Advertisement

Lok Sabha Election: 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ: ಸಚಿವ ಮಂಕಾಳ ವೈದ್ಯ

08:00 PM Dec 20, 2023 | Team Udayavani |

ಕಾರವಾರ: ರಾಜ್ಯದ ಲೋಕಸಭೆಯ 28 ಕ್ಷೇತ್ರಗಳ ಪೈಕಿ 20 ರಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಹೇಳಿದರು‌ .

Advertisement

ಕಾರವಾರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಈ ಸಲ ಕಾಂಗ್ರೆಸ್ ಪಾಲಾಗಲಿದೆ. ಚುನಾವಣೆ ತಂತ್ರಗಾರಿಕೆ ಮತ್ತು ಅಭ್ಯರ್ಥಿ ಬಗ್ಗೆ ಈಗಲೇ ಹೇಳುವುದಿಲ್ಲ ಎಂದ ಅವರು ಜನರಿಗೆ ಮಾತುಕೊಟ್ಟಂತೆ ಗ್ಯಾರಂಟಿ ಜಾರಿಯಾಗಿವೆ. ಗ್ಯಾರಂಟಿ ಮೂಲಕ ಸಾಮಾಜಿಕ ನ್ಯಾಯ ಕಾಪಾಡಲಾಗಿದೆ ಎಂದರು‌ .

ನಬಾರ್ಡ್ ಯೋಜನೆಯ ಕಸ ನಿರ್ವಹಣೆ , ಕಡಲತೀರ ಹಾಗೂ ಸಮುದ್ರ ಆರೋಗ್ಯ ರಕ್ಷಣೆಯ 800 ಕೋಟಿ ರೂ. ಯೋಜನೆಯಲ್ಲಿ ಓರ್ವ ವ್ಯಕ್ತಿಗೆ ವಾಸನೆ ಕಂಡು ಬರತೊಡಗಿದೆಯಂತೆ. ಆ ವ್ಯಕ್ತಿಗೆ ಮೆಡಿಕಲ್ ಕಾಲೇಜಿನ ಅವ್ಯವಹಾರದ ವಾಸನೆ ಬಡಿಯುವುದೇ ಇಲ್ಲ ಎಂದು ವ್ಯಂಗ್ಯವಾಡಿದರು‌.

ಕಸ ನಿರ್ವಹಣೆ ಯೋಜನೆ ಕರಾವಳಿಯ ಮೂರು ಜಿಲ್ಲೆಗೆ ಸಂಬಂಧಿಸಿದ್ದು . ಕಾರವಾರ ಜಿಲ್ಲೆಯ ಘಟ್ಟದ ಮೇಲೆ ಸಹ ಕೆಲ ಕಾರ್ಯ ಯೋಜನೆಗಳಿವೆ. ಪ್ಲಾಸ್ಟಿಕ್ ನದಿ ಹಾಗೂ ಸಮುದ್ರ ಸೇರದಂತೆ ತಡೆಯುವ ಯೋಜನೆ ಅದಾಗಿದೆ. ಕರಾವಳಿ ತೀರ ರಕ್ಷಣೆ ಹಾಗೂ ಪ್ರವಾಸೋದ್ಯಮ ಪೂರಕ ಕಾರ್ಯಗಳು ಸಹ ಯೋಜನೆಯಲ್ಲಿ ಸೇರಿವೆ ಎಂದರು‌ .

ಉಸ್ತುವಾರಿ ಸಚಿವರಾಗಿ ನೀವು ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಸಭೆಯನ್ನು ಮಾಡಿದ ನಂತರ ಕ್ರಿಮ್ಸ್ ಅವ್ಯವಸ್ಥೆ ಸುಧಾರಣೆಯಾಗಿದೆಯಾ ಎಂಬ ಪ್ರಶ್ನೆಗೆ, ಆ ವ್ಯವಸ್ಥೆ ಒಂದು ಸಭೆಯಲ್ಲಿ ಸುಧಾರಿಸುವಂಥದ್ದಲ್ಲ. ಅದಕ್ಕೆ ಮತ್ತೆರಡು ಸಭೆಯ ಅವಶ್ಯಕತೆಯಿದೆ ಎಂದರು.

Advertisement

ನೀವು ಉಸ್ತುವಾರಿ ಸಚಿವರಾದ ಮೇಲೆ ಹಳಿಯಾಳ ಕ್ಷೇತ್ರದಲ್ಲಿ ಸಂಚರಿಸಿಲ್ಲವಲ್ಲ ಎಂಬ ಪ್ರಶ್ನೆಗೆ , ಅಲ್ಲಿ 9 ಸಲ ಗೆದ್ದು ಕ್ಷೇತ್ರ ಪ್ರತಿನಿಧಿಸಿದ ದೊಡ್ಡವರು ಇದ್ದಾರೆ . ಅವರ ಮುಂದೆ ನಾವು ಸಣ್ಣವರು ಎಂದು ದೇಶಪಾಂಡೆ ಅವರ ಹೆಸರು ಹೇಳದೆ ಪ್ರತಿಕ್ರಿಯಿಸಿದರು. ಹಳಿಯಾಳ ಜೊಯಿಡಾ ಭಾಗದ ಸಮಸ್ಯೆ ಪರಿಹರಿಸಲು ದೊಡ್ಡವರು ಸಮರ್ಥರಿದ್ದಾರೆಂದು ಸಚಿವ ಮಂಕಾಳು ವೈದ್ಯ ಅaಭಿಪ್ರಾಯಪಟ್ಟರು. ಮರಳು ಸಮಸ್ಯೆಗೆ ವಾರದಲ್ಲಿ ಪರಿಹಾರ ಸಿಗಲಿದೆ ಎಂದರು‌ .

Advertisement

Udayavani is now on Telegram. Click here to join our channel and stay updated with the latest news.

Next