Advertisement

ಹಣವನ್ನು ಪುಣ್ಯವಾಗಿ ಪರಿವರ್ತಿಸಿ: ಪುತ್ತಿಗೆ ಶ್ರೀ

03:45 AM Feb 10, 2017 | Team Udayavani |

ಕೋಟ: ಹಣವನ್ನು ಹೆಚ್ಚು ಸಂಗ್ರಹ ಮಾಡಿದರೆ ಮುಂದೊಂದು ದಿನ ಅದು ಅಪಮೌಲ್ಯವಾಗಿ ಯಾವುದೇ ಪ್ರಯೋಜನಕ್ಕೆ ಸಿಗದೆ ಇರಬಹುದು. ಅದೇ ಹಣವನ್ನು ದೇವತಾ ಕಾರ್ಯಕ್ಕೆ ವಿನಿಯೋಗಿಸಿದರೆ ಅದು ಪುಣ್ಯವಾಗಿ ಪರಿವರ್ತನೆಯಾಗುತ್ತದೆ  ಮತ್ತು ಆ ಪುಣ್ಯವನ್ನು ಯಾರಿಂದಲೂ ಅಪಮೌಲ್ಯ ಗೊಳಿಸಲು ಸಾಧ್ಯವಿಲ್ಲ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗಣೇಂದ್ರತೀರ್ಥ ಶ್ರೀಪಾದರು ಹೇಳಿದರು.

Advertisement

ಅವರು ಗುರುವಾರ ವಡ್ಡರ್ಸೆ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ, ರಾಜಗೋಪುರ ಸಮರ್ಪಣೆ ಕಾರ್ಯಕ್ರಮದಲ್ಲಿ ರಾಜಗೋಪುರ ಸಮರ್ಪಣೆಗೊಳಿಸಿ ಆಶೀರ್ವಚನ ನೀಡಿದರು.

ದೇವಾಲಯದ ಆಡಳಿತ ಮೊಕ್ತೇಸರ ಕೆ. ಉದಯ ಕುಮಾರ್‌ ಶೆಟ್ಟಿ ಪ್ರಸ್ತಾವನೆಗೈದು, ವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಾವಿರಾರು ವರ್ಷ ಇತಿಹಾಸವಿದ್ದು ನಮ್ಮ ಹಿಂದಿನ ಪೂರ್ವಿಕರ ಶ್ರಮದಿಂದ ದೇವಾಲಯ ಈ ಮಟ್ಟಕ್ಕೆ ಬೆಳೆದು ನಿಂತಿದೆ ಎಂದರು.

ಧಾರ್ಮಿಕತೆ ವಾತಾವರಣ
ಮಕ್ಕಳನ್ನು ಧಾರ್ಮಿಕ ವಾತಾವರಣದಲ್ಲಿ ಬೆಳಸುವು ದರಿಂದ ಅವರು ಪರಿಪೂರ್ಣ ಮಾನವರಾಗುತ್ತಾರೆ ಎಂದು ಬಸೂÅರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಅಪ್ಪಣ್ಣ ಹೆಗ್ಡೆ ಹೇಳಿದರು. ಉತ್ಸವ ಸಮಿತಿಯ ಗೌರವಾಧ್ಯಕ್ಷ ಬಿ. ಭೋಜ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಬ್ರಹ್ಮಕಲಶಾಭಿಷೇಕ ಹಾಗೂ ರಾಜಗೋಪುರ, ಹೊರ ಹೆಬ್ಟಾಗಿಲು ರಥದ ಕೊಟ್ಟಿಗೆ ಸಮರ್ಪಣೆ ಅನ್ನಸಂತರ್ಪಣೆ, ದಾನಿಗಳಿಗೆ ಗೌರವಾರ್ಪಣೆ ಮುಂತಾದ ಕಾರ್ಯಕ್ರಮಗಳು ನಡೆದವು.

ಕೋಟ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಆನಂದ ಸಿ. ಕುಂದರ್‌ ಉತ್ಸವ ಸಮಿತಿಯ ಅಧ್ಯಕ್ಷ ವಿ. ಬಾಲಕೃಷ್ಣ ಶೆಟ್ಟಿ, ವಡ್ಡರ್ಸೆ ಹಾಡಿಮನೆ ಉಪಸ್ಥಿತರಿದ್ದರು.ಶಿಕ್ಷಕ ಸತೀಶ್‌ ವಡ್ಡರ್ಸೆ, ಉಮೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಚಂದ್ರ ಶೆಟ್ಟಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next