Advertisement

ಕೆರೆ ಒತ್ತುವರಿ ಮಾಡಿ ಎಸ್‌ಎನ್‌ ಸಿಟಿ ನಿರ್ಮಾಣ

04:07 PM Aug 09, 2021 | Team Udayavani |

ಬಂಗಾರಪೇಟೆ: ಕೆರೆ-ಕುಂಟೆ ನೆಲಸಮ ಮಾಡಿ ಹಿಂದೆ ಡೀಸಿ ಆಗಿದ್ದ ಡಿ.ಕೆ.ರವಿ ಸರ್ಕಾರದ ವಶಕ್ಕೆ ಪಡೆದಿದ್ದ ಜಾಗದಲ್ಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅಕ್ರಮವಾಗಿ ಎಸ್‌.ಎನ್‌. ಸಿಟಿ ನಿರ್ಮಿಸಿದ್ದಾರೆ ಎಂದು ಸಂಸದ ಮುನಿಸ್ವಾಮಿ ಗಂಭೀರ ಆರೋಪ ಮಾಡಿದರು.

Advertisement

ತಾಲೂಕಿನ ಬೀರಂಡಹಳ್ಳಿ ಗ್ರಾಮದಿಂದ ನಟೇಶ್‌ ಮನೆಯವರೆಗೂತಮ್ಮ ಸಂಸದರ ನಿಧಿಯಿಂದ ನಿರ್ಮಾಣ ಮಾಡಿರುವ ರಸ್ತೆ ವೀಕ್ಷಣೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ತಮ್ಮ 8 ವರ್ಷಗಳ ಅಧಿಕಾರಾವಧಿಯಲ್ಲಿ, ಪ್ರಾರಂಭದಲ್ಲಿ ಐದು
ಎಕರೆ ಜಮೀನು ಖರೀದಿ ಮಾಡಿ, ಅಕ್ಕಪಕ್ಕದಲ್ಲಿ ಹತ್ತಾರು ಎಕರೆ ಜಮೀನು, ಗೋಮಾಳ ಹಾಗೂ ಖರಾಬು ಜಮೀನು ಒತ್ತುವರಿ ಮಾಡಿಕೊಳ್ಳುವುದೇ ಇವರ ಕಾಯಕವಾಗಿದೆ ಎಂದು ದೂರಿದರು.

ತಾಯಿ ಹೆಸರಿಗೆ ಮಂಜೂರು: ಕೋಲಾರ ಮುಖ್ಯ ರಸ್ತೆಯ ಬಳಿ ನಿರ್ಮಾಣ ಮಾಡಿರುವ ಎಸ್‌ಎನ್‌ ಸಿಟಿಗೆ ಹೋಗುವ ದಾರಿಯನ್ನು ಈ ಹಿಂದೆ ರಾಜ್ಯಪಾಲರ ಹೆಸರಿಗೆ ನೋಂದಣಿಯಾಗಿದ್ದು, ಈ ಜಾಗವನ್ನೇ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಮಾನು ನಿರ್ಮಾಣ ಮಾಡಿದ್ದಾರೆ. ಇದರ ಒಳಗೆ ಇದ್ದ ಕೆರೆಗಳು,ಕುಂಟೆಗಳು ಮಾಯವಾಗಿವೆ. ಇದರಲ್ಲಿ ಒಂದು ಕೆರೆ ನಿರ್ಮಾಣ ಮಾಡಿ ಗೇಟ್‌ ಹಾಕಲು ಅವರಿಗೆ ಏನು
ಅಧಿಕಾರವಿದೆ. ಈ ಜಮೀನಿನೊಳಗೆ ಕಲ್ಲು ಬಂಡೆಗಳಾದ 4 ಎಕರೆ ಜಮೀನನ್ನು ತಾಲೂಕು ದರಕಾಸ್ತು ಸಮಿತಿ ಅಧ್ಯಕ್ಷರಾಗಿರುವ ಶಾಸಕರೇ ತನ್ನ ತಾಯಿ ಮುನಿಯಮ್ಮ ಹೆಸರಿನಲ್ಲಿ ಮಂಜೂರು ಮಾಡಿಸಿಕೊಂಡಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ.ಮಹೇಶ್‌, ಬಿಜೆಪಿ ತಾಲೂಕು ಅಧ್ಯಕ್ಷ ರಾಮಾಪುರ ನಾಗೇಶ್‌, ಮುಖಂಡ ಎಂ.ಪಿ.ಶ್ರೀನಿವಾಸಗೌಡ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಅಮರೇಶ್‌, ಮುಖಂಡರು ಹಾಜರಿದ್ದರು

