Advertisement

ಸರಕಾರಿ ಜಾಗ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ : ಅಧಿಕಾರಿಗಳಿಂದ ಕಾಮಗಾರಿಗೆ ತಡೆ

11:14 AM Aug 21, 2021 | Team Udayavani |

ಗುಡಿಬಂಡೆ: ಪಟ್ಟಣದ ಮುಖ್ಯ ರಸ್ತೆಯ ತಾಲೂಕು ಕಛೇರಿ ಮುಂಬಾಗದ ತಾಲೂಕು ಪಂಚಾಯಿತಿಗೆ ಸೇರಿದ ಜಾಗ ಹಾಗೂ ಸರ್ಕಾರಿ ಸಂಯುಕ್ತ ಫ್ರೌಢ ಶಾಲಾ ಕೊಠಡಿಗಳ ಪಕ್ಕದಲ್ಲಿನ ಜಾಗವನ್ನು ಪಟ್ಟಣ ಪಂಚಾಯಿತಿ ವತಿಯಿಂದ ಒತ್ತುವರಿ ಮಾಡಿ ಬೀದಿ ಬದಿ ವ್ಯಾಪಾರಿಗಳು ಮಳಿಗೆ ಕಾಮಗಾರಿ ಕೈಗೊಂಡಿದ್ದು, ಕಾಮಗಾರಿ ನಿಲ್ಲಿಸುವಂತೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಕಾರಿ, ಕ್ಷೇತ್ರ ಶಿಕ್ಷಣಾಕಾರಿಗಳ ವಿರೋಧದಿಂದ ಕಾಮಗಾರಿ ಸ್ಥಗಿತಗೊಂಡಿತು.

Advertisement

ಪಟ್ಟಣ ಪಂಚಾಯಿತಿ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಡೇನಲ್ಲಂ ಯೋಜನೆಯ 25 ಲಕ್ಷ ಅನುದಾನದಲ್ಲಿ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಬಿದಿ ವ್ಯಾಪಾರಿಗಳಿಗೆ ಉಚಿತವಾಗಿ ತಾತ್ಕಲಿಕ ಅಂಗಡಿ ಮಳಿಗೆ ನಿರ್ಮಾಣಕ್ಕೆ ಮುಂದಾಗಿದ್ದು, ಕಾಮಗಾರಿಗಾರಿಗಾಗಿ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಿಗೆ ಸೇರಿದ ಜಾಗ ಎಂದು ಹೇಳುತ್ತಿರುವ ಹಾಗೂ ಪ್ರೌಢ ಶಾಲಾ ಕೊಠಡಿ ಪಕ್ಕದ ಜಾಗದಲ್ಲಿ ನಿರ್ಮಾಣ ಮಾಡಲು ಹೊಗಿದ್ದು, ಈ ಕಾಮಗಾರಿಯನ್ನು ನಿಲ್ಲಿಸುವಂತೆ ಸಾರ್ವಜನಿಕರು ಹಾಗೂ ತಾಲ್ಲೂಕು ಪಂಚಾಯ್ತಿ ಇಒ ರವೀಂದ್ರ ಇದಕ್ಕೆ ಅಕ್ಷೇಪಣೆ ಮಾಡಿರುತ್ತಾರೆ.

ರಸ್ತೆಯಲ್ಲಿ ಅಧಿಕಾರಿಗಳ ಮಧ್ಯ ತಿಕ್ಕಾಟ ಸಾರ್ವಜನಿಕರ ವಿರೋಧದ ನಡುವೆ ಸಂಧಾನ ನಡೆದು, ಶಾಸಕರ ಮಧ್ಯಸ್ಥತಿಕೆಯಲ್ಲಿ ಇತ್ಯಾರ್ಥ ಪಡಿಸಲು ಎರಡು ದಿನಗಳ ಕಾಲವಕಾಶ ಬೇಕು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರಾಜಶೇಖರ ತಾಲ್ಲೂಕು ಪಂಚಾಯ್ತಿ ಇಒ ರವೀಂದ್ರ, ಕ್ಷೇತ್ರಶಿಕ್ಷಣಾಧಿಕಾರಿ ವೆಂಕಟೇಶಪ್ಪ ಅವರನ್ನು ಮನವೊಲಿಸಿ ಕಾಮಗಾರಿಯನ್ನು ತಾತ್ಕಲಿಕವಾಗಿ ನಿಲ್ಲಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಇದನ್ನೂ ಓದಿ :ಆಲಮಟ್ಟಿ ಶಾಸ್ತ್ರೀ ಸಾಗರಕ್ಕೆ ಸಿಎಂ ಬಾಗಿನ : ಪೊಲೀಸ್ ಸರ್ಪಗಾವಲು

