ಕಾಪು : ಬಿಜೆಪಿ ಸರಕಾರವು ನಡೆಸುತ್ತಿರುವ ದೇಗುಲ ತೆರವು ಕಾರ್ಯಾಚರಣೆ ಹಾಗೂ ದಿನಬಳಕೆಯ ಸಾಮಾಗ್ರಿಗಳ ಬೆಲೆ ಏರಿಕೆಯನ್ನು ಖಂಡಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಮತ್ತು ಪಡುಬಿದ್ರಿ ಜಿ.ಪಂ. ವ್ಯಾಪ್ತಿಯ ಕಾಂಗ್ರೆಸ್ ಉಪ ಸಮಿತಿಗಳ ಆಶ್ರಯದಲ್ಲಿ ಬುಧವಾರ ಸಂಜೆ ಪಂಜಿನ ಮೆರವಣಿಗೆ ನಡೆಯಿತು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಧರ್ಮದ ಹೆಸರಲ್ಲಿ ಅಕಾರಕ್ಕೆ ಬಂದ ಬಿಜೆಪಿ ಸರಕಾರವ ಧರ್ಮವಿರೋಧಿ ಕೃತ್ಯಗಳನ್ನು ನಡೆಸುವ ಮೂಲಕ ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತಿದೆ. ಅದರ ವಿರುದ್ಧ ಕಾಂಗ್ರೆಸ್ ಪಕ್ಷವು ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದು ಸರಕಾರ ಇನ್ನೂ ಸ್ಪಂಧಿಸದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಪಡುಬಿದ್ರಿ ಬೀಡು ಗರಡಿ ಬಳಿಯಿಂದ ಪಡುಬಿದ್ರಿ ದೇವಳ ಮೂಲಕ ಪಸ್ಸು ನಿಲ್ದಾಣ ತನಕ ಪಂಜಿನ ಮೆರವಣಿಗೆ ನಡೆಸಿದ ಬಳಿಕ ನವರಂಗ್ ಹೋಟೆಲ್ ಮುಂಭಾಗ ಬೃಹತ್ ಪ್ರತಿಭಟನಾ ಸಭೆ ನಡೆಸಿದರು.
ಸಾಮಾಜಿಕ ಕಾರ್ಯಕರ್ತ ಹಾಗೂ ವಾಗ್ಮಿ ಎಮ್.ಜಿ. ಹೆಗ್ಡೆ ದಿಕ್ಸೂಚಿ ಭಾಷಣಗೈದರು.
ಇದನ್ನೂ ಓದಿ : ಹಾನಗಲ್ಲ ಉಪಚುನಾವಣೆ| ಟಿಕೆಟ್ ಪಡೆಯಲು ಆಕಾಂಕ್ಷಿಗಳ ಪೈಪೋಟಿ
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಕೆಪಿಸಿಸಿ ಸಂಯೋಜಕ ನವೀನ್ ಚಂದ್ರ ಜೆ.ಶೆಟ್ಟಿ, ಕಾಂಗ್ರೆಸ್ ಮುಖಂಡ ಡಾ.ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಸರ್ಫುದ್ದೀನ್ ಶೇಖ್, ಮುಖಂಡರುಗಳಾದ ಗಣೇಶ್ ಕೋಟ್ಯಾನ್, ಸುರ್ ಕರ್ಕೇರ, ಜಿತೇಂದ್ರ ಫುರ್ಟಾಡೋ, ನವೀನ್ ಎನ್.ಶೆಟ್ಟಿ, ವೈ.ಸುರ್ ಕುಮಾರ್, ದೀಪಕ್ ಎರ್ಮಾಳ್, ವೈ.ಸುಕುಮಾರ್, ಅಬ್ದುಲ್ ಅಜೀಜ್ ಹೆಜ್ಮಾಡಿ, ದಿನೇಶ್ ಕೋಟ್ಯಾನ್, ಯು.ಸಿ.ಶೇಖಬ್ಬ, ಸುಭಾಷ್ ಸಾಲ್ಯಾನ್, ಅಶೋಕ್ ಸಾಲ್ಯಾನ್, ಶಾಂತಲತಾ ಶೆಟ್ಟಿ, ಅಶ್ವಿನಿ, ಶೀನ ಪೂಜಾರಿ, ಕರುಣಾಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.