Advertisement

ಕಾಂಗ್ರೆಸ್‌ ಶೀಘ್ರದಲ್ಲೇ 3 ಹೋಳು: ನಳಿನ್‌

01:09 AM Nov 11, 2021 | Team Udayavani |

ಉಳ್ಳಾಲ: ಮುಂದಿನ ವಿಧಾನಸಭಾ ಚುನಾವಣೆಯ ಮೊದಲು ರಾಜ್ಯದಲ್ಲಿ ಕಾಂಗ್ರೆಸ್‌ ಒಡೆದು ಮೂರು ಹೋಳು ಆಗುತ್ತದೆ. ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಬಣಗಳ ನಡುವೆ ಬಡಿದಾಟ ಆರಂಭವಾಗಲಿದೆ. ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಆಡಳಿತಕ್ಕೆ ಬರಲಿದೆ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ಅಭಿಪ್ರಾಯ ಪಟ್ಟರು.

Advertisement

ಬಂಟ್ವಾಳ ತಾಲೂಕಿನ ಪಜೀರು ಗ್ರಾಮದ ಕಂಬಳಪದವಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮುಂದಿನ ಚುನಾವಣಾ ಪೂರ್ವದಲ್ಲೇ ಕಾಂಗ್ರೆಸ್‌ “ಒಂದು ಮನೆ ಮೂರು ಬಾಗಿಲು’ ಆಗಲಿದೆ. ಈಗಾಗಲೇ ಕಾಂಗ್ರೆಸ್‌ ಪಕ್ಷದೊಳಗೆ ಬಣ ಜಗಳ ಆರಂಭಗೊಂಡಿದ್ದು, ವಿಧಾನಸಭಾಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಬಣಗಳ ನಡುವೆ ತಿಕ್ಕಾಟ ಹೆಚ್ಚಾಗಲಿದೆ ಎಂದು ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಹೇಳುತ್ತಿದ್ದೇನೆ ಎಂದರು.

ಇದನ್ನೂ ಓದಿ:ಪೆಟ್ರೋಲ್‌, ಪಡಿತರ ಸಾಮಗ್ರಿ ಬೇಕಾದರೆ ಲಸಿಕೆ ಕಡ್ಡಾಯ

ಭ್ರಷ್ಟಾಚಾರ,ಭಯೋತ್ಪಾದನೆ ನಿರ್ಮೂಲನೆ
ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಅವರಿಂದ ಆರಂಭಿಸಿ ಮನಮೋಹನ್‌ ಸಿಂಗ್‌ ವರೆಗಿನ ಕಾಂಗ್ರೆಸ್‌ ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ತಾಂಡವವಾಡಿದೆ. ಆದರೆ ಕಳೆದ ಏಳು ವರ್ಷದ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರನಿರ್ಮೂಲನೆ ಯಾಗಿದ್ದು ಭಾರತ ಆಡಳಿತ, ಪರಂಪರೆ, ವೈಚಾರಿಕವಾಗಿ ಉನ್ನತ ಸ್ಥಾನಕ್ಕೆ ಹೋಗುತ್ತಿದ್ದು, ಇಂದು ಜಗತ್ತು ನರೇಂದ್ರ ಮೋದಿಯನ್ನು ಒಪ್ಪಿದೆ ಎಂದು ನಳಿನ್‌ ಕುಮಾರ್‌ ಅವರು ತಿಳಿಸಿದರು.

ಸಚಿವ ಅಂಗಾರ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡಬಿದಿರೆ, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಮೊದ ಲಾದವರು ಜತೆಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next