Advertisement

860 ಮನೆಗಳ ನಿರ್ಮಾಣಕ್ಕೆ ಅಡಿಗಲ್ಲು 

12:17 PM Jun 23, 2017 | Team Udayavani |

ಕೆಂಗೇರಿ: ಉಲ್ಲಾಳು ಉಪನಗರ, ಅಂಬೇಡ್ಕರ್‌ ನಗರ ನಿವಾಸಿಗಳಿಗಾಗಿ ಕೊಳಗೇರಿ ಅಭಿವೃದ್ಧಿ ಮಂಡಳಿ ರೂ.38 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ 860 ಮನೆಗಳ ನಿರ್ಮಾಣ ಕಾಮಗಾರಿಗೆ ಯಶವಂತಪುರ ಶಾಸಕ ಎಸ್‌.ಟಿ ಸೋಮಶೇಖರ್‌ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು. 

Advertisement

ನಂತರ ಮಾತನಾಡಿದ ಅವರು, “ಸರಕಾರಿ ಜಮೀನಿನಲ್ಲಿ ವಾಸವಾಗಿದ್ದು, 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಆರ್ಥಿಕ ದುರ್ಬಲರಿಗೆ ಸರಕಾರದಿಂದ ಹಕ್ಕು ಪತ್ರ ನೀಡಿ, ಆಶ್ರಯ ಯೋಜನೆ ಅಡಿ ಮನೆ ನಿರ್ಮಿಸಿಕೊಡಲಾಗುತ್ತಿದೆ. ಬಡಾವಣೆಯ ನಾಗರಿಕರ ಆರೋಗ್ಯ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಘಟಕಗಳನ್ನು ತೆರಯಲಾಗುತ್ತಿದೆ,’ ಎಂದರು. 

ಹೇರೋಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಅನಿಲ್‌ ಕುಮಾರ್‌ ಮಾತನಾಡಿ, “ಸತತ ಮೂರು ವರ್ಷಗಳ ಪರಿಶ್ರಮ ಹಾಗೂ ಶಾಸಕರ ಪ್ರಯತ್ನದಿಂದಾಗಿ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮನೆಗಳ ನಿರ್ಮಾಣ ಯೋಜನೆಗೆ ಚಾಲನೆ ದೊರೆತಿದೆ,’ ಎಂದರು. ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಅಭಿಯಂತರ ಹೆಚ್‌.ಪಿ.ಸುಧೀರ್‌ ಮಾತನಾಡಿ “ಇನ್ನು 6 ತಿಂಗಳಲ್ಲಿ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗುವುದು,’ ಎಂದರು. 

ಇದೇ ವೇಳೆ ಉಲ್ಲಾಳು ವಾರ್ಡ್‌ನಲ್ಲಿ ಇಂದಿರಾ ಕ್ಯಾಂಟೀನ್‌ ಕಟ್ಟಡ ನಿರ್ಮಾಣಕ್ಕೆ ಬೇಕಾದ ನಿವೇಶನವನ್ನು ಶಾಸಕರು ಪರಿಶೀಲನೆ ನಡೆಸಿದರು. ಕೊಳಗೇರಿ ಅಭಿವೃದ್ದಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್‌, ಬಿಬಿಎಂಪಿ ಸಹಾಯಕ ಅಭಿಯಂತರ ತಿಮ್ಮಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಸಪ್ಪ, ಉಲ್ಲಾಳು ವಾರ್ಡ್‌ ಕಾಂಗ್ರೆಸ್‌ನ ಪ್ರಕಾಶ್‌ ಗೌಡ, ಕಾಂಗ್ರೆಸ್‌ನ ಮುಖಂಡ ನಾಗರಾಜ, ಕರ್ನಾಟಕ ಪ್ರವಾಸೋಧ್ಯಮ ನಿಗಮದ ನಿರ್ದೇಶಕ ಸತೀಶ್‌, ಎ.ಪಿ.ಎಂ.ಸಿ ನಿರ್ದೇಶಕ ಕೂರ್ಲಪ್ಪಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next