ನಂದಿಗ್ರಾಮ : ನಿಮ್ಮ ಶಾಂತಿಯನ್ನು ಕಾಯ್ದುಕೊಂಡು ತೃಣಮೂಲ ಕಾಂಗ್ರೆಸ್ ಗೆ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಎಂದು ಮತದಾರರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿಕೊಂಡಿದ್ದಾರೆ.
ನಂದಿಗ್ರಾಮದ ಸೋನಾಚುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಮತಾ, ಮತದಾನದ ಸಂದರ್ಭದಲ್ಲಿ ಶಾಂತ ಮನಸ್ಥಿತಿಯಿಂದ ನಿಮ್ಮ ಮತವನ್ನು ಚಲಾಯಿಸಿ. ಗಮನದಲ್ಲಿಟ್ಟುಕೊಳ್ಳಿ, ‘ಕೂಲ್ ಕೂಲ್ ತೃಣಮೂಲ್, ಥಂಡಾ ಥಂಡಾ ಕೂಲ್ ಕೂಲ್, ವೋಟ್ ಪಬೆ ಜೋಡಾ ಫೂಲ್’ ನಿಮ್ಮ ಮನಸ್ಸನಲ್ಲಿ 48 ಗಂಟೆಗಳ ಕಾಲ ಶಾಂತಿಯನ್ನು ಕಾಯ್ದುಕೊಳ್ಳಿ ಎಂದು ಅವರು ಮತದಾರರಲ್ಲಿ ಕೇಳಿಕೊಂಡಿದ್ದಾರೆ.
ಓದಿ : ಸಿ.ಡಿ ಪ್ರಕರಣ: ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ
ಇನ್ನು, ಈ ಸಂದರ್ಭ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಬಿಜೆಪಿ ಆಡಳಿತದ ರಾಜ್ಯಗಳಿಂದ ಪೊಲೀಸ್ ಪಡೆಗಳನ್ನು ನಂದಿಗ್ರಾಮ್ ವಿಧಾನಸಭಾ ಕ್ಷೇತ್ರಕ್ಕೆ ಕರೆತರಲಾಗಿದೆ. ಆ ಮೂಲಕ ಮತದಾರರಿಗೆ ಬೆದರಿಕೆ ಹಾಕುವ ಕಾರ್ಯ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Related Articles
ನಂದಿಗ್ರಾಮದಲ್ಲಿ ಬಹುಮತದಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತ ಪಡಿಸಿದ ಮಮತಾ ಬ್ಯಾನರ್ಜಿ, ಪಕ್ಷ ರಾಜ್ಯದಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಬಗ್ಗೆ ಕೂಡ ಭರವಸೆಯ ಮಾತುಗಳನ್ನಾಡಿದರು.
ಅವರು(ಪರ ರಾಜ್ಯದ ಪೊಲೀಸ್ ಪಡೆ) ಇಲ್ಲಿ ಕೆಲವು ದಿನಗಳ ತನಕ ಮಾತ್ರ ಇರಲಿದ್ದಾರೆ. ತಪ್ಪುಗಳನ್ನು ಮಾಡಬೇಡಿ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ದ್ರೋಹ ಮಾಡುವವರಿಗೆ ಸೂಕ್ತ ಉತ್ತರವನ್ನು ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
ಓದಿ : ಕೋವಿಡ್ ಮುನ್ನೆಚ್ಚರಿಕೆ: ದ.ಕನ್ನಡ ಜಿಲ್ಲೆಯಲ್ಲಿ ಜಾತ್ರೆ, ಸಭೆ, ಹಬ್ಬ ಆಚರಣೆ ಮಾಡುವಂತಿಲ್ಲ!