Advertisement

ಅಡುಗೆ ಕೆಲಸಗಾರರಿಗೆ 5 ಸಾವಿರ ರೂ.ಪರಿಹಾರ ನೀಡಿ

03:10 PM Sep 23, 2020 | Suhan S |

ದೇವನಹಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಕರ್ನಾಟಕ ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಯೂನಿಯನ್‌ ವತಿಯಿಂದ ಪ್ರತಿಭಟನೆ ನಡೆಯಿತು.

Advertisement

ಸಂಕಷ್ಟ: ದೇಶದಲ್ಲಿ ಕೊರೊನಾ ಲಾಕ್‌ಡೌನ್‌ ಸ್ಥಿತಿಯಲ್ಲಿ ಅಡುಗೆ ಕಾರ್ಮಿಕರಿಗೆ 5 ಸಾವಿರ ರೂ. ಗಳನ್ನು ಪರಿಹಾರದ ರೂಪದಲ್ಲಿ ನೀಡಲು ಸರ್ಕಾರ ತಿಳಿಸಿತ್ತು. ಆದರೆ, ಈವರೆಗೂ ಪರಿಹಾರ ಬಂದಿಲ್ಲ. ಅಲ್ಲದೇ,ಕೋವಿಡ್ ಸ್ಥಿತಿಯಿಂದ ಅಡುಗೆಕೆಲಸವಿಲ್ಲದೆ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆಂದರು. ಬೇಡಿಕೆ ಈಡೇರಿಸಿ:ಕರ್ನಾಟಕ ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಯೂನಿಯನ್‌ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಚ್‌.ವಿ.ನಾಗರಾಜ್‌ ಮಾತನಾಡಿ, ಈ ಹಿಂದೆ ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರಿಗೆ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಸರ್ಕಾರಿ ಗುರುತಿನ ಚೀಟಿ ನೀಡಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುಮಾರು 10ಲಕ್ಷಕ್ಕೂ ಮೇಲ್ಪಟ್ಟು ಹೋಟೆಲ್‌, ಕಲ್ಯಾಣ ಮಂಟಪ, ಮತ್ತಿತರರ ಕಡೆ ಮದುವೆ, ಮುಂಜಿ, ಸಮಾರಂಭ ಮುಂತಾದ ಕಡೆ ಕೆಲಸ ಮಾಡುತ್ತಿದ್ದಾರೆ.ಕೂಡಲೇ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ವೈ.ಜಿ.ಮುರಳೀಧರ ಮಾತನಾಡಿ, ಬೆಂಗಳೂರು ಸೇರಿ ಮುಖ್ಯಮಂತ್ರಿಗಳ 1 ಲಕ್ಷ ವಸತಿ ಯೋಜನೆ, ಗುಂಪು ವಸತಿ ಯೋಜನೆ ಜಾರಿಗೆ ತರಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಅಪರ ಜಿಲ್ಲಾಧಿಕಾರಿ ಕೆ.ಜಗದೀಶ್‌ ನಾಯಕ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯ ಕರ್ನಾಟಕ ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಯೂನಿಯನ್‌ ಕಾರ್ಮಿಕ ಪರಿಷತ್‌ ಗೌರವಾಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್‌, ಯೂನಿಯನ್‌ ಸಂಸ್ಥಾಪಕ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ರಮೇಶ್‌ ಬಾಬು, ಜಿಲ್ಲಾ ಉಪಾಧ್ಯಕ್ಷ ಜಯರಾಮ್‌, ಪ್ರಧಾನ ಕಾರ್ಯದರ್ಶಿ ರಾಮಚಂದ್ರರಾವ್‌, ಜಂಟಿ ಕಾರ್ಯದರ್ಶಿ ಅನಿಲ್‌ಕುಮಾರ್‌, ಹೊಸಕೋಟೆ ತಾಲೂಕು ಗೌರವಾಧ್ಯಕ್ಷ ಎನ್‌.ಆನಂದ್‌, ಹೊಸಕೋಟೆ ಅಧ್ಯಕ್ಷ ಪಿ.ಎನ್‌.ಮಂಜುನಾಥ್‌, ಉಪಾಧ್ಯಕ್ಷ ಎಚ್‌.ವಿ.ಮಂಜುನಾಥ್‌, ಪ್ರಧಾನಕಾರ್ಯದರ್ಶಿ ಸುದರ್ಶನ್‌, ದೊಡ್ಡಬಳ್ಳಾಪುರ ತಾಲೂಕು ಗೌರವಾಧ್ಯಕ್ಷ ಕೃಷ್ಣಮೂರ್ತಿಚಾರ್‌, ಅಧ್ಯಕ್ಷ ನಾಗರಾಜ್‌, ಉಪಾಧ್ಯಕ್ಷ ರವಿಚಂದ್ರ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್‌, ಪದಾಧಿಕಾರಿಗಳು ಉಪಸ್ಥಿತರಿದ್ದರು.

 

Advertisement

ಕಾರ್ಮಿಕರ ಅಭಿವೃದ್ಧಿಗಾಗಿ ರಾಜ್ಯಮಟ್ಟ, ಜಿಲ್ಲಾ ಮಟ್ಟದಲ್ಲಿ ರಚನೆ ಮಾಡುತ್ತಿರುವ ಉಸ್ತುವಾರಿ ಸಮಿತಿಯಲ್ಲಿ ಅಡುಗೆಕಾರ್ಮಿಕರನ್ನು ನೇಮಿಸ ಬೇಕು.ಕಟ್ಟಡಕಾರ್ಮಿಕರಿಗೆ ನೀಡು ವಂತೆ ಅಡುಗೆಕಾರ್ಮಿಕರ ಮಕ್ಕಳಿಗೆಪ್ರೋತ್ಸಾಹಧನ, ಪಿಂಚಣಿ ನೀಡಬೇಕು. ವೈ.ಜಿ.ಮುರಳೀಧರ,ಕರ್ನಾಟಕ ಅಡುಗೆಕೆಲಸಗಾರರ-ಸಹಾಯಕ ಕಾರ್ಮಿಕರಕ್ಷೇಮಾಭಿವೃದಿ ಯೂನಿಯನ್‌ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next