Advertisement

ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿಯೇ ಬೇಡ ಅಂತಾರೆ ಕಾಂಗ್ರೆಸ್ಸಿಗರು

12:30 AM Mar 08, 2019 | Team Udayavani |

ಕಾಂಗ್ರೆಸ್‌ನ ಕೇಂದ್ರ ನಾಯಕತ್ವವೀಗ ಈಗ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿಯಬೇಕೋ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸಬೇಕೋ ಎನ್ನುವ ವಿಷಯದಲ್ಲಿ ಗೊಂದಲ ಎದುರಿಸುತ್ತಿದೆ. ರಾಜ್ಯ ಕಾಂಗ್ರೆಸ್‌ ಘಟಕಗಳು ಮಾತ್ರ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿಯನ್ನು ವಿರೋಧಿಸುತ್ತಿರುವುದು ಸ್ಪಷ್ಟ. ಕೇಂದ್ರ ಕಾಂಗ್ರೆಸ್‌ನ ಇಚ್ಛೆಗೆ ತದ್ವಿರುದ್ಧವಾಗಿ ದೆಹಲಿ, ಪಂಜಾಬ್‌, ಹರ್ಯಾಣ ಮತ್ತು ಗೋವಾದಲ್ಲಿನ ಕಾಂಗ್ರೆಸ್‌ ನಾಯಕರು ಪ್ರಾದೇಶಿಕ ಪಕ್ಷಗಳೊಂದಿಗಿನ ಮೈತ್ರಿಯನ್ನು ನಿರಾಕರಿಸಿವೆ ಕಾಂಗ್ರೆಸ್‌ನ ರಾಜ್ಯ ಘಟಕಗಳು.  

Advertisement

ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರೆ ವಿಧಾನಸಭಾ ಚುನಾವಣೆಗಳಲ್ಲಿ ಸಾಂಪ್ರದಾಯಿಕ ಮತಗಳ ಮುನಿಸು ಎದುರಿಸಬೇಕಾಗುತ್ತದೆ ಎಂಬುದು ರಾಜ್ಯ ಕಾಂಗ್ರೆಸ್‌ ಘಟಕಗಳ ವಾದ.  ಅಲ್ಲದೇ ಪಕ್ಷದ ಕಾರ್ಯಕರ್ತರ ಉತ್ಸಾಹವೂ ಕುಂದುತ್ತದೆ ಎನ್ನುವ ಅವುಗಳ ಮಾತೂ ಸುಳ್ಳೇನೂ ಅಲ್ಲ. ಈ ವರ್ಷ ಹರ್ಯಾಣಾ ರಾಜ್ಯ ಚುನಾವಣೆ ಎದುರಿಸಲಿದ್ದು, ಕಾಂಗ್ರೆಸ್‌ ಅಲ್ಲಿ ದುರ್ಬಲವಾಗಿದೆ. ರಾಜ್ಯ ಘಟಕಗಳಲ್ಲಿನ ಬಿರುಕುಗಳ ಬಗ್ಗೆ ಅರಿವಿರುವುದರಿಂದ ಕೇಂದ್ರ ನಾಯಕತ್ವ ಹರ್ಯಾಣಾದಲ್ಲಿ ಆಪ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಲಹೆ ನೀಡಿತ್ತು. ಆದರೆ ಹರ್ಯಾಣಾ ಕಾಂಗ್ರೆಸ್‌ ಮಾತ್ರ ಈ ಸಲಹೆಯನ್ನು ಒಪ್ಪುತ್ತಿಲ್ಲ. ಹರ್ಯಾಣದಲ್ಲಿ ಆಪ್‌ ನಮಗಿಂತಲೂ ದುರ್ಬಲವಾಗಿದೆ, ಅದರೊಂದಿಗೆ ಮೈತ್ರಿ ಮಾಡಿಕೊಳ್ಳುವುದರಿಂದ ಏನೂ ಲಾಭವಿಲ್ಲ ಎನ್ನುವುದು ಹರ್ಯಾಣಾ ಕಾಂಗ್ರೆಸ್ಸಿಗರ ವಾದ. 

ಇನ್ನು ಗೋವಾದ ವಿಚಾರದಲ್ಲೂ ರಾಜ್ಯ ಕಾಂಗ್ರೆಸ್‌ ಹೀಗೆಯೇ ಯೋಚಿಸುತ್ತದೆ. ಆಪ್‌ನೊಂದಿಗಿನ ಮೈತ್ರಿಯಿಂದ ಆ ಪಕ್ಷಕ್ಕೆ ಲಾಭವಾಗುತ್ತದೆಯೇ ಹೊರತು ಕಾಂಗ್ರೆಸ್‌ಗಲ್ಲ ಎನ್ನುವುದು ಗೋವಾ ಕಾಂಗ್ರೆಸ್‌ನ ಅಂಬೋಣ. “2017ರ ವಿಧಾನಸಭಾ ಚುನಾವಣೆಯಲ್ಲಿ ಆಪ್‌ 40ರಲ್ಲಿ 38 ಸ್ಥಾನಗಳಲ್ಲಿ ಸೋತಿತು. 2022ರಲ್ಲಿ ಮತ್ತೆ ಚುನಾವಣೆ ಎದುರಾಗುತ್ತದೆ, ಅಷ್ಟರಲ್ಲೇ ಕಾಂಗ್ರೆಸ್‌ ಗೋವಾದಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಬೇಕಿದೆ. ಈಗ ಲೋಕಸಭಾ ಚುನಾವಣೆಯಲ್ಲಿ ಆಪ್‌ನೊಂದಿಗೆ ಮೈತ್ರಿ ಮಾಡಿಕೊಂಡರೆ, ಮತದಾರರು ಗೊಂದಲಗೊಳ್ಳುತ್ತಾರೆ’ ಎನ್ನುತ್ತಾರೆ ಕಾಂಗ್ರೆಸ್‌ ನಾಯಕರೊಬ್ಬರು. 

Advertisement

Udayavani is now on Telegram. Click here to join our channel and stay updated with the latest news.

Next