ಬೈಲಹೊಂಗಲ: ತಾಲೂಕಿನ ನೇಸರಗಿ ಗ್ರಾಮದ ಬಾಗಲಕೋಟೆ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ನೇಸರಗಿ ಬ್ಲಾಕ್ ಕಾಂಗ್ರೆಸ್ ಘಟಕದಿಂದ ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಜಿ.ಪಂ ಸದಸ್ಯ ನಿಂಗಪ್ಪ ಅರಕೇರಿ ಮಾತನಾಡಿ, ಕೊರೊನಾದಂತಹ ಸಂದಿಗ್ಧ ಸ್ಥಿತಿಯಲ್ಲಿ ಸಾರ್ವಜನಿಕರಿಗೆ ಸಹಾಯ ಮಾಡುವ ಬದಲಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದರ ಮೂಲಕ ಗಾಯದ ಮೇಲೆ ಬರೆ ಹಾಕುವ ಕೆಲಸಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈ ಹಾಕಿವೆ ಎಂದು ಆರೋಪಿಸಿದರು.
ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ, ಜಿ.ಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಮಾತನಾಡಿ, ಪೆಟ್ರೋಲ್, ಡೀಸೆಲ್, ಗ್ಯಾಸ್, ಅಡುಗೆ ಎಣ್ಣೆ, ವಿದ್ಯುತ್ ಬಿಲ್ ಹೆಚ್ಚಳ ಹೀಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದನ್ನು ಬಿಟ್ಟು, ರಾಜ್ಯಕ್ಕೆ ಹತ್ತು ಹಲವು ಯೋಜನೆ (ಭಾಗ್ಯ) ಗಳನ್ನು ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೆ ಜನಪರ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದರು.
ಮುಖಂಡರಾದ ಶಿವನಗೌಡ ಪಾಟೀಲ, ಬಸವರಾಜ ಚಿಕ್ಕನಗೌಡ್ರ, ಸುರೇಶ ಖಂಡ್ರಿ, ಮಹಾಂತೇಶ ಸತ್ತಿಗೇರಿ, ವಿನಾಯಕ ಮಾಸ್ತಮರ್ಡಿ, ಸುರೇಶ ಅಗಸಿಮನಿ, ಸುಯಲ್ ಮೊಕಾಶಿ, ಗ್ರಾ.ಪಂ ಸದಸ್ಯರಾದ ಕಾಸೀಮ ಜಮಾದಾರ, ರಾಜು ಕಡಕೋಳ, ಮಂಜು ಹೊಸಮನಿ, ಸಿದ್ದಪ್ಪ ಆಡಿನ, ಮಲ್ಲಪ್ಪ ತಿಗಡಿ, ಮುದಕಪ್ಪ ಈಳಗೇರಿ, ಮಹಿಳಾ ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನಿರ್ಮಲಾ ನಾಯ್ಕರ, ಬಸಪ್ಪ ನಾಯ್ಕರ, ಮಾರುತಿ ಮಿಜ್ಜಿ, ಬಾಬು ಹೊಸಮನಿ, ಭೀಮಶಿ ಮುತ್ತೆಣ್ಣವರ, ವರ್ಧಮಾನ ಮುತ್ತಲಮರಿ, ಮಾನಪ್ಪ ಜುಟ್ಟಣ್ಣವರ, ಬಸವಣ್ಣ ಚಿಕ್ಕೊಪ್ಪ, ಮಲ್ಲಪ್ಪ ದಂಡಾಪುರ, ಸುರೇಶ ರಾಮಣ್ಣವರ, ಗಜಾನನ ಮಾದಮ್ಮಗೇರಿ, ಮಂಜುನಾಥ ಮದೆನ್ನವರ ಇನ್ನಿತರರು ಉಪಸ್ಥಿತರಿದ್ದರು.