Advertisement

ಮುಂದುವರಿದ ರಸ್ತೆ‌ ಗುಂಡಿ ಮುಚ್ಚುವ ಕಾರ್ಯ

01:00 PM Sep 22, 2017 | Team Udayavani |

ಹುಬ್ಬಳ್ಳಿ: ಪಾಲಿಕೆಯಿಂದ ಗುರುವಾರವೂ ನಗರದ ಪ್ರಮುಖ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯ ಮುಂದುವರಿಯಿತು. ಇಲ್ಲಿನ ರಮೇಶ ಭವನ ರಸ್ತೆ, ಗೋಪನಕೊಪ್ಪ, ಎಸ್‌ಬಿ ವೃತ್ತ, ಬಾದಾಮಿ ನಗರ, ಕೇಶ್ವಾಪುರ, ದೇಸಾಯಿ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯಿತು. 

Advertisement

ಇತ್ತೀಚೆಗೆ  ಸುರಿದ ಮಳೆಯಿಂದ ನಗರದ ರಸ್ತೆಗಳು ಹದಗೆಟ್ಟಿರುವುದರಿಂದ ದುರಸ್ತಿ ಕಾರ್ಯ ತುರ್ತಾಗಿ ಮುಗಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಉಸ್ತುವಾರಿಯಲ್ಲಿ ವಲಯವಾರು ರಸ್ತೆ  ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿರುವ ರಸ್ತೆಗಳಿಗೆ ಪೇವರ್ ಬಳಕೆ ಮಾಡಲಾಗುತ್ತಿದೆ.

ಸ್ಥಳೀಯರ ವಿರೋಧ: ಆನಂದನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗುಂಡಿ ಮುಚ್ಚುವ ಕಾರ್ಯಕ್ಕೆ ಸ್ಥಳೀಯರು ಅಡ್ಡಿಪಡಿಸಿದರು. ಹಲವು ವರ್ಷಗಳಿಂದ ಇಲ್ಲಿ ರಸ್ತೆ ನಿರ್ಮಾಣವಾಗಿಲ್ಲ. ರಸ್ತೆ ಸಂಪೂರ್ಣ ಹಾಳಾಗಿರುವ ಸ್ಥಿತಿಯಲ್ಲಿರುವಾಗ ಗುಂಡಿ ಮುಚ್ಚುವುದರಿಂದ ಪರಿಹಾರ ದೊರೆಯುವುದಿಲ್ಲ. ಗುಂಡಿ ಮುಚ್ಚುವ ಬದಲು ಹೊಸ ರಸ್ತೆ ನಿರ್ಮಿಸುವಂತೆ ಸ್ಥಳೀಯರು ಪಟ್ಟು ಹಿಡಿದರು.

ಸಿಆರ್‌ಎಫ್ ಅನುದಾನದಲ್ಲಿ ರಸ್ತೆಗಳು ಅಭಿವೃದ್ಧಿಯಾಗಲಿವೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಗುಂಡಿ ಮುಚ್ಚಿದರೆ ವಾಹನಗಳ ಓಡಾಟಕ್ಕೆ ಅನುಕೂಲವಾಗುತ್ತದೆ ಎಂದು ಸಮಜಾಯಿಷಿ ನೀಡಿದರೂ ಸ್ಥಳೀಯರು ಒಪ್ಪಲಿಲ್ಲ. ಹೀಗಾಗಿ ಅಲ್ಲಿನ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next