Advertisement
ಕಲಾಪದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ದೀಪೇಂದರ್ ಹೂಡಾ, ಆಂಧ್ರ, ಹರಿಯಾಣ, ಮಧ್ಯಪ್ರದೇಶ ದಲ್ಲಿ ರೈತರೆಲ್ಲ ಬೀದಿಗಿಳಿದಿದ್ದಾರೆ. ಆದರೂ, ಸರಕಾರ ಅವರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಜತೆಗೆ, ರೈತರು 3 ವರ್ಷಗಳಲ್ಲಿ ಹೆಚ್ಚು ಕಷ್ಟ ಅನುಭವಿಸುತ್ತಿದ್ದಾರೆ ಎಂದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಅನಂತ್‌ಕುಮಾರ್, “ಬುಧವಾರ ನಾವೆಲ್ಲರೂ ರೈತರ ಸಮಸ್ಯೆಗಳ ಕುರಿತು ಚರ್ಚಿಸುವಾಗ ವಿಪಕ್ಷ ಕಾಂಗ್ರೆಸ್ ಸಭಾತ್ಯಾಗ ಮಾಡಿದ್ದೇಕೆ, ಬುಧವಾರದ ಚರ್ಚೆ ವೇಳೆ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ ಎಲ್ಲಿದ್ದರು, ನೀವೆಲ್ಲಿದ್ದಿರಿ? ಈಗ ನೀವು ಮೊಸಳೆ ಕಣ್ಣೀರು ಸುರಿಸುತ್ತಿದ್ದೀರಿ. ರೈತರ ಬಗ್ಗೆ ನಾಟಕೀಯವಾಗಿ ಕರುಣೆ ತೋರಿಸುತ್ತಿದ್ದೀರಿ. ಮೋದಿ ಸರಕಾರವು ಕಳೆದ 3 ವರ್ಷಗಳಲ್ಲಿ ರೈತರಿಗಾಗಿ ಮಾಡಿದ ಕೆಲಸವನ್ನು ಈವರೆಗೆ ಯಾವ ಸರಕಾರವೂ ಮಾಡಿಲ್ಲ’ ಎಂದರು.
ಇದೇ ವೇಳೆ, ಸ್ವಿಸ್‌ನಲ್ಲಿರುವ ಎಚ್‌ಎಸ್‌ಬಿಸಿ ಬ್ಯಾಂಕ್‌ನ ಖಾತೆದಾರರ ಕುರಿತ ತನಿಖೆ ವೇಳೆ ಐಟಿ ಇಲಾಖೆಯು 19 ಸಾವಿರ ಕೋಟಿ ರೂ.ಮೊತ್ತದ ಕಪ್ಪುಹಣವನ್ನು ಪತ್ತೆ ಮಾಡಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟಿÉ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ದೀರ್ಘಕಾಲದಿಂದ ಯಾವುದೇ ಚಟುವಟಿಕೆ ನಡೆಸದೇ ಇದ್ದ 1.62 ಲಕ್ಷ ಶೆಲ್ ಕಂಪನಿಗಳ ನೋಂದಣಿ ರದ್ದು ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.