Advertisement

ರಾಜ್ಯಸಭಾ ಕಲಾಪ ರೆಕಾರ್ಡ್; ಕಾಂಗ್ರೆಸ್ ಸಂಸದೆ ಅಮಾನತು

07:26 PM Feb 10, 2023 | Team Udayavani |

ನವದೆಹಲಿ: ಸದನದ ಕಲಾಪ ಚಿತ್ರೀಕರಣ ಮಾಡಿದ್ದಕ್ಕಾಗಿ ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅವರನ್ನು ಬಜೆಟ್ ಅಧಿವೇಶನದ ಉಳಿದ ಭಾಗಕ್ಕೆ ಅಮಾನತುಗೊಳಿಸಿ ರಾಜ್ಯಸಭಾಧ್ಯಕ್ಷ ಮತ್ತು ಉಪಾಧ್ಯಕ್ಷ ಜಗದೀಪ್ ಧನ್ಕರ್ ಅವರು ಶುಕ್ರವಾರ ಆದೇಶ ನೀಡಿದ್ದಾರೆ.

Advertisement

ಸದನದ ಒಳಗಿನಿಂದ ಅವರು ವಿಡಿಯೋವನ್ನು ಟ್ವೀಟ್ ಮಾಡಿದ ನಂತರ ಅಮಾನತುಗೊಳಿಸಲಾಗಿದೆ. ಇದರಲ್ಲಿ ವಿರೋಧ ಪಕ್ಷದ ಸಂಸದರು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ಧನ್ಯವಾದ ನಿರ್ಣಯದ ಪ್ರತಿಕ್ರಿಯೆಯನ್ನು ಪ್ರತಿಭಟಿಸಿದರು.

ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧನ್ಕರ್ ಅವರು ಈ ವಿಷಯದ ಬಗ್ಗೆ ಗಂಭೀರ ದೃಷ್ಟಿಕೋನ ವ್ಯಕ್ತಪಡಿಸಿ ಇದು ಅವರ ಕಡೆಯಿಂದ ಅಹಿತಕಾರಿ ಚಟುವಟಿಕೆ ಎಂದು ನಿರೂಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next