ಮುಂಬೈ: ಲೋಕಸಭಾ ಮಾಜಿ ಸ್ಪೀಕರ್, ಕಾಂಗ್ರೆಸ್ ಮುಖಂಡ ಶಿವರಾಜ್ ಪಾಟೀಲ್ ಸೊಸೆ ಅರ್ಚನಾ ಪಾಟೀಲ್ ಚಾಕುರ್ಕರ್ ಶನಿವಾರ (ಮಾರ್ಚ್ 30) ಬಿಜೆಪಿಗೆ ಸೇರ್ಪಡೆಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Kannada Cinema; ‘ತಾಜಾ ತಾಜಾ ಸುದ್ದಿ’ಗೆ ಮೆಚ್ಚುಗೆ: ‘ಕೆಂಡ’ ಚಿತ್ರದ ಹಾಡಿನ ಸಂಭ್ರಮ
ಅರ್ಚನಾ ಪಾಟೀಲ್ ಉದ್ಗೀರ್ ನಲ್ಲಿರುವ ಲೈಫ್ ಕೇರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿದ್ದು, ಅವರ ಪತಿ ಶೈಲೇಶ್ ಪಾಟೀಲ್ ಚಂದೂರ್ ಕರ್ ಕಾಂಗ್ರೆಸ್ ನ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ.
ನಾನು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಾರಿ ಶಕ್ತಿ ವಂದನ್ ಅಭಿಯಾನ್ ದಿಂದ ಭಾರೀ ಪ್ರಭಾವಕ್ಕೊಳಗಾಗಿದ್ದೇನೆ. ಇದರಿಂದ ಮಹಿಳೆಯರಿಗೆ ಸಮಾನ ಅವಕಾಶ ದೊರಕಲಿದೆ ಎಂದು ಅರ್ಚನಾ ಪಾಟೀಲ್ ಬಿಜೆಪಿ ಸೇರ್ಪಡೆ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ನಾನು ಲಾತೂರ್ ನಲ್ಲಿ ಕೆಳಹಂತದಿಂದ ಕಾರ್ಯನಿರ್ವಹಿಸಿದ್ದೇನೆ, ಇದೀಗ ಬಿಜೆಪಿಯಲ್ಲಿಯೂ ತಳಮಟ್ಟದಿಂದಲೇ ಕಾರ್ಯನಿರ್ವಹಿಸುತ್ತೇನೆ. ನಾನು ಯಾವತ್ತೂ ಅಧಿಕೃತವಾಗಿ ಕಾಂಗ್ರೆಸ್ ಸೇರಿರಲಿಲ್ಲ. ಈಗ ನಾನು ಬಿಜೆಪಿಯ ತತ್ವ, ಸಿದ್ದಾಂತದ ಪ್ರಭಾವಕ್ಕೊಳಗಾಗಿ ಬಿಜೆಪಿಗೆ ಸೇರಿದ್ದೇನೆ ಎಂದು ಅರ್ಚನಾ ಪಾಟೀಲ್ ಹೇಳಿದರು.