಳೆಯುವಂತೆ ಆಗಬೇಕು ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ಭುವನೇಶ್ವರೀ, ತೋಕೂರು ಯುವಕ ಸಂಘದ ಸದಸ್ಯರಾದ ಗೋಪಾಲ ಮೂಲ್ಯ, ಮಧುಸೂಧನ್ ಸುವರ್ಣ ಉಪಸ್ಥಿತರಿದ್ದರು.
ಶಾಲಾ ಸಹ ಶಿಕ್ಷಕ ನವೀನ್ ಡಿ’ ಕೋಸ್ಟಾ ಸ್ವಾಗತಿಸಿ, ಕಾರ್ಯ ಕ್ರಮ ನಿರೂಪಿಸಿದರು.