Advertisement
ಮೇಣೆದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ಬಚನಾಳ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ವಾಂತಿ ಭೇದಿ ಕಾಣಿಸಿಕೊಂಡು ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಸದ್ಯ ಈ ಗ್ರಾಮದ ಸುಮಾರು 20ಕ್ಕೂ ಹೆಚ್ಚು ರೋಗಿಗಳು ತಾವರೇಗರಾ ಮತ್ತು ಗಂಗಾವತಿ ಆಸ್ಪತ್ರೆಗಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.
Related Articles
Advertisement
ಹೀಗಾಗಿ ಗ್ರಾಮದ ಒಂದು ಸಮುದಾಯ ಭವನವನ್ನು ಸ್ವಚ್ಛತೆ ಮಾಡಲಾಗಿದೆ ಮತ್ತು ಸದ್ಯ ಗ್ರಾಮ ಪಂಚಾಯಿತಿಯರು ಕೊಳವೆಬಾವಿಯ ನೀರನ್ನು ಸ್ಥಗಿತ ಮಾಡಿ ಗ್ರಾಮಕ್ಕೆ ಜಲಜೀವನ ಮಿಷನ್ ಯೋಜನೆ ನದಿ ನೀರನ್ನು ಪೂರೈಸಲಾಗುತ್ತಿದೆ ಎಂದು ಪಿಡಿಒ ಹನುಮಂತರಾಯ ತಿಳಿಸಿದರು.
ಈ ಗ್ರಾಮದಲ್ಲಿ ಪ್ರತಿದಿನ 3-4 ವಾಂತಿ ಭೇದಿ ಪ್ರಕರಣಗಳು ಪತ್ತೆಯಾಗುತಿದ್ದು, ಹಿರೇಮನ್ನಾಪೂರ, ತಾವರಗೇರಾ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಸಿಗುವುದಿಲ್ಲ ಅಲ್ಲಿ ರೋಗಿಗಳಿಗೆ ವೈದ್ಯರು ಸರಿಯಾದ ರೀತಿ ಸ್ಪಂದನೆ ನೀಡದ ಕಾರಣ ಗ್ರಾಮಸ್ಥರು ಗಂಗಾವತಿ ಸೇರಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗುತ್ತಿದ್ದೆ. ಆಸ್ಪತ್ರೆಗೆ ದಾಖಲಾದ ಒಬ್ಬೊಬ್ಬರು 20-30 ಸಾವಿರ ರೂಪಾಯಿ ಹಣ ಖರ್ಚುಗುತ್ತಿದ್ದು. ಬಡವರಿಗೆ ತುಂಬಾ ತೊಂದರೆಯಾಗುತ್ತಿದೆ.ಈ ಕುರಿತು ಡಿಹೆಚ್‌ಓ ಅವರ ಗಮನಕ್ಕೆ ತರಲಾಗಿದೆ ಎಂದು ಗ್ರಾಪಂ ಅಧ್ಯಕ್ಷ, ಸದಸ್ಯರುಗಳು ಹಾಗೂ ಗ್ರಾಮಸ್ಥರು ತಿಳಿಸಿದರು.
ಈ ವೇಳೆ ಗ್ರಾಮ ಪಂಚಾಯಿತಿ ಪಿಡಿಒ ಹನುಮಂತರಾಯ, ಗ್ರಾಪಂ ಅಧ್ಯಕ್ಷ ದಾವಲಭಾಷ ಸಾಬ್, ಗ್ರಾಪಂ ಸದಸ್ಯರು, ಮಾಜಿ ಅಧ್ಯಕ್ಷ ಶೇಖರಪ್ಪ ಸೂಳಿಕೇರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಬಚನಾಳ ಗ್ರಾಮದಲ್ಲಿ ವಾಂತಿಭೇದಿ ಪ್ರಕರಣ ಗ್ರಾಮಸ್ಥರಿಂದ ತಿಳಿದು ಬಂದ ಕಾರಣ ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಗ್ರಾಮದ ಜನರು ಭಯಪಡುವ ಅಗತ್ಯ ಇಲ್ಲ. ಆರೋಗ್ಯ ಇಲಾಲೆ ಅಧಿಕಾರಿಗಳಿಗೆ ಗ್ರಾಮಸ್ಥರಿಗೆ ಸೂಕ್ತ ಚಿಕಿತ್ಸೆ ನೀಡಲು ತಿಳಿಸಿದ್ದೇನೆ.- ಅಮರೇಗೌಡ ಪಾಟೀಲ್ ಬಯ್ಯಾಪೂರ,ಶಾಸಕರು ಕುಷ್ಟಗಿ.
ಬಚನಾಳ ಗ್ರಾಮದಲ್ಲಿ ಕಳೆದ ಒಂದು ವಾರದಿಂದ 1-2 ವಾಂತಿಭೇದಿ ಪ್ರಕರಣಗಳು ಕಂಡು ಬಂದ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಯ ನೀರು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಶೇ.75ರಷ್ಟು ಪ್ಲೋರೈಡ್ ಯುಕ್ತ ನೀರು ಇರುವದು ಕಂಡು ಬಂದ್ದಿದೆ. ಅದನ್ನು ಸ್ಥಗಿತ ಮಾಡಿ ಬೇರೆ ನೀರು ಸರಬರಾಜು ಮಾಡಲು ಗ್ರಾಪಂನವರಿಗೆ ತಿಳಿಸಿಲಾಗಿದೆ ಹಾಗೂ ಆರೋಗ್ಯ ಸಿಬ್ಬಂದಿಗಳು ಅಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. –ಡಾ|| ಆನಂದ ಗೋಟುರು,ತಾಲೂಕು ವೈದ್ಯಾಧಿಕಾರಿ ಕುಷ್ಟಗಿ.