Advertisement
ಜೂನ್ ಆರಂಭದಿಂದಲ್ಲೂ ನಗರದಲ್ಲಿ ಡೆಂಘೀ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ವರ್ಷಾರಂಭದಿಂದ ಇಲ್ಲಿಯವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 3,393 ಮಂದಿಗೆ ಸೋಂಕು ತಗುಲಿದೆ. ವಾರದಿಂದೀಚೆಗೆ 1,136 ಮಂದಿಯಲ್ಲಿ ಸೋಂಕು ದೃಢಪಡುವ ಮೂಲಕ ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
Related Articles
Advertisement
ಡೆಂಘೀಗೆ ಮೂವರು ಬಲಿ: ಬಿಬಿಎಂಪಿ ಹೊರತು ಪಡೆಸಿ ರಾಜ್ಯದಲ್ಲಿ ವರ್ಷದಿಂದೀಚೆಗೆ ಡೆಂಘೀ ಪ್ರಕರಣಗಳು 2017 ವರದಿಯಾಗಿವೆ. ಚಿತ್ರದುರ್ಗ, ರಾಮನಗರ, ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬರು ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಈವರೆಗೂ ದಕ್ಷಿಣ ಕನ್ನಡದಲ್ಲಿ 387, ಶಿವಮೊಗ್ಗ 223, ಹಾವೇರಿ 143, ಉತ್ತರ ಕನ್ನಡ 134, ಹಾಸನ 114, ಚಿಕ್ಕಮಗಳೂರು 108 ಮಂದಿಯಲ್ಲಿ ಡೆಂಘೀ ದೃಡಪಟ್ಟಿದೆ.
ಡೆಂಘೀ ಜ್ವರದ ಲಕ್ಷಣಗಳು: ಜ್ವರ, ತಲೆನೋವು, ಶೀತ, ಗಂಟಲು ನೋವು, ವಾಂತಿ, ಹೊಟ್ಟೆನೋವು, ನಿಶಕ್ತಿ, ಮೈ ಕೈ ನೋವು, ಅತಿಸಾರ ಭೇದಿ, ಮೈಮೇಲೆ ಅಲರ್ಜಿ ರೀತಿಯಲ್ಲಿ ಗುಳ್ಳೆಗಳು ಏಳುವುದು. ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿಬೇಕು. ತಿಳಿ ನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್ ಈಜಿಪ್ಟೆ ಎಂಬ ಸೊಳ್ಳೆ ಕಚ್ಚುವುದರಿಂದ ಡೆಂಘೀ ಬರುತ್ತದೆ.
ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಶೀಘ್ರ ರೋಗಕ್ಕೆ ತುತ್ತಾಗುತ್ತಾರೆ ಮೂರು ಹಂತಗಳಲ್ಲಿ ಈ ಡೆಂಘೀ ಕಾಣಿಸಿಕೊಳ್ಳಲಿದ್ದು, ಸಾಮಾನ್ಯ ಜ್ವರ, ಡೆಂಘೀ ಹೆಮೊರೈಜಿನ್ ಅಂದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ ಮತ್ತು ಡೆಂಘೀ ಶಾಕ್ ಸಿಂಡ್ರೋಮ್ ಅಂದರೆ ದೇಹದಲ್ಲಿ ರಕ್ತಸ್ರಾವವಾಗಿ ರೋಗ ಗಂಭೀರ ಹಂತ ಪಡೆಯುವುದು. ಈ ವೇಳೆ ರೋಗಿಗೆ ಬಿಳಿರಕ್ತ ಕಣಗಳು ಕಡಿಮೆಯಾಗುತ್ತವೆ ಎಂದು ವೈದ್ಯರು ಮಾಹಿತಿ ನೀಡಿದರು.
ಡೆಂಘೀ ತಡೆಗಟ್ಟುವ ಕ್ರಮಗಳು -ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಪರದೆ ಅಳವಡಿಸುವುದು. ಸೊಳ್ಳೆ ನಾಶಕ ಔಷಧಗಳನ್ನು ಬಳಸುವುದು. ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸುವುದು. – ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು. – ಸೊಳ್ಳೆ ಸಂತಾನೋತ್ಪತ್ತಿ ಸ್ಥಳವಾದ ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳಲ್ಲಿ ಅನಗತ್ಯ ನೀರು ಸಂಗ್ರಹಿಸದಿರುವುದು. -ಮನೆಯಲ್ಲಿ ಬಳಸುವ ನೀರನ್ನು 2-3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸುವುದು. -ಟಯರ್, ತೆಂಗಿನ ಚಿಪ್ಪಿನಲ್ಲಿ, ಮನೆ ಸುತ್ತಮುತ್ತ ಸ್ವಚ್ಛವಾಗಿಡುವುದು, ಆಸುಪಾಸಿನಲ್ಲಿ ನೀರು ಸಂಗ್ರಹವಾಗದಂತೆ ಜಾಗ್ರತೆ ವಹಿಸುವುದು. -ಜ್ವರ ಕಾಣಿಸಿಕೊಂಡ ನಿರ್ಲಕ್ಷಿಸದೆ ರಕ್ತ ಪರೀಕ್ಷೆ ಮಾಡಿಸುವುದು. ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು. ವಾರ್ಡ್‌ಗಳಲ್ಲಿ ಡೆಂಘೀ ಪ್ರಕರಣ
ವಾರ್ಡ್ ಡೆಂಘೀ ಪ್ರಕರಣ (2019 ಜನವರಿಯಿಂದ ಜು.16ವರೆಗೆ)
ಹೊಯ್ಸಳನಗರ – 195
ಬೆಳಂದೂರು – 133
ನ್ಯೂ ತಿಪ್ಪಸಂದ್ರ – 131
ಜೀವನ್‌ಭೀಮನಗರ – 119
ರಾಜಾಜಿನಗರ – 111
ಕೋರಮಂಗಲ -117
ಬೆನ್ನಿಗಾನಹಳ್ಳಿ -103
ಸಿ.ವಿ.ರಾಮನ್‌ನಗರ – 102
ಶಿವಾಜಿನಗರ – 91 ಡೆಂಘೀ ಸೋಂಕು ಹೆಚ್ಚಿರುವ ವಾರ್ಡ್‌ಗಳನ್ನು ಗುರುತಿಸಿ ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗಿದೆ. ನಿತ್ಯ ಕಡ್ಡಾಯವಾಗಿ ಆರೋಗ್ಯ ನಿರೀಕ್ಷಕರು, ಸಂಪರ್ಕ ಸಿಬ್ಬಂದಿಗೆ ತನ್ನ ವಾರ್ಡ್ ವ್ಯಾಪ್ತಿಯಲ್ಲಿ ಹತೋಟಿ ಕ್ರಮ, ಜಾಗೃತಿಗೆ ಮುಂದಾಗುವಂತೆ ಸೂಚಿಸಲಾಗಿದೆ. ನಿರ್ಲಕ್ಷ್ಯ ಮಾಡುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
-ಡಾ.ವಿಜಯೇಂದ್ರ, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ * ಜಯಪ್ರಕಾಶ್ ಬಿರಾದಾರ್