Advertisement

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ; ಕೊಲ್ಲೂರು ದೇಗುಲದ ಮೃತ್ತಿಕೆ, ಜಲ ರವಾನೆ

08:11 AM Jul 23, 2020 | mahesh |

ಕೊಲ್ಲೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ವಿಶ್ವ ಹಿಂದೂ ಪರಿಷತ್‌ನ ಅಪೇಕ್ಷೆಯಂತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಸಂಪಿಗೆ ಮರದ ಅಡಿಯ ಮಣ್ಣು ಹಾಗೂ ಸೌಪರ್ಣಿಕೆಯ ತೀರ್ಥವನ್ನು ಶ್ರೀ ದೇವಿಯ ಸ್ವಯಂಭೂ ಪೀಠ ದಲ್ಲಿಟ್ಟು ಪೂಜಿಸಿ ಮಂದಿರ ಕಾರ್ಯ ನಿರ್ವಿಘ್ನವಾಗಿ ನಡೆಯಲಿ ಎಂದು ಪ್ರಾರ್ಥಿಸಿ ಪುಣ್ಯ ಜಲ ಹಾಗೂ ಮೃತ್ತಿಕೆ ಅಯೋಧ್ಯೆಗೆ ರವಾನಿಸಲಾಯಿತು.

Advertisement

ಜಿಲ್ಲೆಯ ಉಡುಪಿ ಹಾಗೂ ಕೊಲ್ಲೂರು ಕ್ಷೇತ್ರಗಳ ಪುಣ್ಯ ಜಲ ಹಾಗೂ ಮೃತ್ತಿಕೆಯನ್ನು ಕೊಲ್ಲೂರಿನ ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗ ದಳದ ಪ್ರಮುಖರಾದ ಪ್ರೊ| ಎಂ.ಬಿ. ಪುರಾಣಿಕ್‌, ಜಗದೀಶ ಕೊಲ್ಲೂರು, ಕಿರಣ್‌ ಜೋಗಿ, ವಿಜಯ ಬಳೆಗಾರ್‌, ಅವಿನಾಶ್‌ ಆಚಾರ್‌, ಕರಣ್‌ ಶೆಟ್ಟಿ, ವಿಶ್ವನಾಥ ಶೆಟ್ಟಿ, ಶ್ರೀನಿವಾಸ ಆಚಾರ್‌ ಮುದೂರು, ನೀಲಕಂಠ ಕರಬ, ಶಬರೀಶ ಪೂಜಾರಿ ಮುಂತಾದವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next