Advertisement

ಮತಾಂತರ, ಲವ್‌ ಜೆಹಾದ್‌ಗೆ ಒಮ್ಮತವೇ ಪರಿಹಾರ; ಸಂತರ ಅಭಿಮತ

11:54 AM Nov 26, 2017 | Team Udayavani |

ಉಡುಪಿ, ನ. 25: ಮತಾಂತರ, ಲವ್‌ ಜೆಹಾದ್‌ಗೆ ಕಡಿವಾಣ ಹಾಕಲು ಮತ್ತು ಹಿಂದೂಗಳ ಧರ್ಮ, ಸಂಸ್ಕೃತಿ ಜಾಗೃತಿಗೊಳಿಸಲು ಹಿಂದೂಗಳು ಒಗ್ಗಟ್ಟಾಗಬೇಕು. ಜಾತಿ ಪದ್ಧತಿ ಯನ್ನು ತೊರೆದು ಎಲ್ಲರನ್ನು ಒಪ್ಪಿಕೊಳ್ಳುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು ಎಂಬ ಆಗ್ರಹ ಧರ್ಮ ಸಂಸದ್‌ ಎರಡನೇ ದಿನದ ಗೋಷ್ಠಿಯಲ್ಲಿ ವಿವಿಧ ಸಂತರಿಂದ ಒಮ್ಮತದ ಅಭಿಪ್ರಾಯ ಮೊಳಗಿತು.

Advertisement

ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತೀಯ ಸನ್ಯಾಸಿಗಳಿಗೆ ಒಂದೇ ಕುಲ. ಸಂತರ ಮಧ್ಯೆ ಒಮ್ಮತ ಮೂಡಬೇಕು. ಎಲ್ಲ ಸ್ವಾಮೀಜಿಗಳು ಧರ್ಮ, ಸಂಸ್ಕೃತಿಯ ರಕ್ಷಣೆಯಲ್ಲಿ ತೊಡಗಬೇಕು. ಸಂತರಿಗಾಗಿಯೇ ಕೆಲವು ನಿರ್ಣಯಗಳನ್ನು
ತೆಗೆದುಕೊಳ್ಳಬೇಕು. ಸಂತರಿಂದ ಒಮ್ಮತದ ಸಂದೇಶ ಸಮಾಜಕ್ಕೆ ಹೋದರೆ ಜಾತಿ ವ್ಯವಸ್ಥೆಗೆ ಕಡಿವಾಣ ಹಾಕಬಹುದು. ನಮ್ಮ ಪರಂಪರೆಯ ಜತೆಗೆ ನಾವು ಜಾತಿ ಪದ್ಧತಿಯನ್ನು ಹೋಗಲಾಡಿಸಬೇಕು.

ಎಲ್ಲರನ್ನೂ ಸಹಜವಾಗಿ ಒಪ್ಪಿಕೊಳ್ಳುವಂತಹ ಮನೋಭಾವ ನಮ್ಮಲ್ಲಿ ಮೂಡಿದರೆ, ಮತಾಂತರ, ಲವ್‌ ಜೆಹಾದ್‌ ಸಮಸ್ಯೆಯನ್ನು ಬಗೆಹರಿಸಬಹುದು ಎಂದರು. ಭಾರತೀಯ ಸಂಸ್ಕೃತಿ ಉಳಿಯ ಬೇಕಾದರೆ ಹೆಣುಮಕ್ಕಳಿಗೆ ವ್ಯವಸ್ಥಿತ ವಾದ ಸಂಸ್ಕಾರ ನೀಡಬೇಕು. ನಮ್ಮ ಸಂಸ್ಕಾರ, ವಿಚಾರಗಳ ಮೂಲಕ ನಾವು ಗಟ್ಟಿ ಯಾದರೆ ನಮ್ಮ ಮೇಲೆ ಯಾರೂ ಪ್ರಭಾವ ಬೀರಲು ಸಾಧ್ಯವಿಲ್ಲ. ಸ್ವದೇಶಿ ಸಂಸ್ಕೃತಿಯನ್ನು ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿ, ತ್ಯಾಗ
ಮತ್ತು ಸೇವೆ ನಮ್ಮ ದೇಶದ ಆದರ್ಶಗಳು. ದೇಶದ ಮೇಲೆ ಅನೇಕ ಬಾರಿ ದಾಳಿಯಾಗಿದೆ. ಆದರೆ ದೇಶ ಒಡೆಯಲು ಯಾರಿಂದಲೂ ಸಾಧ್ಯವಾಗಿಲ್ಲ. ಅದು ಆಗುವುದೂ ಇಲ್ಲ. ಧರ್ಮ, ಸಂಸ್ಕೃತಿ ಉಳಿಸಲು ಭಾರತದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿವೇಕಾನಂದರು ಧರ್ಮದ ವಿಚಾರ, ಆಧುನಿಕ ಸನ್ಯಾಸಿ ಪರಂಪರೆಯನ್ನು ದೇಶಕ್ಕೆ ತಿಳಿಸಿಕೊಟ್ಟಿದ್ದಾರೆ. ಯುವಜನತೆ ಧರ್ಮ ಜಾಗೃತಿಯ ಮಾರ್ಗದಲ್ಲಿ
ಮುಂದುವರಿಯಬೇಕು ಎಂದರು.

