Advertisement

ನರಿಮೊಗರು: ಮಳೆಗೆ ಕೊಚ್ಚಿಹೋದ ಭಕ್ತಕೋಡಿ-ತೌಡಿಂಜ-ಕಡ್ಯ ಸಂಪರ್ಕ ರಸ್ತೆ

02:35 AM Jun 09, 2018 | Team Udayavani |

ನರಿಮೊಗರು: ನಿರಂತರ ಸುರಿತಯುತ್ತಿರುವ ಮಳೆಯಿಂದಾಗಿ ಮುಂಡೂರು ಗ್ರಾ.ಪಂ. ಕ್ಕೊಳಪಟ್ಟ ಭಕ್ತಕೋಡಿ-ತೌಡಿಂಜ-ಕಡ್ಯ ಸಂಪರ್ಕ ರಸ್ತೆಯು ಕೊಚ್ಚಿಹೋಗಿದ್ದು, ಈ ಪರಿಸರದ ಜನತೆ ಸಂಪರ್ಕ ಕಡಿತದ ಬೀತಿ ಎದುರಿಸುತ್ತಿದ್ದಾರೆ. ಭಕ್ತಕೋಡಿಯಿಂದ ತೌಡಿಂಜ ಮೂಲಕ ಕಡ್ಯ ಭಾಗವನ್ನು ಸಂಪರ್ಕಿಸುವ ಈರಸ್ತೆಯು ಮಳೆಯಿಂದಾಗಿ ಕೊಚ್ಚಿಹೋಗಿದೆ. ಈ ರಸ್ತೆಗೆ ಈ ಹಿಂದಿನ ಅವಧಿಯಲ್ಲಿ ಶಾಸಕರ 10 ಲಕ್ಷರೂ ಅನುದಾನದಲ್ಲಿ ರಸ್ತೆಯ ಒಂದು ಭಾಗದಲ್ಲಿ ಕಾಂಕ್ರೀಟಿಕರಣಗೊಳಿಸಲಾಗಿತ್ತು.ಈಗ ನಿರಂತರ ಮಳೆಯಿಂದಾಗಿ  ಆ ಕಾಂಕ್ರೀಟಿಕೃತ ರಸ್ತೆಗೂ ಹಾನಿಯಾಗಿದೆ. ಉಳಿದ ಕಚ್ಚಾ ರಸ್ತೆಯು ಮಳೆ ನೀರಿಗೆ ಕೊಚ್ಚಿಹೋಗಿದ್ದು ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.

Advertisement

25ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ
ಈ ರಸ್ತೆಯ ಮೂಲಕ ತೌಡಿಂಜ,ಕಡ್ಯ ಪರಿಸರದ 25ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಲ್ಪಿಸುತ್ತಿದೆ. ಈಗ ಮಳೆಯಿಂದಾಗಿ ಈ ಮನೆಗಳಿಗೆ ಹೋಗಲು ಸಮಸ್ಯೆಯಾಗಿದೆ. ಈಗ ಮಳೆಗಾಲದಲ್ಲಿ ಯಾವುದೇ ದುರಸ್ತಿಯ ಸಾಧ್ಯತೆ ಕಡಿಮೆ.ನಿರಂತರ ಮಳೆಯಿಂದ ಯಾವುದೇ ಕೆಲಸ ಮಾಡಲು ಕಷ್ಟದ ಸ್ಥಿತಿ ಇದೆ.

ಮನವಿ ಮಾಡಲಾಗಿದೆ
ಮಳೆಯಿಂದಾಗಿ ರಸ್ತೆ ಹಾನಿಯಾಗಿರುವ ಕುರಿತು ಗ್ರಾ.ಪಂ.ಅಧ್ಯಕ್ಷರಿಗೆ ಹಾಗೂ ಅಭಿವೃದ್ದಿ ಅಧಿಕಾರಿಯವರಿಗೆ ಮನವಿ ಮಾಡಲಾಗಿದೆ. ಅವರಿಂದ ಸಕರಾತ್ಮಕ ಸ್ಪಂದನೆ ದೊರಕಿದೆ.ಹಾಗೂ ಸಂಸದ, ಶಾಸಕರಿಗೆ, ತಾ.ಪಂ., ಜಿ.ಪಂ.ಸದಸ್ಯರಿಗೂ ಮನವಿ ಮಾಡಲಾಗಿದೆ. ಕೂಡಲೇ ಈ ರಸ್ತೆಯ ಅಭಿವೃದ್ದಿ ಕುರಿತು ಗಮಹರಿಸುವಂತೆ ಮುಂಡೂರು ಗ್ರಾ.ಪಂ. ಮಾಜಿ ಸದಸ್ಯ ಬಾಲಚಂದ್ರ ಕಡ್ಯ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next