Advertisement

ಪ್ರಜ್ಞೆಯಿಂದ ಮನಸ್ಸು, ಇಂದ್ರಿಯ ನಿಯಂತ್ರಣ: ಅಶೋಕ್‌ ಕುಮಾರ್‌

12:33 PM Mar 16, 2017 | |

ಬೆಳ್ತಂಗಡಿ : ಮನಸ್ಸು ಮತ್ತು ಇಂದ್ರಿಯಗಳ ನಿಯಂತ್ರಣ ಪ್ರಜ್ಞೆಯಿಂದ ಸಾಧನೆ ಸಾಧ್ಯ ಎಂದು ಎಂ.ಎಲ್‌.ಟಿ.ಸಿ. ಕಾಲೇಜಿನ ಪ್ರಾಂಶುಪಾಲ ಅಶೋಕ್‌ ಕುಮಾರ್‌ ಹೇಳಿದರು.

Advertisement

ಉಜಿರೆ ಎಸ್‌ಡಿಎಂ ಧೀಮಂತ ಧೀಮಹಿ ಹಾಸ್ಟೆಲ್‌ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. 

ಪ್ರತಿಭೆಯಿಲ್ಲದೆ ಮನುಷ್ಯಇಲ್ಲ. ಪ್ರತಿಯೋರ್ವರಿಗೂ ಅವರವರದೇ ಆದ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿಕೊಳ್ಳಲು ಮೊದಲು ನಮ್ಮ ಮನಸ್ಸು ಮತ್ತು ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಬೇಕು. ಜಗತ್ತಿನಲ್ಲಿ ನಕಾರಾತ್ಮಕ ಪ್ರಭಾವವಿರುತ್ತದೆ. ಅಂತಹ ಸಮಯದಲ್ಲಿ ನಮ್ಮ ಜೀವನದ ಉದ್ದೇಶ ಮತ್ತು ಗುರಿಯೆಡೆಗೆ ಲಕ್ಷéವಿಟ್ಟು ಏಕಾಗ್ರತೆ ಕಾಯ್ದುಕೊಳ್ಳಬೇಕು ಎಂದರು.

ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಸೋಮಶೇಖರ ಶೆಟ್ಟಿ, ಎಸ್‌ಡಿಎಂ ಶಿಕ್ಷಣ ಸಂಸೆœಯ ಉಪ ಪ್ರಾಂಶುಪಾಲ ಟಿ. ಎನ್‌. ಕೇಶವ ಭಾಗವಹಿಸಿದ್ದರು. ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ನವೀನ್‌ ಜೈನ್‌ ಸ್ವಾಗತಿಸಿ, ವಿದ್ಯಾರ್ಥಿನಿ ಸುವರ್ಚಲಾ ಕಾರ್ಯಕ್ರಮ  ನಿರೂಪಿಸಿದರು. ಉಪನ್ಯಾಸಕ ಮಹೇಶ್‌ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next