Advertisement

ವೀರಶೈವ-ಲಿಂಗಾಯತ ತಜ್ಞರ ಸಮಿತಿ ರಚನೆಗೊಂದಲ ಮುಂದುವರಿಕೆ

10:05 AM Sep 20, 2017 | |

ಬೆಂಗಳೂರು: ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಬೇಡಿಕೆ ಸಂಬಂಧ ತಜ್ಞರ ಸಮಿತಿ ರಚನೆ ಮಾಡುವ ಕುರಿತಂತೆ ಮತ್ತೆ ಗೊಂದಲ ಮುಂದುವರಿದಿದೆ.

Advertisement

ತಜ್ಞರ ಸಮಿತಿ ಕುರಿತು ಪಂಚ ಪೀಠಾಧೀಶರ ಕಡೆಯಿಂದ ಮೂವರ ಹೆಸರನ್ನು ವೀರಶೈವ ಮಹಾಸಭೆಗೆ ನೀಡಲಾಗಿದೆ. ಆದರೆ, ಲಿಂಗಾಯತ ಪ್ರತ್ಯೇಕ ಧರ್ಮದ ವೇದಿಕೆ ಹೋರಾಟಗಾರರು ಮಾತ್ರ ಇನ್ನೂ ತಜ್ಞರ ಪಟ್ಟಿ ಸಿದ್ಧಪಡಿಸಿ ಮಹಾಸಭೆಗೆ ನೀಡಿಲ್ಲ. ಹೀಗಾಗಿ, ಸಮಿತಿ ಕುರಿತು ಗೊಂದಲ ನಿರ್ಮಾಣವಾಗಿದೆ. ಇನ್ನೊಂದು ಬಾರಿ ಸಭೆ ನಡೆಸಿ, ನಂತರ ತಜ್ಞರ ಸಮಿತಿ ರಚನೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲು ವೇದಿಕೆಯ ಪದಾಧಿಕಾರಿಗಳು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ. ವೀರಶೈವರು ಮತ್ತು ಲಿಂಗಾಯತರು ಒಟ್ಟಾಗಿ ಹೋಗಬೇಕೆಂಬ ಉದ್ದೇಶದಿಂದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌ ಮನೆಯಲ್ಲಿ ನಡೆದ ಸಭೆಯ ನಿರ್ಣಯದಂತೆ ಶೀಘ್ರವೇ ತಜ್ಞರ ಸಮಿತಿ ರಚಿಸಬೇಕೆಂದು ತೀರ್ಮಾನಿಸಲಾಗಿತ್ತು. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌, ಅಖೀಲ ಭಾರತ ಶರಣ  ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋ.ರು.ಚನ್ನಬಸಪ್ಪ, ನಿವೃತ್ತ ಐಪಿಎಸ್‌ ಅಧಿಕಾರಿ ಶಂಕರ ಬಿದರಿ ಅಥವಾ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌. ಪಾಟೀಲ್‌ ಮತ್ತು ಒಬ್ಬರು ಮಠಾಧೀಶರನ್ನು ಸಮಿತಿಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ. 

ಸೆಪ್ಟೆಂಬರ್‌ 13ರಂದು ಡಾ.ಶರಣ ಪ್ರಕಾಶ್‌ ಪಾಟೀಲರ ಮನೆಯಲ್ಲಿ ನಡೆದ ಸಭೆಯ ಒಪ್ಪಂದದಂತೆ ವೀರಶೈವ ಮಹಾಸಭೆಯ ಪದಾಧಿಕಾರಿ ಗಳು ನಡೆದುಕೊಳ್ಳುತ್ತಿಲ್ಲ. ಸೆ.24ರಂದು ಕಲಬುರಗಿಯಲ್ಲಿ ನಡೆಯುವ ಲಿಂಗಾಯತ ಪ್ರತ್ಯೇಕ ಧರ್ಮದ ಸಮಾವೇಶವನ್ನು ವಿಫ‌ಲಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಅಲ್ಲದೆ, ಸಿದ್ಧಗಂಗಾ ಶ್ರೀಗಳ ವಿಷಯದಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ವಿರುದ್ಧ ಅನಗತ್ಯ ಆರೋಪ ಮುಂದುವರಿಸಿರುವು ದರಿಂದ ಮಹಾಸಭೆ ಮೂಲಕ ನೇಮಕವಾಗುವ ತಜ್ಞರ ಸಮಿತಿಯಲ್ಲಿ ಸೇರಿಕೊಳ್ಳುವ ಕುರಿತು ಲಿಂಗಾಯತ ಮುಖಂಡರು ಮೀನ-ಮೇಷ ಎಣಿಸುತ್ತಿದ್ದಾರೆ. ಹೀಗಾಗಿ, ಈ ವಾರಾಂತ್ಯದಲ್ಲಿ ಎರಡೂ ಬಣಗಳ ಮುಖಂಡರ ಮತ್ತೂಂದು ಸಭೆ ನಡೆಸಲು ವೀರಶೈವ ಮಹಾಸಭೆ ಮುಂದಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next