Advertisement

ಟ್ರಕ್‌ ಟರ್ಮಿನಲ್‌ಗೆ ಮುಂದುವರಿದ ವಿರೋಧ

05:51 PM Jan 31, 2022 | Team Udayavani |

ಹುಬ್ಬಳ್ಳಿ: ಅಂಚಟಗೇರಿ ಟ್ರಕ್‌ ಟರ್ಮಿನಲ್‌ ನಿರ್ಮಾಣದ ಕುರಿತು ಇಲ್ಲಿನ ಸರ್ಕ್ನೂಟ್‌ ಹೌಸ್‌ನಲ್ಲಿ ರವಿವಾರ ನಡೆದ ತಿಳಿವಳಿಕೆ ಸಭೆ ಫಲಪ್ರದವಾಗಲಿಲ್ಲ. ಗ್ರಾಮದ ಜನಪ್ರತಿನಿಧಿಗಳು, ಹಿರಿಯರಿಗೆ ಟ್ರಕ್‌ ಟರ್ಮಿನಲ್‌ ಕುರಿತು ತಿಳಿವಳಿಕೆ ನೀಡಿ ಸಕಾರಾತ್ಮಕ ಸ್ಪಂದನೆ ಪಡೆಯುವ ನಿಟ್ಟಿನಲ್ಲಿ ಸಭೆ ಕರೆಯಲಾಗಿತ್ತು.

Advertisement

ಆದರೆ, ಆರಂಭದಿಂದಲೂ ಗ್ರಾಮದ ಹಿರಿಯರು ಟ್ರಕ್‌ ಟರ್ಮಿನಲ್‌ಗೆ ವಿರೋಧ ವ್ಯಕ್ತಪಡಿಸಿದರು. ಯಾವುದೇ ಸೌಲಭ್ಯ ನೀಡಿದರೂ ಟರ್ಮಿನಲ್‌ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಯಾವ ಭರವಸೆ ನೀಡಿದರೂ ಈ ಯೋಜನೆಗೆ ಒಪ್ಪುವುದಿಲ್ಲ ಎಂದು ಸಾರಾಸಗಟಾಗಿ ತಳ್ಳಿ ಹಾಕಿದರು.

ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷೆ ಹಾಗೂ ಕೆಲ ಸದಸ್ಯರು ಕೂಡ ಗ್ರಾಮಸ್ಥರ ಅಭಿಪ್ರಾಯಕ್ಕೆ ಮನ್ನಣೆ ನೀಡಿದರು. ಇನ್ನೂ ಕೆಲ ಹಿರಿಯರು, ಗ್ರಾಪಂ ಸದಸ್ಯರು ಸಭೆಗೆ ಬಂದಿಲ್ಲ. ಒಂದು ವಾರದಲ್ಲಿ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಸಭೆಗಮನಕ್ಕೆ ತಂದರು.

ಮನವರಿಕೆ-ಮನವೊಲಿಕೆ ಯತ್ನ: ಕೈ ಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ಟ್ರಕ್‌ ಟರ್ಮಿನಲ್‌ ನಿರ್ಮಾಣದಿಂದ ಅಂಚಟಗೇರಿ ಗ್ರಾಮದ ಸುತ್ತಲೂ ವಾಣಿಜ್ಯ ಚಟುವಟಿಕೆಗಳು ವೃದ್ಧಿಸುತ್ತವೆ. ಜನರ ಆದಾಯ ವೃದ್ಧಿಸುತ್ತದೆ. ಅಲ್ಲಿನ ಜಮೀನುಗಳಿಗೆ ಉತ್ತಮ ಬೆಲೆ ಬರುತ್ತದೆ. ಸರಕಾರದ ಈ ಯೋಜನೆ ಕೈಬಿಟ್ಟು ಹೋಗದಂತೆ ಗ್ರಾಮಸ್ಥರು ಯೋಚಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಜಲಜೀವನ್‌ ಮಿಷನ್‌ ಯೋಜನೆಯಡಿ ಅಂಚಟಗೇರಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರು ನೀಡಲಾಗುವುದು. ಹುಬ್ಬಳ್ಳಿ ಶಹರದಂತೆ ಅಂಚಟಗೇರಿ ಗ್ರಾಮ ಬೆಳವಣಿಗೆಯಾಗಬೇಕು. ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಯೋಜನೆಯ ಅನುಷ್ಠಾನಕ್ಕೆ ಮುಕ್ತ ಮನಸ್ಸಿನಿಂದ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.

Advertisement

ಜಿಪಂ ಸಿಇಒ ಡಾ| ಬಿ.ಸುಶೀಲ, ಎಸ್ಪಿ ಪಿ.ಕೃಷ್ಣಕಾಂತ, ತಹಶೀಲ್ದಾರರಾದ ಪ್ರಕಾಶ ನಾಶಿ, ಶಶಿಧರ ಮಾಡ್ಯಾಳ, ತಾಪಂ ಇಒ ಗಂಗಾಧರ ಕಂದಕೂರ, ಅಂಚಟಗೇರಿ ಗ್ರಾಪಂ ಅಧ್ಯಕ್ಷೆ ಫಕೀರವ್ವ ಸಾದರ, ಉಪಾಧ್ಯಕ್ಷೆ ಮಲ್ಲವ್ವ ಚರರಗುಡ್ಡ, ಸದಸ್ಯರು, ಗ್ರಾಮದ ಹಿರಿಯರಿದ್ದರು.

