Advertisement
ತಾಲೂಕಿನ ಸಂತೇಬೆನ್ನೂರಿನಲ್ಲಿ ಭಾನುವಾರ 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಇನ್ನೂ ಕೂಡ ನಾವುಗಳು ಶಿಕ್ಷಣದಲ್ಲಿ ಪ್ರಗತಿಯನ್ನು ಕಾಣಲು ಸಾಧ್ಯವಾಗಿಲ್ಲ. ಅಂಧಕಾರದ ಜಗತ್ತಿನಲ್ಲಿ ಮುಂದುವರೆಯುತ್ತಿರುವ ನಮ್ಮ ಮುಂದೆ ಯಾವುದೇ ಘಟನೆಗಳು ನಡೆದರೂ ಕಣ್ಣುಕಾಣದ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ.
Related Articles
Advertisement
ಜತೆಗೆ ಪ್ರಕೃತಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ನಿಲ್ಲಿಸಬೇಕಿದೆ ಎಂದುಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಏನೇಲ್ಲಾ ಹಕ್ಕುಗಳಿವೆ ಎಂಬುದನ್ನು ತಿಳಿಸಲು ಸಾಹಿತ್ಯ ಸಮ್ಮೇಳನಗಳಲ್ಲಿ ಚರ್ಚೆಗಳು ನಡೆಯಬೇಕು. ಅಂಬೇಡ್ಕರರು ನಮ್ಮಗೆ ನೀಡಿರುವ ಸಂವಿಧಾನದಲ್ಲಿ ಸಮಾನತೆಯಿದೆ. ಅದನ್ನು ದುರುಪಯೋಗ ಬಳಸಿಕೊಳ್ಳದೇ ಮುನ್ನಡೆಯಬೇಕು ಎಂದರು. ಹಾಲಸ್ವಾಮಿ ವಿರಕ್ತಮಠದ ಜಯದೇವ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಸಮ್ಮೇಳನಾಧ್ಯಕ್ಷ ಪ್ರೊ| ಎಸ್.ಬಿ ರಂಗನಾಥ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎಸ್. ಮಂಜುನಾಥ್ ಕುರ್ಕಿ, ಶಾಸಕ ವಡ್ನಾಳ್ ರಾಜಣ್ಣ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್, ತಾಪಂ ಅಧ್ಯಕ್ಷ ಜೆ.ರಂಗನಾಥ್, ಗ್ರಾಪಂ ಅಧ್ಯಕ್ಷ ದೇವೇಂದ್ರಪ್ಪ, ಜಿಪಂ ಸದಸ್ಯ ವಾಗೀಶ್ ಮಾಸ್ಟರ್, ಎಂ. ಸಿದ್ದಪ್ಪ, ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಎನ್.ಎಸ್ ರಾಜು, ಜಿ.ಎಚ್. ರಾಜಶೇಖರ್ ಗುಂಡಗಟ್ಟಿ,
ಕಸಾಪ ಜಿಲ್ಲಾ ಸಂಚಾಲಕ ಕೆ.ಸಿ.ರಾಜ್ ಅಹ್ಮದ್, ಕಸಾಪ ತಾಲೂಕು ಅಧ್ಯಕ್ಷ ಎಂ.ಯು. ಚನ್ನಬಸಪ್ಪ, ಕೆ.ಸಿದ್ದಲಿಂಗಪ್ಪ ಇತರರಿದ್ದರು. 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಂತೇಬೆನ್ನೂರಿನಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ| ಎಚ್. ಎಸ್ ಮಂಜುನಾಥ್ ಕುರ್ಕಿ ಅಧ್ಯಕ್ಷತೆಯಲ್ಲಿ ನಾಲ್ಕು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಪಿ. ನಾಗಭೋಷಣ ಶೌಡೂರು ನಿರ್ಣಯಗಳನ್ನು ಮಂಡಿಸಿದರು.