Advertisement

ದೇರ್ನಡ್ಕ-ನೆಲ್ಯಾಜೆ ಸಂಪರ್ಕ ಅಡಿಕೆ ಪಾಲಕ್ಕೆಮುಕ್ತಿ 

02:56 PM Jun 11, 2018 | |

ಸವಣೂರು: ಸವಣೂರು ಗ್ರಾ.ಪಂ.ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ದೇರ್ನಡ್ಕ -ನೆಲ್ಯಾಜೆ ಸಂಪರ್ಕಿಸುವವರಿಗೆ ತೋಡು ದಾಟಲು ಆಡಿಕೆ ಮರದ ಪಾಲವೇ ಸೇತುವೆಯಾಗಿತ್ತು. ಮಳೆಗಾಲ ಸಮಯದಲ್ಲಿ ಪುಟ್ಟ ಮಕ್ಕಳೊಡನೆ ಹೆತ್ತವರು ಇದ್ದರಷ್ಟೇ ದೈರ್ಯ ತೋಡು ದಾಟಲು ಸಾಧ್ಯವಾಗುತ್ತಿತ್ತು. ಹೀಗೆ ಹಲವು ದಶಕಗಳಿಂದ ಇಲ್ಲಿನವರು ಅಡಿಕೆ ಪಾಲದ ಮೂಲಕವೇ ಹಾದು ಹೋಗುತ್ತಿದ್ದರು. ಹೀಗೆ ದಶಕಗಳಿಂದ ಅಡಿಕೆ ಪಾಲದ ಮೂಲಕವೇ ಹಾದುಹೋಗುತ್ತಿರುವುದನ್ನು ಮನಗಂಡು ಉದ್ಯೋಗ ಖಾತರಿ ಯೋಜನೆ ಮೂಲಕ ಇಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಸವಣೂರು ಗ್ರಾ.ಪಂ.ಅವಕಾಶ ಮಾಡಿಕೊಟ್ಟಿತ್ತು. ಬಳಿಕ ಕಾಮಗಾರಿ ನಡೆದು ಜನರಿಗೆ ಉಪಯೋಗಕ್ಕೆ ಲಭ್ಯವಾಗಿದೆ. ಈ ಮೂಲಕ ದಶಕಗಳ ಸಮಸ್ಯೆಯೊಂದು ಬಗೆಹರಿದಿದೆ.

Advertisement

ಉದ್ಯೋಗ ಖಾತರಿಯಲ್ಲಿದೆ ಅವಕಾಶ
ಉದ್ಯೋಗ ಖಾತರಿ ಯೋಜನೆಯ ಮೂಲಕ ವೈಯುಕ್ತಿಕ ಹಾಗೂ ಸಾರ್ವಜನಿಕ ವಾಗಿ ಹಲವು ಕಾಮಗಾರಿಗಳನ್ನು ನಡೆಸಲು ಅವಕಾಶವಿದೆ. ಮಳೆಗಾಲವಾದ ಕಾರಣ ಅಲ್ಲಲ್ಲಿ ಮೂಲ ಸೌಕರ್ಯಗಳ ಕೊರತೆಗಳು ಇರುವಂತಹ ಸಂದರ್ಭ ಈ ಯೋಜನೆ ಬಹಳ ಪರಿಣಾಮಕಾರಿಯಾಗಿದೆ.

ಜನರ ಸಹಭಾಗಿತ್ವ
ಇಲ್ಲಿ ಕಾಲು ಸಂಕ ನಿರ್ಮಾಣದ ಬೇಡಿಕೆಯನ್ನು ನಮ್ಮ ಮುಂದೆ ಇಟ್ಟಾಗ, ಉದ್ಯೋಗ ಖಾತರಿ ಯೋಜನೆಯ ಮೂಲಕ ಅವಕಾಶವಿದೆ ಎಂಬುದನ್ನು ಮನಗಂಡು ಅಲ್ಲಿನ ಜನರನ್ನು ಸೇರಿಸಿಕೊಂಡು ಕಾಮಗಾರಿ ನಡೆಸಲಾಯಿತು. ಜನರ ಸಹಭಾಗಿತ್ವದಿಂದ ಇದು ಸಾಧ್ಯವಾಯಿತು. ಗ್ರಾ.ಪಂ.ಅಧ್ಯಕ್ಷರ, ಅಧಿಕಾರಿಗಳ ಸಹಕಾರವೂ ಲಭ್ಯವಾಗಿತ್ತು.
– ಸತೀಶ್‌ ಅಂಗಡಿಮೂಲೆ
ಸದಸ್ಯರು ಸವಣೂರು ಗ್ರಾ.ಪಂ

ಉಪಕಾರವಾಗಿದೆ
ಕಳೆದ ವರ್ಷದವರೆಗೂ ನಾವು ಅಡಿಕೆ ಪಾಲದ ಮೂಲಕವೇ ನಾವು ತೋಡು ದಾಟುತ್ತಿದ್ದೆವು. ಈ ಪಾಲದ ಮೂಲಕ ಹಲವು ಮನೆಗಳಿಗೆ ಸಂಪರ್ಕಆಗುತ್ತಿತ್ತು. ಮಳೆಗಾಲದಲ್ಲಿ ಭಯದ ವಾತಾ ವರಣ ಇತ್ತು. ಈಗ ಸವಣೂರು ಗ್ರಾ.ಪಂ. ನ ಮೂಲಕ ಉದ್ಯೋಗ ಖಾತರಿ ಯೋಜನೆಯಿಂದ ಕಾಲು ಸಂಕ ನಿರ್ಮಾಣವಾಗಿ ಬಹಳ ಉಪಕಾರವಾಗಿದೆ.
– ನಾರಾಯಣ ರೈ ದೇರ್ನಡ್ಕ ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next