ಇದನ್ನೂ ಓದಿ:ಅಫ್ಘಾನಿಸ್ತಾನದಿಂದ ದೇಶದ ಹಿಂದೂ, ಸಿಖ್ಖರನ್ನು ಕರೆತರಲು ವ್ಯವಸ್ಥೆ ಮಾಡಿ : ಕಾಂಗ್ರೆಸ್

Advertisement

ಒತ್ತುವರಿ ಸಾಬೀತು ಮಾಡಿದ್ರೆ ಜೀತದಾಳಾಗಿರುವೆ: ಶಾಸಕ
ಎಸ್‌.ಎನ್‌.ಸಿಟಿ ಲೇಔಟ್‌ ನಿರ್ಮಾಣಕ್ಕೆ ಕೆರೆ ಕುಂಟೆ ಒತ್ತುವರಿ ಮಾಡಿಕೊಂಡಿಲ್ಲ, ಅದನ್ನು ಸಾಬೀತು ಮಾಡಿದರೆ ನಿಮ್ಮ ಮನೆಯಲ್ಲಿ ಜೀತದಾಳಾಗಿ ಕೆಲಸ ಮಾಡುವೆ ಎಂದು ಸಂಸದ ಮುನಿಸ್ವಾಮಿಗೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಸವಾಲೆಸೆದರು. ಎಸ್‌.ಎನ್‌.ಸಿಟಿ ಲೇಔಟ್‌ ಸೇರಿ ನಾನು ಮಾಡಿರುವ ಯಾವುದೇ ಲೇಔಟ್‌ಗಳ ಬಗ್ಗೆ ತನಿಖೆಯಾಗಲಿ, ಯಾವುದರಲ್ಲಿಯೂ ಒಂದಿಂಚು ಕಬಳಿಕೆ ಮಾಡಿಲ್ಲ. ಇಡೀ ಜಿಲ್ಲೆಯಲ್ಲಿ ಆಧುನಿಕವಾಗಿ ಹಾಗೂ ಎಲ್ಲಾ ದಾಖಲೆಗಳಂತೆ ಕಾನೂನುಬದ್ಧವಾಗಿಯೇ ಎಸ್‌. ಎನ್‌.ಸಿಟಿ ಲೇಔಟ್‌ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ಎಸ್‌.ಎನ್‌.ಸಿಟಿಗೆ ಬರುತ್ತಿದ್ದ ಸಂಸದ ಎಸ್‌. ಮುನಿಸ್ವಾಮಿ ಲೇಔಟ್‌ನಲ್ಲಿ 100ಕ್ಕೆ 100 ಅಡಿಗಳ ಸೈಟ್‌ ಉಚಿತವಾಗಿ ನೀಡುವಂತೆ ಕೇಳಿದ್ದರು, ನಾನ್ಯಾಕೆ ನೀಡಬೇಕೆಂದು ಹೇಳಿದ್ದಕ್ಕೆ ನನ್ನ ವಿರುದ್ಧ ರಾಜಕೀಯ ಷಡ್ಯಂತರ ಮಾಡಿ ಪ್ರತಿ ದಿನ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಮುಂದಿನ ದಿನಗಳಲ್ಲಿ ಅಕ್ರಮವಾಗಿ ಜಲ್ಲಿ ಕ್ರಷರ್‌ಗಳನ್ನು ಪಡೆದಿರುವ ಸಂಸದರ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಎಚ್ಚರಿಸಿದರು

Advertisement

Udayavani is now on Telegram. Click here to join our channel and stay updated with the latest news.

Next