Advertisement
ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಯಾಗಬಾರದೆಂಬ ಉದ್ದೇಶದಿಂದ ಬಲವಂತದ ಬಂದ್ ಮಾಡುವುದಿಲ್ಲ. ಬಸ್ ಬಂದ್ ಮಾಡುವುದಿಲ್ಲ. ಅಂಗಡಿ, ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ವಾಗಿ ಮುಚ್ಚುವಂತೆ ಕರೆ ನೀಡಿದ್ದೇವೆ. ನಗರದಲ್ಲಿರುವ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸ ಲಾಗುವುದು ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಬಿಜೆಪಿ ಸರಕಾರದ ಶೇ.40 ಕಮಿಷನ್ ದೇಶದಾದ್ಯಂತ ಸದ್ದು ಮಾಡುತ್ತಿದೆ. ಆದರೆ ಮುಖ್ಯಮಂತ್ರಿ ಯವರು ಪುರಾವೆ ಕೇಳುತ್ತಿದ್ದಾರೆ. ತನಿಖಾಧಿಕಾರಿಗಳನ್ನು ನೇಮಿಸಿದರೆ ಅವರಿಗೆ ಪುರಾವೆ ಕೊಡಬಹುದು. ಪಿಎಸ್‌ಐ, ಅಧ್ಯಾಪಕರು, ಮೆಸ್ಕಾಂ ಅಧಿಕಾರಿಗಳು, ವೈಸ್ ಚಾನ್ಸಲರ್ ನೇಮಕದಲ್ಲಿ ಭ್ರಷಾcಚಾರ ಬೆಳಕಿಗೆ ಬಂದಿದೆ. ಮಾಡಾಳು ಪ್ರಶಾಂತ್ ಭ್ರಷ್ಟಾಚಾರ ಬೆಳಕಿಗೆ ಬಂದಿದೆ. ನಾಲ್ಕು ವರ್ಷಗಳಲ್ಲಿ ರಾಜ್ಯದ ಸಾಲ ದ್ವಿಗುಣವಾಗಿದೆ. ಬಿಜೆಪಿಗೆ ಮುಂದೆ ವಿಜಯೋತ್ಸವ ಮಾಡುವ ಅವಕಾಶ ಇಲ್ಲ. ಹಾಗಾಗಿ ವಿಜಯಸಂಕಲ್ಪ ಯಾತ್ರೆ ಮಾಡುತ್ತಿದೆ. ಬಿಜೆಪಿಯವರಿಗೆ ಇನ್ನು ಎರಡು ತಿಂಗಳ ಅವಕಾಶವಿದೆ. ಧಮ್ ಇದ್ದರೆ ಸಿದ್ಧರಾಮಯ್ಯ ಅವರ ವಿರುದ್ಧ ತನಿಖೆ ನಡೆಸಲಿ ಎಂದು ಹರೀಶ್ ಕುಮಾರ್ ಹೇಳಿದರು. ಗ್ಯಾರಂಟಿಗೆ ಆಧಾರ್ ಕೇಳಿಲ್ಲ
“ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಸಂದರ್ಭ ಆಧಾರ್ ಕಾರ್ಡ್ ಕೇಳಿದೆ. ಇದರಿಂದ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಆತಂಕವಿದೆ’ ಎಂದು ಶಾಸಕರು ಹೇಳಿದ್ದಾರೆ. ಆದರೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡುವಾಗ ಆಧಾರ್ ಕಾರ್ಡ್ ಕೇಳಿಲ್ಲ. ರೇಷನ್ ಕಾರ್ಡ್ ಮಾತ್ರ ಕೇಳಿದೆ. ಒಂದು ವೇಳೆ ಆಧಾರ್ ಕಾರ್ಡ್ ಕೇಳಿದ್ದರೂ ಅದರಿಂದ ವೈಯಕ್ತಿಕ ಮಾಹಿತಿ ಸೋರಿಕೆಯಾಗುವುದಿಲ್ಲ. ಕಾಂಗ್ರೆಸ್‌ನ ಗ್ಯಾರಂಟಿಗಳಿಂದಾಗಿ ಬಿಜೆಪಿ ಹತಾಶವಾಗಿ ಅಪಪ್ರಚಾರ ಮಾಡುತ್ತಿದೆ ಎಂದು ಹರೀಶ್ ಕುಮಾರ್ ಹೇಳಿದರು.
Related Articles
Advertisement