ವಿಶ್ವಪ್ರಾಣಿ ಕಲ್ಯಾಣ ಮಂಡಳಿಯ ಶ್ರೀ ದಯಾನಂದ ಸ್ವಾಮೀಜಿ ಮಾತನಾಡಿ, ಅಸ್ಪೃಸ್ಯತೆ, ಅಸಮಾನತೆ ಮುಕ್ತ ಭಾರತ ನಿರ್ಮಾಣವಾಗಬೇಕು.
ಆ ದಾರಿದ್ರವನ್ನು ಹೋಗಲಾಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಹಾಗಾದರೆ ಮಾತ್ರ ದೇಶ ವಿಶ್ವಗುರು ಸ್ಥಾನಕ್ಕೆ ಏರಲಿದೆ. ದೇಶದಿಂದ ಭಾರೀ ಪ್ರಮಾಣದಲ್ಲಿ ವಿದೇಶಕ್ಕೆ ಗೋಮಾಂಸ ರಫ್ತು ಮಾಡಲಾಗುತ್ತಿದೆ. ಗೋಮಾಂಸ ಮಾರಾಟ ಮಾಡಿ ಶ್ರೀಮಂತರಾಗಬೇಕಾದ ದುಃಸ್ಥಿತಿ ಭಾರತ ದೇಶಕ್ಕೆ ಬಂದಿಲ್ಲ. ಪ್ರಾಣಿಗಳ ಮಾರಣಹೋಮ ನಿಲ್ಲಿಸಬೇಕು. ಗೋ ಸಂರಕ್ಷಣೆಯಾಗಬೇಕು.

Advertisement

ಭಾರತವನ್ನು ಪ್ರಾಣಿಬಲಿ ಮುಕ್ತ ರಾಷ್ಟ್ರವನ್ನಾಗಿ ಮಾಡಬೇಕು. ಉಡುಪಿಯ ಧರ್ಮಸಂಸದ್‌ ಅಂತಹಾ ಐತಿಹಾಸಿಕ ನಿರ್ಣಯಗಳಿಗೆ
ಸಾಕ್ಷಿಯಾಗಬೇಕು ಎಂದರು.

ಶ್ರೀ ಕೈವಲ್ಯಾನಂದ ಶ್ರೀಗಳು ಮಾತನಾಡಿ, ಭಾರತೀಯ ಸಂಸ್ಕೃತಿ, ಸಂಸ್ಕಾರಗಳು ಉಳಿಯ ಬೇಕಾದರೆ ಶಿಕ್ಷಣ ಪದ್ಧತಿ ಬದಲಾಗ
ಬೇಕು. ಇಂದಿನ ಶಿಕ್ಷಣ ಪದ್ಧತಿಯಿಂದಾಗಿ ನಮ್ಮ ಧರ್ಮ ಸಂಸ್ಕೃತಿ ಒಡೆಯುತ್ತಿದೆ. ಕುಟುಂಬ ವ್ಯವಸ್ಥೆ ನಶಿಸಿ ಹೋಗುತ್ತಿವೆ. ಶಿಕ್ಷಣದಲ್ಲಿ ಭಾಷೆಯೂ
ಮುಖ್ಯವಾಗಿದ್ದು, ನಮ್ಮ ದೇಶೀ ಭಾಷೆಯನ್ನು ದೂರ ಮಾಡಲಾಗುತ್ತದೆ. ಭಾಷೆ ಸಂಸ್ಕೃತಿಯ ವಾಹನ. ಅನ್ಯಭಾಷೆಯನ್ನು ವಿದ್ಯಾರ್ಥಿಗಳ ಮೇಲೆ ಹೇರಿ ದೌರ್ಜನ್ಯ ಮಾಡ ಲಾಗುತ್ತದೆ. ನಮ್ಮ ಭಾಷೆಯ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕು ಎಂದರು.

ಸ್ವರ್ಣವಲ್ಲಿ ಶ್ರೀ ಗಂಗಾಧರೇಶ್ವರ ಶ್ರೀಗಳು ಮಾತನಾಡಿ, ಕೇರಳದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳು ಹೆಚ್ಚುತ್ತಿವೆ. ಹಿಂದೂ ಸಂಘಟನೆಗಳಲ್ಲಿ
ಗುರುತಿಸಿಕೊಂಡವರನ್ನು ಕೊಲೆಗೈಯುವುದರ ವಿರುದ್ಧ ದನಿ ಎತ್ತಬೇಕಾಗಿದೆ. ಕರಾವಳಿ ಭಾಗದಲ್ಲೂ ಹಿಂದೂಗಳ ಹತ್ಯೆ ಹೆಚ್ಚಾಗುತ್ತಿದೆ. ಇಂತಹ ಪ್ರಮುಖ ವಿಚಾರಗಳ ಬಗ್ಗೆ ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.

*ಜಿವೇಂದ್ರ ಶೆಟ್ಟಿ ಗರ್ಡಾಡಿ

Advertisement

Udayavani is now on Telegram. Click here to join our channel and stay updated with the latest news.

Next