ಬಸವನಬಾಗೇವಾಡಿ: ಕೇಂದ್ರ ಸರಕಾರ ರೈತರು ಬೆಳೆದ ತೊಗರಿಯನ್ನು 6300 ರೂ. ಬೆಂಬಲ ಬೆಲೆ ಖರೀದಿಸುತ್ತಿದ್ದು. ರಾಜ್ಯಸರ್ಕಾರ ಕೂಡಾ ತನ್ನ ಪಾಲಿನ ಬೆಂಬಲದ ಬೆಲೆ ನೀಡದರೆ ರೈತರಿಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಟಿಎಪಿಎಂಸಿ.ಅಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ ಹೇಳಿದರು.
ಮಂಗಳವಾರ ಪಟ್ಟಣದ ತೆಲಗಿ ರಸ್ತೆಯ ತಾಲೂಕು ಒಕ್ಕೂಲತನ ಹುಟ್ಟುವಳಿ ಮಾರಾಟ ಕೇಂದ್ರದ ಗೋದಾಮಿನಲ್ಲಿ ತೊಗರಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ವರ್ಷ ಜಿಲ್ಲೆಯಲ್ಲಿ ವ್ಯಾಪಕವಾದ ಮಳೆಯಿಂದ ರೈತರ ಬೆಳದ ಅನೇಕ ಬೆಳೆಗಳು ಹಾಳಾಗಿ ಹೋಗಿದ್ದು. ಈಗ ಅಲ್ಪ ಸ್ವಲ್ಪ ಬೆಳೆ ಬಂದಿದ್ದು ಅದರಲ್ಲಿ ತೊಗರಿ ಕೂಡಾ ಒಂದು.
ಈಗ ಕೇಂದ್ರ ಸರ್ಕಾರ 6300 ರೂ. ಬೆಂಬಲ ಬೆಲೆಗೆ ಖರೀದಿಸುತ್ತಿದ್ದು. ರಾಜ್ಯಸರ್ಕಾರ ಕೂಡಾ ತನ್ನ ಪಾಲಿನ ಬೆಂಬಲದ ಹಣವನ್ನು ನೀಡದರೆ ರೈತರಿಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಹೇಳಿದರು. ಪ್ರತಿ ರೈತರಿಂದ 15 ಕ್ವಿಂಟಲ್ ದಂತೆ ಜಿಪಿಎಸ್ ಮಾಡಿದ ರೈತರಿಂದ 15 ಕ್ವಿಂಟಲ್ ತೊಗರಿಯನ್ನು 6300 ರೂ. ಬೆಂಬಲ ಬೆಲೆಗೆ ಖರೀದಿಸಲಾಗುವುದು. ಈಗಾಗಲೇ ತಾಲೂಕಿನಲ್ಲಿ ಸುಮಾರು 650 ರೈತರು ತಮ್ಮ ಹೆಸರನ್ನು ನೋಂದಾಯಿಸಿದ್ದು. ಸರ್ಕಾರದ ಈ ಯೋಜನೆಯ ಲಾಭವನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸರಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಕೇಂದ್ರಸರ್ಕಾರ ರೈತರು ಬೆಳೆದ ತೊಗರಿಗೆ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದ್ದು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಎಪಿಎಂಸಿ ಮಾಜಿ ಅಧ್ಯಕ್ಷ ನಿರ್ದೇಶಕ ಶೇಖರ ಗೊಳಸಂಗಿ, ನಿರ್ದೇಶಕ ವೈ.ಡಿ. ನಾಯೊRàಡಿ, ನಿಸಾರ ಚೌಧರಿ, ಎಂ.ಜಿ. ಆದಿಗೊಂಡ, ಶೇಖರಗೌಡ ಪಾಟೀಲ, ಕಲ್ಲಪ್ಪ ಆಸಂಗಿ, ಟಿಎ.ಪಿಎಂಸಿ ವ್ಯಸ್ಥಾಪಕ ಕಸ್ತೂರಿ ಪಟ್ಟಣಶೆಟ್ಟಿ, ಸದಾನಂದ ಸಜ್ಜನ, ಶಿವಾನಂದ ಪಡಶೆಟ್ಟಿ, ಪ್ರವೀಣಕುಮಾರ ಪಾಟೀಲ ಇದ್ದರು.