ಟರ್ಮಿನಲ್‌ ಜಾಗದಲ್ಲಿ ಮನೆ
ಸರ್ಕಾರದ ನಿರ್ದೇಶನದಂತೆ ದೇವರಾಜು ಅರಸು ಟ್ರಕ್‌ ಟರ್ಮಿನಲ್‌ಗೆ ಅಂಚಟಗೇರಿ ಗ್ರಾಮದ ಬಳಿ 56 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಲಾಗಿತ್ತು. ಟರ್ಮಿನಲ್‌ ವತಿಯಿಂದ ಮೂರು ಎಕರೆ ಖಾಸಗಿ ಜಮೀನು ಸಹ ಖರೀದಿ ಮಾಡಲಾಗಿದೆ. ಟರ್ಮಿನಲ್‌ಗೆ ನೀಡಿದ ಜಾಗದಲ್ಲಿ ಗ್ರಾಮಸ್ಥರು ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಈ ಜಾಗದಲ್ಲಿ ನಿರ್ಮಿಸಿದ ಮನೆಗಳಿಗೆ ಹಕ್ಕುಪತ್ರ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಈ ಕುರಿತು ಸರ್ವೇ ಕೈಗೊಂಡಾಗ ಒಟ್ಟು 9.5 ಎಕರೆ ಜಮೀನಿನಲ್ಲಿ ಗ್ರಾಮಸ್ಥರು ಮನೆ ನಿರ್ಮಿಸಿರುವುದು ಕಂಡುಬಂದಿದೆ.

ಜಿಲ್ಲಾಧಿಕಾರಿ ಭರವಸೆ ಏನು?
ಈಗ ಕಟ್ಟಿಕೊಂಡಿರುವ ಎಲ್ಲಾ ಮನೆಗಳಿಗೂ ಸರ್ಕಾರದಿಂದ ಹಕ್ಕುಪತ್ರ ನೀಡಲಾಗುವುದು. ಟರ್ಮಿನಲ್‌ಗೆ ಮಂಜೂರು ಮಾಡಿದ ಜಾಗದಲ್ಲಿ ಕಡಿತ ಮಾಡಲಾಗುವುದು. ಮನೆ ಕಟ್ಟಿಕೊಂಡಿರುವವರಿಗೆ ತೊಂದರೆ ಆಗದು. ಗ್ರಾಮಸ್ಥರ ಮನವಿಯಂತೆ 4 ಎಕರೆ ಸ್ಮಶಾನಕ್ಕೆ ಮಂಜೂರು ಮಾಡಲಾಗಿದೆ. ಈ ಹಿಂದೆ 1985ರಲ್ಲಿ ಸರಕಾರಿ ಪಡಾ ಜಾಗ ವಸತಿಗೆ ನೀಡಲಾಗಿದೆ. ಗ್ರಾಮಸ್ಥರ ಮನವಿಯಂತೆ ಶಾಲೆ ಹಾಗೂ ಕಾಲೇಜುಗಳಿಗೂ ಸ್ಥಳ ನೀಡಲಾಗುವುದು. ಗ್ರಾಮಸ್ಥರ ಹಿತ ಕಾಪಾಡಿ 49 ಎಕರೆ ಜಮೀನನ್ನು ಟ್ರಕ್‌ ಟರ್ಮಿನಲ್‌ಗೆ ನೀಡಲಾಗು ತ್ತಿದೆ ಎಂಬುದು ಡಿಸಿ ನಿತೇಶ ಪಾಟೀಲ ಭರವಸೆ.

ಜಾರಿಗೊಳಿಸಲಾಗುತ್ತಿದೆ. ಅಂಚಟಗೇರಿ ಹುಬ್ಬಳ್ಳಿ ಮಹಾನಗರಕ್ಕೆ ಸಮೀಪದ ಗ್ರಾಮವಾಗಿದೆ. ಸರ್ಕಾರ ಗ್ರಾಮದ ಎಲ್ಲಾ ಮೂಲಸೌಕರ್ಯಗಳ ಅಭಿವೃದ್ಧಿಗೆ
ಬದ್ಧವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ-ಕಾಲೇಜು ಹಾಗೂ ಸ್ಮಶಾನಕ್ಕಾಗಿ ಜಮೀನು ನೀಡುವಂತೆ ಮಾಡಿದ್ದ ಮನವಿಗೆ ಸ್ಪಂದಿಸಲಾಗಿದೆ. ಗ್ರಾಮಸ್ಥರಿಗೆ ತೊಂದರೆಯಾಗದಂತೆ ಟರ್ಮಿನಲ್‌ ನಿರ್ಮಾಣ ಕೆಲಸ ಮಾಡಲಾಗುವುದು.
ಶಂಕರಪಾಟೀಲ ಮುನೇನಕೊಪ್ಪ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next