ಶಾಲೆಯ ಕೊಠಡಿಗಳಿಗೆ ಹೊಂದುಕೊಂಡತೆ 5 ಅಡಿ ಜಾಗ ಲೋಕೋಪಯೋಗಿ ಇಲಾಖೆ ಚರಂಡಿ ಹಾಗೂ ಪಾದಚಾರಿಗಳ ಒಡಾಡಕ್ಕೆ ಮೀಸಲು ಮಾಡಿದ್ದು, ಇದನ್ನು ಪಟ್ಟಣ ಪಂಚಾಯಿತಿ ಅಂಗಡಿ ಮಳಿಗೆ ನಿರ್ಮಾಣ ಮಾಡುತ್ತಿರುವುದರಿಂದ ಶಾಲೆಯ ಕೊಠಡಿಗಳಲ್ಲಿ ಬೆಳಕು ಬರಲು ಕಿಟಿಕಿಗಳನ್ನು ಅಳವಡಿಸಲಾಗಿದ್ದು, ಮಳಿಗೆ ನಿರ್ಮಾಣದಿಂದ ಬೆಳಕು ಹಾಗೂ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತದೆ, ಕಾಮಗಾರಿ ವಿಚಾರ ಶಾಸಕರಲ್ಲಿ ಈಗಾಗಲೇ ವಿನಂತಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಕಾರಿ ವೆಂಕಟೇಶಪ್ಪ ತಿಳಿಸಿದ್ದಾರೆ.

Advertisement

ಸದರಿ ವಿವಾತ ಜಾಗ ಸರ್ವೆ ನಂಬರ್ 266/5 ಗುಂಟೆ ಜಮೀನು ಕಂದಾಯ ಇಲಾಖೆಗೆ ಸೇರಿದ್ದು ಬ್ರಿಟೀಷ್ ಅಳ್ವಿವೆಕೆಯಲ್ಲಿ ಪ್ರವಾಸಿ ಮಂದಿರ ಹೆಸರಿನಲ್ಲಿ ಪಹಣಿಯಲ್ಲಿ ಬರುತ್ತಿದ್ದು ಈ ಜಾಗಕ್ಕೆ ತಾ.ಪಂ, ಹಾಗೂಪಟ್ಟಣ ಪಂಚಾಯ್ತಿಗೆ ಯಾವುದೇ ಹಕ್ಕು ಇರುವುದಿಲ್ಲಾ ಎಂದು ಕೆಲವು ಹಿರಿಯ ಮುಖಂಡರು ಹೇಳುತ್ತಿದ್ದಾರೆ.

ಈ ವಿವಾದಿತ ಜಾಗ ಯಾರಿಗೆ ಸೇರುತ್ತದೆ ಎಂಬುದು ಮತ್ತು ಆ ಜಾಗದಲ್ಲಿ ಪಟ್ಟಣ ಪಂಚಾಯಿತಿ ಇಲಾಖಾಧಿಕಾರಿಗಳು ಕಾಮಗಾರಿ ಕೈಕೊಳ್ಳುವ ವಿಚಾರ ಶಾಸಕರ ಮಧ್ಯಸ್ಥಿತಿಕೆಗೆ ಹೋಗಿದ್ದು, ಶಾಸಕರು ವಿವಾದಿತ ಜಾಗ ಯಾರಿಗೆ ಸೇರಬೇಕು ಎಂಬುದನ್ನು ತೀರ್ಮಾನಿಸುತ್ತಾರೋ, ಅಥವಾ ಕಂದಾಯ ಇಲಾಖೆಯಗೆ ಒಪ್ಪಿಸಿ, ಪಕ್ಕದಲ್ಲಿರುವ ಪ್ರೌಢ ಶಾಲೆಯ ಅಭಿವೃದ್ದಿಗಾಗಿ ವರ್ಗಾಯಿಸುತ್ತಾರೋ ಕಾದುನೋಡಬೇಕೆದೆ.

Advertisement

Udayavani is now on Telegram. Click here to join our channel and stay updated with the latest news.

Next