Advertisement
ಅವರು ಏ.26 ರಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಚುನಾವಣಾ ಕಾಯ೯ದಲ್ಲಿ ಹೆಬ್ರಿ ಬ್ಲಾಕ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಯುವ ಕಾಂಗ್ರೆಸ್ ಕಾಯ೯ಕತ೯ರ ಸಮಾವೇಶದಲ್ಲಿ ಮಾತನಾಡಿದರು.
ಕಾಕ೯ಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ ಸಾಗರೋಪಾದಿಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವುದು ನೋಡಿದರೆ ಜನ ಬದಲಾವಣೆ ಬಯಸಿದ್ದಾರೆ ಎನ್ನುವುದು ಸ್ಪಷ್ಟ .ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವ ಹಾಗೂ ರಾಜ್ಯದಲ್ಲಿಯೇ ಆದಶ೯ ಶಾಸಕನಾಗಿ ಜನ ಸೇವೆ ಮಾಡಬೇಕು ಎಂಬ ನನ್ನ ಸಂಕಲ್ಪಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ.ನೀವು ನನ್ನ ಮೇಲೆ ಇಟ್ಟ ಭರವಸೆಗೆ ಚ್ಯುತಿ ಬಾರದಂತೆ ಕೆಲಸಮಾಡುತ್ತೇನೆ ಎಂದರು. ದೇವರೆ ರಜೆ ಕೊಟ್ಟಿದ್ದಾರೆ
ಮೇ.1ರಂದು ಮಧ್ಯಾಹ್ನ 2 ಗಂಟೆಗೆ ಕಾಂಗ್ರೆಸ್ ಕಾಲ್ನಡಿಗೆ ಜಥಾ ಹಾಗೂ ಬೃಹತ್ ಸಮಾವೇಶ ಕಾಕ೯ಳ ಸ್ವರಾಜ್ ಮೈದಾನದಿಂದ ಬಂಡಿಮಠ ತನಕ ನಡೆಯಲಿದೆ. ಮನಗೆ ಕಾಖ೯ನೆಗಳಿಗೆ ರಜೆ ಕೊಟ್ಟು ಅದರ ಜತೆಗೆ ಹಣಕೊಟ್ಟು ತರುವ ಜನ ಬೇಡ. ಸತ್ಯ ಧಮ೯ದ ಹಾದಿಯಲ್ಲಿ ನಾವು ಸೇರುವ. ಆ ದಿನ ಕಾಮಿ೯ಕ ದಿನಾಚರಣೆ ಇರುವುದರಿಂದ ಸಾವ೯ತ್ರಿಕ ರಜೆ ಇದೆ.ದೇವರೆ ನಮಗೆ ರಜೆ ಕೊಟ್ಟಿದ್ದಾರೆ ಆದ್ದರಿಂದ ಬೃಹತ್ ಸಂಖ್ಯೆಯಲ್ಲಿ ಜನಸೇರಿ ಬೃಹತ್ ಕಾಯ೯ಕತ೯ರ ಸಭೆಯನ್ನು ಯಶಸ್ವಿಗೊಳಿಸುವಂತೆ ಉದಯ ಶೆಟ್ಟಿ ವಿನಂತಿಸಿದರು.
Related Articles
Advertisement
ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ಮಾತನಾಡಿ ಕಾರ್ಕಳದಲ್ಲಿ ದ್ವೇಷ ಮತ್ತು ವ್ಯಕ್ತಿ ನಿಂದನೆಯ ರಾಜಕಾರಣ ಪ್ರಾರಂಭ ಮಾಡಿದ್ದೇ ಸುನಿಲ್ ಕುಮಾರ್ ಅದಕ್ಕೆ ಮೊದಲ ಬಲಿಯಾದವರು ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿಯವರು. 2004 ರ ಚುನಾವಣೆಯಲ್ಲಿ ಹೆಬ್ರಿಯ ಸುಚೇತಾ ಶೆಟ್ಟಿ ಕೊಲೆ ಪ್ರಕರಣವನ್ನು ಮಾಜಿ ಶಾಸಕರ ಕುಟುಂಬಿಕರ ಮೇಲೆ ಹೊರಿಸಿ, ಚುನಾವಣೆ ಗೆದ್ದಿದ್ದರು. ಗೆದ್ದನಂತರ ಆರೋಪಿಗಳಿಗೆ ಪರೋಕ್ಷ ರಕ್ಷಣೆ ನೀಡಿದಂತೆ ಈ ಕೊಲೆ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಿಸಿ ಪ್ರಕರಣಕ್ಕೆ ಅಂತ್ಯ ಹಾಡಿದ್ದರು. ಮುಂದೆ ನೊಂದ ಸಂತ್ರಸ್ತ ಕುಟುಂಬದತ್ತ ಮುಖ ಮಾಡದೆ ರಾಜಕೀಯ ಬೇಳೆ ಬೇಯಿಸಿಕೊಂಡ ಶಾಸಕರು, ಅಂದಿನ ಚುನಾವಣೆ ಸಂದರ್ಭ ಎಚ್.ಗೋಪಾಲ ಭಂಡಾರಿ ಅವರ ಕುಟುಂಬಿಕರಿಂದಲೇ ಈ ಕೊಲೆ ನಡೆದಿದೆ ಎಂದು ಆರೋಪಿಸಿ, ಆ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡಿರುವುದನ್ನು ಅವರ ಪತ್ನಿ ಮಕ್ಕಳು ಮತ್ತು ಕುಟುಂಬಿಕರು ಮರೆತಿಲ್ಲ.ಮುಂದೆಯೂ ಮರೆಯುವುದಿಲ್ಲ.
