Advertisement

15 ಕ್ಷೇತ್ರ ಸಂಭಾವ್ಯರು:ಮಾ.11ರ ಸಭೆಯಲ್ಲಿ ಕಾಂಗ್ರೆಸ್‌ ಪಟ್ಟಿ ಅಂತಿಮ

12:30 AM Mar 08, 2019 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆಗೆ ಸಿದ್ಧತೆ ಚುರುಕುಗೊಳಿಸಿರುವ ಕಾಂಗ್ರೆಸ್‌ ರಾಜ್ಯದ 15 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದೆ. ಗುರುವಾರ ನಡೆದ ರಾಜ್ಯ ಕಾಂಗ್ರೆಸ್‌ ಚುನಾವಣ ಸಮಿತಿ ಸಭೆಯಲ್ಲಿ ಹಾಲಿ ಇರುವ ಜೆಡಿಎಸ್‌ನ ಎರಡು, ಶಿವಮೊಗ್ಗ ಮತ್ತು ಕಾಂಗ್ರೆಸ್‌ನ 10 ಸಂಸದರ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 15 ಕ್ಷೇತ್ರಗಳಿಗೆ ಸಂಭಾವ್ಯರ ಪಟ್ಟಿ ಸಿದ್ಧ ಮಾಡಲಾಗಿದೆ. ಇದನ್ನು ಹೈಕಮಾಂಡ್‌ಗೆ ಕಳುಹಿಸಿಕೊಡಲಿದ್ದು, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ನೇತೃತ್ವದ ಸ್ಕ್ರೀನಿಂಗ್‌ ಕಮಿಟಿ ಪರಿಶೀಲನೆ ನಡೆಸಲಿದೆ. 

Advertisement

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಮಾ. 11ರಂದು ನಡೆಯಲಿರುವ ಕೇಂದ್ರ ಚುನಾವಣ ಸಮಿತಿ (ಸಿಇಸಿ) ಸಭೆಯಲ್ಲಿ ಈ ಪಟ್ಟಿ ಅಂತಿಮ ಗೊಳ್ಳಲಿದೆ. ಜೆಡಿಎಸ್‌ ನಾಯಕರ ಜತೆ ಚರ್ಚಿಸಿ ಸೀಟು ಹೊಂದಾಣಿಕೆ ಅಂತಿಮಗೊಂಡ ಬಳಿಕವೇ ಸಿಇಸಿ ಸಭೆ ನಡೆಯಲಿದೆ. 

ಚುನಾವಣ ಸಮಿತಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್‌, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ್‌ ಸಹಿತ ಹಿರಿಯ ನಾಯಕರು ಮತ್ತು ಮುಂಚೂಣಿ ಘಟಕಗಳ ಅಧ್ಯಕ್ಷರು ಪಾಲ್ಗೊಂಡಿದ್ದರು. 

ಜೆಡಿಎಸ್‌ಗೆ ಹೆಚ್ಚು  ಕ್ಷೇತ್ರ ಬೇಡ
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಹೆಚ್ಚು ಕ್ಷೇತ್ರಗಳನ್ನು ಬಿಟ್ಟು ಕೊಡುವುದರಿಂದ ಭವಿಷ್ಯದಲ್ಲಿ ಕಾಂಗ್ರೆಸ್‌ಗೆ ನಷ್ಟವುಂಟಾಗಲಿದೆ. ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳಲಾಗಿದೆಯೇ ಹೊರತು ಜೆಡಿಎಸ್‌ನ್ನು ಉದ್ಧಾರ ಮಾಡಲು ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹಾಲಿ ಕ್ಷೇತ್ರ: ಹೈಕಮಾಂಡ್‌ ನಿರ್ಧಾರ 
ಕಾಂಗ್ರೆಸ್‌ನ ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಬಿಟ್ಟುಕೊಡು ವಂತೆ ಜೆಡಿಎಸ್‌ ಬೇಡಿಕೆ ಇಟ್ಟಿರುವುದರಿಂದ ಆ ಬಗ್ಗೆ ಹೈಕಮಾಂಡ್‌ ನಿರ್ಧಾರಕ್ಕೆ ಬಿಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದಕ್ಕಿಂತ ಮೊದಲು ಅವರ ಕಾರ್ಯವೈಖರಿ ಮತ್ತು ಸಾಧನೆಯ ಪಟ್ಟಿ ತಯಾರಿಸಲು ನಿರ್ಧರಿಸಲಾಗಿದೆ.

