Advertisement
ರಾಜ್ಯ ಸರಕಾರ, ಕೇರಳ ವಿಧಾನಸಭೆ, ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಜಂಟಿ ವತಿಯಿಂದ ಈ ತರಗತಿಗಳನ್ನು ನಡೆಸಲಾಗುತ್ತಿದೆ.
ಚೆಮ್ನಾಡ್ ಗ್ರಾಮ ಪಂಚಾಯತ್‌ನಲ್ಲಿ ಈ ಸಂಬಂಧ ನಡೆಯುತ್ತಿರುವ ಚಟುವಟಿಕೆಗಳು ಈ ನಿಟ್ಟಿನಲ್ಲಿ ಮುಕ್ತ ಪ್ರಶಂಸೆಗೆ ಪಾತ್ರವಾಗಿವೆ. ಇಲ್ಲಿನ ಪ್ರತಿ ಮನೆಯ ಕನಿಷ್ಠ ಒಬ್ಬ ವ್ಯಕ್ತಿಗೆ ಸಂವಿಧಾನದ ಕುರಿತು ಜಾಗೃತಿ ಮೂಡಿಸುವಲ್ಲಿ ಪಂಚಾಯತ್ ಯಶಸ್ವಿಯಾಗಿದೆ. ಇಲ್ಲಿನ 23 ವಾರ್ಡ್ ಗಳಲ್ಲಿ 180 ತರಗತಿಗಳು ಈಗಾಗಲೇ ನಡೆದಿವೆ. ಕೆಲವು ವಾರ್ಡ್‌ಗಳಲ್ಲಿ 20ಕ್ಕೂ ಅ ಧಿಕ ತರಗತಿಗಳು ಜರಗಿವೆ. ಕುಟುಂಬಶ್ರೀ ನೆರೆಕರೆ ಕೂಟಗಳ ಮೂಲಕವೂ ವಿವಿಧೆಡೆ ತರಗತಿಗಳು ನಡೆದಿವೆ.
Related Articles
Advertisement
ಸಂವಿಧಾನ ಸಂಗಮ ಕಾರ್ಯಕ್ರಮ ರಾಜ್ಯ ಸರಕಾರ, ಕೇರಳ ವಿಧಾನಸಭೆ, ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿ ಕಾರ ಜಂಟಿ ವತಿಯಿಂದ ನಡೆಸಲಾಗುತ್ತಿರುವ ಸಂವಿಧಾನ ಸಾಕ್ಷರತಾ ಜನಪರ ಶಿಕ್ಷಣ ಕಾರ್ಯಕ್ರಮ ಅಂಗವಾಗಿ ಸಂವಿಧಾನ ಸಂಗಮ ಕಾರ್ಯಕ್ರಮ ಚೆಮ್ನಾಡ್ ಗ್ರಾಮಪಂಚಾಯತ್‌ನಲ್ಲಿ ಜರುಗಿತು. ವಿಪಕ್ಷ ನೇತಾರ ಉಮ್ಮನ್ ಚಾಂಡಿ ಸಮಾರಂಭವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಕಲ್ಲಟ್ರ ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ಶಾಜುಜಾನ್ ಪ್ರಧಾನ ಭಾಷಣ ಮಾಡಿದರು. ಪಂಚಾಯತ್ ಉಪಾಧ್ಯಕ್ಷೆ ಶಕುಂತಲಾ ಕೃಷ್ಣನ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ಶಂಸುದ್ದೀನ್ ತೆಕ್ಕಿಲ್, ಗೀತಾ ಗೋಪಾಲಕೃಷ್ಣನ್, ಎ. ಶಾಸಿಯಾ, ಸದಸ್ಯರಾದ ಕೆ. ಮಾಧವನ್ ನಾಯರ್, ಎನ್.ವಿ. ಬಾಲನ್, ರೇಣುಕಾ ಭಾಸ್ಕರನ್, ತಂಗಮಣಿ ಚೆರುಕರ ಮೊದಲಾದವರು ಉಪಸ್ಥಿತರಿದ್ದರು.