ಎಚ್.ಗೋಪಾಲ ಭಂಡಾರಿ ಅವರ ತಾಯಿ ಗಿರಿಜಾ ಭಂಡಾರಿ ಅವರು ಕೃಷಿಕರಾಗಿದ್ದು, ಫಲಾನುಭವಿಯಾಗಿ ಸಹಜವಾಗಿ ಸರಕಾರದಿಂದ 30 ಸಾವಿರ ರೂ.ನ ಟಿಲ್ಲರ್ ಪಡೆದಾಗ, ಅಲ್ಲೂ ಅಪಪ್ರಚಾರ ನಡೆಸಿ ಮಾನಸಿಕ ಕಿರುಕುಳ ನೀಡಿ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಇದೀಗ ಕಾಂಗ್ರೆಸ್ ನ ಪ್ರಚಾರ ನೋಡಿ ಸೋಲಿನ ಭೀತಿಯಿಂದ ತಪ್ಪಿಸಿಕೊಳ್ಳಲು ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ನಮಗೆ ಉದಯಣ್ಣ ಬೇಕುಕಾಕ೯ಳಕ್ಕೆ ಉತ್ತಮ ಅಭ್ಯರ್ಥಿಯನ್ನು ಕಾಂಗ್ರೆಸ್ ನಮಗೆ ಕೊಟ್ಟಿದೆ.ಉದಯಣ್ಣನಿಗೆ ಸಮಾಜ ಸೇವೆ ಮಾಡಲು ರಾಜಕೀಯ ಬೇಕಾಗಿಲ್ಲ.ಆದರೆ ಉದಯಣ್ಣ ಸೇವೆ ನಮಗೆ ಬೇಕು.ನಮ್ಮ ಎಲ್ಲಾ ಯುವ ಕಾಯ೯ಕತ೯ರು ಈ ನಿಟ್ಟಿನಲ್ಲಿ ಒಟ್ಟಾಗಿ ಶ್ರಮಸಿ ಉದಯಣ್ಣ ನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಹೆಬ್ರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಶೆಟ್ಟಿ ಹೇಳಿದರು. ಬೃಹತ್ ಸಂಖ್ಯೆಯಲ್ಲಿ ಬಿಜೆಪಿ ಯುವ ಕಾಯ೯ಕತ೯ರು ಕಾಂಗ್ರೆಸ್ ಸೇಪ೯ಡೆ
ಯುವ ಸಮಾವೇಶದಲ್ಲಿ ಶಿವಪುರ,ಚಾರ,ಸೋಮೇಶ್ವರ ಮೊದಲಾದ ಕಡೆಗಳಿಂದ ನೂರಾರು ಯುವ ಬಿಜೆಪಿ ಕಾಯ೯ಕತ೯ರು ಕಾಂಗ್ರೆಸ್ ಸೇಪ೯ಡೆಗೊಂಡರು. ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಅಧ್ಯಕ್ಷ ಚಂದ್ರಶೇಖರ್ ಬಾಯರಿ, ಪ್ರಚಾರ ಸಮಿತಿ ಅಧ್ಯಕ್ಷ ನವೀನ್ ಕೆ. ಅಡ್ಯಂತಾಯ ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜಿನಿ ಹೆಬ್ಬಾರ್ ,ಪ್ರಮುಖರಾದ ರಕ್ಷಿತ್ ರಾಜ್,ಜಸ್ಟಿನ್ ಅಜೆಕಾರು ಮೊದಲಾದವರು ಉಪಸ್ಥಿತರಿದ್ದರು.ನಿತೀಶ್ ಎಸ್.ಪಿ.ಕಾಯ೯ಕ್ರಮ ನಿರೂಪಿಸಿದರು.