Advertisement

ಸಂಭಾವ್ಯ ಅಭ್ಯರ್ಥಿಗಳು
ದಕ್ಷಿಣ ಕನ್ನಡ: ರಮಾನಾಥ ರೈ, ವಿನಯ ಕುಮಾರ್‌ ಸೊರಕೆ, ಬಿ.ಕೆ. ಹರಿಪ್ರಸಾದ್‌
ಉಡುಪಿ-ಚಿಕ್ಕಮಗಳೂರು: ಪ್ರಮೋದ್‌ ಮಧ್ವರಾಜ್‌, ಡಾ| ವಿಜಯ್‌ ಕುಮಾರ್‌ 
ಬೀದರ್‌: ಈಶ್ವರ್‌ ಖಂಡ್ರೆ, ವಿಜಯ್‌ ಸಿಂಗ್‌, ಅಯಾಜ್‌ ಖಾನ್‌ 
ಬಾಗಲಕೋಟೆ: ಬಾಯಕ್ಕ ಮೇಟಿ, ವೀಣಾ ಕಾಶಪ್ಪನವರ್‌, ಅಜಯ್‌ಕುಮಾರ್‌
ವಿಜಯಪುರ: ರಾಜು ಅಲಗೂರು, ಪ್ರಕಾಶ್‌ ರಾಠೊಡ್‌, ಶಿವರಾಜ್‌ ತಂಗಡಗಿ
ಕೊಪ್ಪಳ: ಬಸನಗೌಡ ಬಾದರ್ಲಿ, ಬಸವರಾಜ್‌ ಹಿಟ್ನಾಳ್‌, ಕೆ.ವಿರೂಪಾಕ್ಷಪ್ಪ
ಬೆಳಗಾವಿ: ಅಂಜಲಿ ನಿಂಬಾಳ್ಕರ್‌, ಸತೀಶ್‌/ರಮೇಶ್‌ ಜಾರಕಿಹೊಳಿ, ಚೆನ್ನರಾಜ್‌
ಧಾರವಾಡ: ವಿನಯ ಕುಲಕರ್ಣಿ, ಶಾಖೀರ್‌ ಸನದಿ, ವೀರಣ್ಣ  ಮತ್ತಿಕಟ್ಟಿ , ಅನಿಲ್‌ಕುಮಾರ್‌ 
ಹಾವೇರಿ: ಬಸವರಾಜ್‌, ಸಲೀಂ ಅಹಮದ್‌, ಡಿ.ಆರ್‌. ಪಾಟೀಲ್‌, ನಂಜಯ್ಯನಮಠ
ದಾವಣಗೆರೆ: ಎಸ್‌.ಎಸ್‌. ಮಲ್ಲಿಕಾರ್ಜುನ, ಎಚ್‌.ಎಂ. ರೇವಣ್ಣ
ಉತ್ತರ ಕನ್ನಡ: ಪ್ರಶಾಂತ್‌ ದೇಶಪಾಂಡೆ, ನಿವೇದಿತ್‌ ಆಳ್ವ, ಭೀಮಣ್ಣ ನಾಯ್ಕ
ಬೆಂಗಳೂರು ಕೇಂದ್ರ: ರಿಜ್ವಾನ್‌, ಬಿ.ಕೆ. ಹರಿ ಪ್ರಸಾದ್‌, ರೋಶನ್‌ ಬೇಗ್‌, ಸಾಂಗ್ಲಿಯಾನ
ಬೆಂಗಳೂರು ದಕ್ಷಿಣ: ಪ್ರಿಯಾ ಕೃಷ್ಣ, ರಾಮಲಿಂಗಾ ರೆಡ್ಡಿ
ಬೆಂಗಳೂರು ಉತ್ತರ: ನಾರಾಯಣ ಸ್ವಾಮಿ, ಬಿ.ಎಲ್‌. ಶಂಕರ್‌, ರಾಜಕುಮಾರ್‌, ಶ್ರೀನಿವಾಸ್‌
ಮೈಸೂರು: ವಿಜಯ್‌ಶಂಕರ್‌, ಸೂರಜ್‌ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next