Advertisement

ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಸಹಕರಿಸಿ

09:57 PM Oct 08, 2019 | Team Udayavani |

ಶಿಡ್ಲಘಟ್ಟ: ತಾಲೂಕು ಸಹಿತ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಇದನ್ನು ಮನದಟ್ಟು ಮಾಡಿಕೊಂಡಿರುವ ಖಾಸಗಿ ಕೊಳವೆಬಾವಿಗಳನ್ನು ಹೊಂದಿರುವ ಮಾಲೀಕರು ಹಾಗೂ ದಾನಿಗಳು ಕುಡಿಯುವ ನೀರು ಪೂರೈಕೆ ಮಾಡಲು ಸಹಕರಿಸಲು ಮುಂದಾಗಿರುವುದು ಶ್ಲಾಘನೀಯ ಮತ್ತು ಸಂತೋಷದ ಸಂಗತಿ ಎಂದು ಶಾಸಕ ವಿ.ಮುನಿಯಪ್ಪ ಸಂತಸ ವ್ಯಕ್ತಪಡಿಸಿದರು.

Advertisement

ನಗರದ ವಾಸವಿ ರಸ್ತೆಯಲ್ಲಿ ಶ್ರೀ ಲಕ್ಷ್ಮೀ ನೀರು ಶುದ್ಧೀಕರಣ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ನಗರಸಭೆಯ ಎರಡು ವಾರ್ಡ್‌ಗಳಿಗೆ 10 ವರ್ಷಗಳಿಂದ ಉಚಿತವಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಲಕ್ಷ್ಮೀ ಮೆಡಿಕಲ್‌ ಬಾಬು ಅವರ ಸಮಾಜ ಸೇವೆ ಶ್ಲಾ ಸಿದ ಶಾಸಕರು, ದಾನಿಗಳು ತಮ್ಮ ಖಾಸಗಿ ಕೊಳವೆಬಾವಿಗಳಿಂದ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಮನವಿ ಮಾಡಿದರು.

140 ಕೊಳವೆಬಾವಿಗಳು ವಿಫ‌ಲ: ನಗರದ 3ನೇ ವಾರ್ಡ್‌ನಲ್ಲಿ ಆರಂಭಿಸಿರುವ ಶುದ್ಧ ನೀರು ಘಟಕ ಸದುಪಯೋಗ ಮಾಡಿಕೊಳ್ಳಬೇಕೆಂದರು. ಶಿಡ್ಲಘಟ್ಟ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ 350 ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಅದರಲ್ಲಿ 140 ಕೊಳವೆಬಾವಿಗಳು ವಿಫ‌ಲಗೊಂಡಿದೆ. ಇದರಿಂದ ಕುಡಿಯುವ ನೀರು ಪೂರೈಕೆ ಮಾಡುವುದು ಕಷ್ಟದ ಕೆಲಸವಾಗಿದೆ ಎಂದರು. ಸರ್ಕಾರ ಕೂಡಲೇ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಳೆನೀರು ಕೊಯ್ಲು ಅನಿವಾರ್ಯ: ಮಳೆ ನೀರು ಸಂರಕ್ಷಣೆ ಮಾಡಲು ನಾಗರಿಕರು ಆದ್ಯತೆ ನೀಡಬೇಕು. ನಗರಸಭೆ ವ್ಯಾಪ್ತಿಯಲ್ಲಿ ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀ ನೀರು ಶುದ್ಧೀಕರಣ ಘಟಕದ ಮಾಲೀಕ ಲಕ್ಷ್ಮೀ ಮೆಡಿಕಲ್‌ ಬಾಬು, ಟಿ.ಎಲ್‌.ಮಧುಶ್ರೀ ಅಮಿತ್‌ರಾಜ್‌, ನಗರಸಭಾ ಸದಸ್ಯ ಮಂಜುನಾಥ್‌(ಬಸ್‌), ರಿಯಾಝ್ ಪಾಷ, ಮಂಜು, ಮನೋಹರ್‌, ತಾಲೂಕು ಬ್ರಾಹ್ಮಣರ ಮಹಾಸಭಾ ಅಧ್ಯಕ್ಷ ರವಿ, ಮುಖಂಡರಾದ ಅಪ್ಪಿ(ಬಸ್‌), ಬಾಲಿ, ಭೂ ಅಭಿವೃದ್ಧಿ ಬ್ಯಾಂಕ್‌ನ ಮಾಜಿ ಉಪಾಧ್ಯಕ್ಷ ನಾಗರಾಜ್‌, ಬ್ಲಾಕ್‌ ಕಾಂಗ್ರೆಸ್‌ ಮೈನಾರಿಟಿ ಘಟಕದ ಅಧ್ಯಕ್ಷ ಅಮ್ಜದ್‌ ನವಾಝ್, ನಗರಸಭೆ ಮಾಜಿ ಸದಸ್ಯ ಅಬ್ದುಲ್‌ ಗಫ‌ೂರ್‌, ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಶ್ರೀನಾಥ್‌ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next