Advertisement
ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಬೈಂದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ನಾನು ಹಣ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿಲ್ಲ.ನಾಲ್ಕು ಬಾರಿ ಈ ಕ್ಷೇತ್ರದ ಶಾಸಕನಾಗಿ ಸೇವೆ ಸಲ್ಲಿಸಿದ್ದೇನೆ.ರಾಜಕೀಯ ಹಾಗೂ ಉದ್ಯಮದಲ್ಲಿ ಸೋಲು ಕಂಡಾಗಲು ಕ್ಷೇತ್ರಬಿಟ್ಟು ತೆರಳಲಿಲ್ಲ.ಕಷ್ಟದಲ್ಲಿದ್ದಾಗಲು ಕ್ಷೇತ್ರದ ಜನ ಸಮಸ್ಯೆಯಲ್ಲಿದ್ದಾಗ ಸ್ಪಂಧಿಸಿದ್ದೇನೆ.ನಾನು ಕಾಲು ಮುರಿದುಕೊಂಡು ಕಷ್ಟದಲ್ಲಿದ್ದಾಗ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು,ಕಾರ್ಯಕರ್ತರು ನನಗೆ ದೈರ್ಯ ತುಂಬಿ ಸಾಂತ್ವನ ಹೇಳಿದ್ದಾರೆ.ಕಷ್ಟದ ಕಾಲದಲ್ಲೂ ಕೈ ಬಿಡದ ಬೈಂದೂರು ಜನತೆ ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆಯಲ್ಲಿ ಪ್ರಚಂಡ ಬಹುಮತದ ಮೂಲಕ ಆಶೀರ್ವಾದ ನೀಡುವ ವಿಶ್ವಾಸವಿದೆ ಎಂದರು.
ಬೈಂದೂರು ಕ್ಷೇತ್ರದಲ್ಲಿ ಬಿಜೆಪಿಗೆ ಜನರಲ್ಲಿ ಮತ ಕೇಳುವ ಯಾವ ನೈತಿಕತೆಯೂ ಇಲ್ಲವಾಗಿದೆ.ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೆ ಏàರಿದೆ.ದಿನಸಿ ವಸ್ತುಗಳು ದುಬಾರಿಯಾಗಿದೆ.ಹೀಗಾಗಿ ಜನಸಾಮಾನ್ಯರು ಬಿಜೆಪಿ ಸರಕಾರವನ್ನು ತ್ಯಜಿಸುತ್ತಿದ್ದಾರೆ.ಗೋಪಾಲ ಪೂಜಾರಿಯವರ ಜನಪ್ರಿಯತೆಯನ್ನು ಸಹಿಸದ ಬಿಜೆಪಿಗರು ಸುಳ್ಳು ಪ್ರಚಾರ ಸೇರಿದಂತೆ ಅಪಪ್ರಚಾರದಲ್ಲಿ ತೊಡಗಿದ್ದಾರೆ.ಆದರೆ ಬೈಂದೂರು ಕ್ಷೇತ್ರದ ಮತದಾರರು ಗೋಪಾಲ ಪೂಜಾರಿಯವರ ಪರ ಅಪಾರ ಒಲವು ಹೊಂದಿದ್ದಾರೆ.2013ರ ಚುನಾವಣೆಯಲ್ಲಿ ಮೊವತ್ತೂಂದು ಸಾವಿರದ ಮತಗಳ ಅಂತರದಲ್ಲಿ ಗೆಲುವು ಗಳಿಸಿದ್ದೇವು.ಈ ಬಾರಿ ಐವತ್ತುಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದೆ.ಪ್ರತಿ ಬೂತ್ ಮಟ್ಟದಲ್ಲೂ ಕಾಂಗ್ರೇಸ್ ಪರ ಅಲೆ ಇದೆ.ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕನಾಗಿ ಸೇವೆ ನೀಡಿದ ಪೂಜಾರಿಯವರನ್ನು ಅವರ ಜೀವನದ ಕೊನೆಯ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲಿಸುತ್ತಾರೆ ಎಂದು ಬೈಂದೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಸ್.ಮದನ್ ಕುಮಾರ್ ಹೇಳಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ನಿರೀಕ್ಷಿತ ಗೆಲುವು
ಈ ಚುನಾವಣೆಯಲ್ಲಿ ಕೆ.ಗೋಪಾಲ ಪೂಜಾರಿ ಯವರು ಮಾಡಿದ ಅಭಿವೃದ್ದಿ ಹಾಗೂ ಅವರು ಕ್ಷೇತ್ರದ ಜನರ ಜೊತೆ ಇಟ್ಟುಕೊಂಡಿರುವ ನಿರಂತರ ಸಂಪರ್ಕ ಹಾಗೂ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಯೋಜನೆಗಳು ಮತದಾರರ ವಿಶ್ವಾಸಗಳಿಸಿದೆ.ವಂಡ್ಸೆ ಬ್ಲಾಕ್‌ನ 120 ಮತಗಟ್ಟೆಗಳಲ್ಲಿಯೂ ಅತೀ ಹೆಚ್ಚಿನ ಅಂತರದಲ್ಲಿ ಮುನ್ನೆಡೆ ನೀಡಲಿದ್ದೇವೆ ಎಂದು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
Related Articles
Advertisement
ಕಾಂಗ್ರೆಸ್ ನಿಂದ ಭರ್ಜರಿ ಪ್ರಚಾರಬಿಜೆಪಿಯ ಸುಳ್ಳುಗಳಿಗೆ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಭರ್ಜರಿ ತಿರುಗೇಟು ನೀಡಿದೆ.ಕಾರ್ಯಕರ್ತರು ಕೂಡ ಹಳ್ಳಿ ಹಳ್ಳಿಗಳಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ.ಕೊನೆಯ ಹಂತದಲ್ಲಿ ಕಾಂಗ್ರೇಸ್ ಭರ್ಜರಿ ಪ್ರಚಾರದಲ್ಲಿ ತೊಡಗಿರುವುದು ಕಾರ್ಯಕರ್ತರಿಗೆ ಇನ್ನಷ್ಟು ಹುಮ್ಮಸ್ಸು ನೀಡಿದೆ.