Advertisement

2 ಕೋಟಿ ರೂ ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ

09:14 PM Oct 13, 2019 | Lakshmi GovindaRaju |

ದೊಡ್ಡಬಳ್ಳಾಪುರ: ವಾಲ್ಮೀಕಿ ಸಮುದಾಯಕ್ಕಾಗಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಹಂತದಲ್ಲಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು. ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ತಾಲೂಕು ಕಚೇರಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ನಾನು ಶಾಸಕನಾದ ಮೇಲೆ ಎಲ್ಲಾ ಹಿಂದುಳಿದ ಮತ್ತು ಪರಿಶಿಷ್ಠ ಜಾತಿ ಹಾಗು ವರ್ಗಗಳ ಸಮುದಾಯ ಭವನವನ್ನು ನೀಡಿದ್ದೇನೆ. ಅಲ್ಲದೆ ತಾಲೂಕಿನ ಪ್ರತಿ ಹೊಬಳಿ ಹಾಗು ಪಂಚಾಯಿತಿ ವ್ಯಾಪ್ತಿಯಲ್ಲಿ ಸಮುದಾಯ ಭವನಗಳನ್ನು ನೀಡಿದ್ದೇನೆ. ಈಗಾಗಲೆ ಜಿಲ್ಲಾ ಆಸ್ಪತ್ರೆಯಾಗಿ ಇಲ್ಲಿನ ತಾಯಿ ಮಗು ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿದ್ದು, 100 ಹಾಸಿಗೆಗಳಿಂದ 200 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮಾಡುವಲ್ಲಿ 90 ಕೋಟಿ ಬಿಡುಗಡೆಯಾಗಿದೆ.

ರಾಜ್ಯ ರಸ್ತೆ ಅಭಿವೃದ್ಧಿ ಮಂಡಲಿಯಿಂದ 8 ಕೋಟಿ ರೂ ಹಣವನ್ನು ತುರ್ತು ರಸ್ತೆ ಅಭಿವೃದ್ಧಿಗೆ ತಂದಿದ್ದರು, ಇಲ್ಲಿನ ಬಿಜೆಪಿ ನಾಯಕರು ಈ ಕಾಮಗಾರಿಗಳನ್ನು ನಿಲ್ಲಿಸಿದ್ದಾರೆ. ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸದ ಇವರ ಧೋರಣೆ ಖಂಡನೀಯ ಎಂದರು. ವಾಲ್ಮೀಕಿ ಸಂಘದ ಉಪಾಧ್ಯಕ್ಷ ಕುಮಾರ್‌ ಮಾತನಾಡಿ, ಹಳೆ ಬಸ್‌ ನಿಲ್ದಾಣದಲ್ಲಿ ಇರುವ ಅಂಬೇಡ್ಕರ್‌ ಮತ್ತು ಜಗ ಜೀವನ್‌ ರಾಂ ಪುತ್ಥಳಿ ಜೊತೆ ಶ್ರೀವಾಲ್ಮೀಕಿ ಪುತ್ಥಳಿ ನಿರ್ಮಾಣ ಮಾಡುವಲ್ಲಿ ಮುಂದಾಗುವಂತೆ ಶಾಸಕರಿಗೆ ಒತ್ತಾಯಿಸಿದರು.

ವಾಲ್ಮೀಕಿ ಸಂಘದ ಅಧ್ಯಕ್ಷ ಪ್ರೇಮಕುಮಾರ್‌ ಮಾತನಾಡಿ, ವಾಲ್ಮೀಕಿ ಸಂಘದ ಸಮುದಾಯ ಭವನಕ್ಕೆ 2 ಎಕರೆಗೂ ಹೆಚ್ಚು ಭೂಮಿ ನೀಡಿರುವ ಶಾಸಕ ಕಾರ್ಯ ಶ್ಲಾಘನೀಯ. ಇದರಲ್ಲಿ 4 ಗುಂಟೆಯಷ್ಟು ಭೂಮಿಯನ್ನು ಖಾಸಗಿ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಎಂ.ಕೆ.ರಮೇಶ್‌, ನಗರಸಭಾ ಆಯುಕ್ತ ಮಂಜುನಾಥ್‌, ಬಿಇಓ ಬಯ್ಯಪ್ಪ ರೆಡ್ಡಿ, ಕನ್ನಡ ಪಕ್ಷ ತಾ. ಅಧ್ಯಕ್ಷ ಸಂಜೀವನಾಯಕ್‌, ಪ್ರ.ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕಸಾಪ ತಾ.ಅಧ್ಯ ಕ್ಷೆ ಪ್ರಮೀಳಾ ಮಹದೇವ್‌, ನಗರ ,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಜಿ.ಅಶೋಕ್‌, ತಾಪಂ ಮಾಜಿ ಅಧ್ಯಕ್ಷೆ ದೇವರಾಜಮ್ಮ, ಶ್ರೀದೇವರಾಜು ಅರಸು ವ್ಯವಹಾರ ನಿರ್ವಹಣಾ ಮಹಾ ವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಚಿಕ್ಕಣ್ಣ , ಸಮುದಾಯದ ಮುಖಂಡ ಡಿ.ಡಿ.ಕೆ ಹಳ್ಳಿ ಮುನಿಕೃಷ್ಣ ಸೇರಿದಂತೆ ಹಲವಾರು ಸಮುದಾಯದ ಮುಖಂಡರು ಅ—ಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next